ದಾವಣಗೆರೆ ಏ.22
ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ
ತಂಬಾಕು ನಿಯಂತ್ರಣ ಕೋಶ, ದಾವಣಗೆರೆ ಇವರ ಆದೇಶದಂತೆ
ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್-19 ರೋಗವು ಹತೋಟಿಗೆ
ಬರುವವರೆಗೂ ದಾವಣಗೆರೆ ಜಿಲ್ಲೆಯಾದ್ಯಂತ ಪಾನ್ ಮಸಾಲ,
ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ಅಂಗಡಿಗಳಲ್ಲಿ
ಮಾರಾಟ ಮತ್ತು ಬಳಕೆ ಮಾಡುವುದು ನಿಷೇಧಿಸಲಾಗಿದೆ.
ಈ ಹಿನ್ನೆಲೆಯಲ್ಲಿ ದಾವಣಗೆರೆ ನಗರದಲ್ಲಿ ತಂಬಾಕು
ನಿಯಂತ್ರಣ ಕೋಶ ಮತ್ತು ಮಹಾನಗರಪಾಲಿಕೆಯ
ವತಿಯಿಂದ ನಿಷೇಧವಿದ್ದರೂ ಅಕ್ರಮವಾಗಿ ತಂಬಾಕು
ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ
ದಾಳಿ ಮಾಡಿ ಮಾಲೀಕರಿಂದ ತಂಬಾಕು ಹಾಗೂ ಅದರ
ಉತ್ಪನ್ನಗಳನ್ನು ವಶಪಡಿಸಿಕೊಂಡು ಜಿಲ್ಲಾ ತಂಬಾಕು
ನಿಯಂತ್ರಣ ಕೋಶದ ನೋಡಲ್ ಅಧಿಕಾರಿಯಾದ ಅಪರ
ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಇವರಿಗೆ ಹಸ್ತಾಂತರಿಸಲಾಯಿತು.
ಈ ವೇಳೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ
ತಂಡದವರು ಹಾಗೂ ಪಾಲಿಕೆ ಆರೋಗ್ಯ ನಿರೀಕ್ಷಕರು
ಹಾಜರಿದ್ದರು.