ಆಡಳಿತದೊಂದಿಗೆ ಕೈ ಜೋಡಿಸಿ ಕೊರೊನಾ
ನಿರ್ಮೂಲನೆಗೆಮನೆಯಲ್ಲೇ ನಮಾಜ್ ಮಾಡೋಣ
ಆಕಾಶಯಾನಿಗರಿಂದದೂರವಿದ್ದು ದೇಶ ರಕ್ಷಿಸೋಣ
ದೇಶದ ಆಡಳಿತ ಯಂತ್ರ ಸಂಪೂರ್ಣ ಕೊರೊನಾ ವೈರಾಣು
ಹರಡುವುದನ್ನು ತಡೆಯಲು ಹಗಲಿರುಳು ಶ್ರಮಿಸುತ್ತಿದೆ.
ಪೊಲೀಸ್ ಇಲಾಖೆ, ಅರೆಸೇನಾಪಡೆ, ಆರೋಗ್ಯ ಇಲಾಖೆ ವೈದ್ಯರು,
ಸ್ವಯಂ ಸೇವಾ ಸಂಘಟನೆ ಕಾರ್ಯಕರ್ತರು, ನಾಗರಿಕ ಸೇವಾ
ಸಂಘಟನೆಗಳುನಿರಂತರ ಪರಿಶ್ರಮದಿಂದ ಜನ ಸೇವೆಯಲ್ಲಿ
ತೊಡಗಿದ್ದಾರೆ.ಅವರೆಲ್ಲರಿಗೂ ನನ್ನ ಸಲಾಂ.
ಕೋವಿಡ್ 19 ಸಮಾಜ, ಸಂಬಂಧಬಾಂಧವ್ಯ ಲಾಭ ನಷ್ಟ
ನೋಡಿಅಂಟಿಕೊಳ್ಳುವುದಿಲ್ಲ. ಅಂಟಿಕೊಂಡ ಮೇಲೆ ಬಿಟ್ಟು
ಹೋಗುವುದಿಲ್ಲ.ಅಂಟಿಕೊಂಡಿರುವವರ ಜೀವವನ್ನೆ ಒಯ್ಯುತ್ತದೆ
ಎಂದು ವಿಶ್ವ ಮಟ್ಟದಲ್ಲಿ ವೈದ್ಯಕೀಯ ತಜ್ಞರು ಸಾರಿ ಸಾರಿ
ಹೇಳುತ್ತಿದ್ದರೂ, ಕೆಲವು ಸಮಾಜ ಘಾತುಕ ದುಷ್ಕರ್ಮಿಗಳು
ವೈರಾಣುತಮ್ಮ ಮೈಯಲ್ಲಿರುವ ಆಸ್ತಿಯೆಂಬಂತೆ ಅದನ್ನು ರಕ್ಷಿಸಿ
ವ್ಯಾಪಿಸುವನಿಟ್ಟಿನಲ್ಲಿಮನೋಭಾವನೆ ಹೊಂದಿರುವುದು, ಕೆಲ
ದುಷ್ಕರ್ಮಿಗಳ ನಡತೆಯಿಂದ ಇಡೀ ಸಮುದಾಯ ದೂಷಣೆಗೆ
ಗುರಿಮಾಡುತ್ತಿರುವುದು ಎರಡೂ ಸರಿಯಲ್ಲ.
ಅಮಾಯಕರು ಮಾಡಿದ್ದೇನು? :ತಪ್ಪು ಮಾಡದವರು
ನೂರಾರು ಕಿ.ಮೀ ಗಟ್ಟಲೆ ನಡೆದಾಡಿ ಶಿಕ್ಷೆ ಅನುಭವಿಸಿ, ಪ್ರಾಣ
ಬಿಟ್ಟರು.ಉಪಚಾರ ನೀಡಿದ ವೈದ್ಯರು ಕಣ್ಣಮುಂದೆಸಾವಿನಮನೆ
ಸೇರಿದರು.ಪೊಲೀಸ್ ಅಧಿಕಾರಿ ಕೈ ಕಡಿಸಿಕೊಂಡರು.ಮಗುವಿನಿಂದ

ತಾಯಿ ದೂರ ಉಳಿದು ಜನರಿಗಾಗಿ ದುಡಿದರು. ಅದರ
ಮಧ್ಯೆಮೆರೆದಾಡುತ್ತಿದ್ದವರು ಮನೆ ಸೇರಿ ಸಂಬಂಧಗಳ
ಬೆಸುಗೆಯಲ್ಲಿ ಮಿಲನವಾದರು.ಅಮಾಯಕರು ಕೈ ಗೆ
ಕೆಲಸವಿಲ್ಲದೆ ಹೊಟ್ಟೆಗೆ ಅನ್ನ ನೀರಿಲ್ಲದೆ ಪರಿತಪಿಸಿದರು. ಹಣ
ಇದ್ದರೂ ಅಗತ್ಯ ವಸ್ತು ಸಿಗದೆ ಪರದಾಡುವ ಸಮಯ
ಎದುರಾಯಿತು.
ಇದಲ್ಲವೆ ಐಕ್ಯತೆ! :ಇಂತೆಲ್ಲ ಸಂಕಷ್ಟಗಳ ನಡುವೆ ಜನರು
ಸರ್ಕಾರಕ್ಕೆ ಸಮನಾಗಿ ನೆರವಾದರು. ಜನ ಒಟ್ಟಾಗಿ ಸೇರಬೇಡಿ,
ಮನೆಮನೆಗೆ ಊಟ ತಲುಪಿಸುತ್ತೇವೆ ಎಂದು ಸೇವೆ
ಮಾಡಿದರು.ಇದುವೇ ಭಾರತೀಯರಐಕ್ಯತಾ ಬಾಂಧವ್ಯದ
ಬದುಕು ಎನ್ನುವುದನ್ನು ಮಾಡಿ ತೋರಿಸಿದ ದಿನಗಳಲ್ಲಿ ನಾವು
ಸಾಗುತ್ತಿದ್ದೇವೆ. ಸ್ವತಹ ನೋಡಿದ ಅಥವಾ ಅನುಭವಿಸಿದ ನಮಗೆ
ಕೊರೊನಾ ವೈರಸ್ ಮಾನವ ಬದುಕಿನ ನಿಜಾರ್ಥ ಕಲಿಸಿದ ಗುರುವೂ
ಆಗಿದೆ.
ವ್ಯಾಪಿಸುವ ಕೊರೊನಾಮಾರಣಾಂತಿಕ ವೈರಸ್ ಹರಡದಂತೆ
ಮೆಟ್ಟಿನಿಂತು, ದುಷ್ಕರ್ಮಿಗಳನ್ನು ಮಟ್ಟಹಾಕಲು ಸರ್ಕಾರ
ಕಟಿಬದ್ಧವಾಗಿರುವುದಾಗಿ ಪದೇ ಪದೇ
ಹೇಳುತ್ತಿದ್ದರೂ,ಅಸ್ವಸ್ಥ(ಭಂಡ) ಮಾನಸಿಕ ದುರುಳರು
ಅರಿತುಕೊಂಡು ಸರ್ಕಾರದ ನಿಯಮಾವಳಿ ಪಾಲಿಸದಿರುವುದು
ಅತ್ಯಂತ ಬೇಸರದ ಸಂಗತಿಯಾಗಿದೆ. ಆದರೂ ಅಂತಹವರನ್ನು
ಎಡೆಮುರಿಕಟ್ಟಿ ಮೂಲೆಗೆಸೆಯುವಷ್ಟು ನಿರ್ದಾಕ್ಷಿಣ್ಯತೆ
ತೋರುವ ಹಂತಕ್ಕೆ ಸರ್ಕಾರವನ್ನು ಸಿಟ್ಟಿಗೇಳಿಸುವುದೂ
ಸರಿಯಲ್ಲ ಎನ್ನುವುದು ನನ್ನ ಪ್ರಾರ್ಥನೆ.
ಕೊರೊನಾ ಆತಂಕದ ನಡುವೆ ಜಗತ್ತು, ದೇಶ ನಲುಗಿರುವಾಗ
ಕೆಲ ದುಷ್ಕರ್ಮಿಗಳ ವರ್ತನೆಗೆ ಧಿಕ್ಕಾರ
ವ್ಯಕ್ತಪಡಿಸುತ್ತಾಸರ್ಕಾರಗಳ ನಿಯಮಗಳನ್ನು ಗೌರವಿಸಿ
ಪಾಲಿಸುಲು ಒತ್ತಾಸೆ ಹೇರುತ್ತಾ, ತಮ್ಮ ಜೀವ ರಕ್ಷಣೆ,
ಕುಟುಂಬದವರ ಕ್ಷೇಮ ಪಾಲನೆ, ಸಮಾಜ ಹಾಗೂ ದೇಶದ
ಹಿತರಕ್ಷಣೆಗಾಗಿ ಕಂಕಣಬದ್ಧರಾಗುವಂತೆ ಮನವಿ
ಮಾಡುತ್ತೇನೆ.
ಆಕಾಶ ಮಾರ್ಗದವರಿಂದ :ಜನತಾ ಕಫ್ರ್ಯೂ ದಿನದ ಏಕಕಾಲದ
ಚಪ್ಪಾಳೆಯಿಂದ ಮತ್ತೆ ಸದೃಢವಾದ ರಾಷ್ಟ್ರೀಯ ಐಕ್ಯತೆ, 21
ದಿನಗಳ ಕಾಲದ ದೇಶಾದ್ಯಂತ ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಚ್ಚಿದ

ಏಕಕಾಲದ ದೀಪದ(ಜ್ಯೋತಿ)ಬೆಳಕಿನ ಮುಂದೆ ಆವರಿಸಿದ್ದ
ಕತ್ತಲು ಮರೆಯಾಗಲೆಂಬ ಸದ್ಭಾವನೆಯಿಂದ ಸರ್ವರೂ
ಸೌಖ್ಯದಿಂದಿರುವಂತೆ ಸಹೋದರತ್ವದ ಬಾಂಧವ್ಯ ತೋರಲು
ಪ್ರಾರ್ಥಿಸಲಾಯಿತು. ಅಂತರಾಷ್ಟ್ರ ಮಟ್ಟದ ಸಂಪರ್ಕ, ಸಂಬಂಧ
ಹೊಂದಿ ಆಕಾಶ ಮಾರ್ಗ(ವಿಮಾನಯಾನ)ದಲ್ಲಿ ಓಡಾಡುವಷ್ಟು
ಉಳ್ಳವರಿಂದ ಕೊರೊನಾ ವೈರಾಣು ಸೋಂಕು ನಮ್ಮ ದೇಶಕ್ಕೂ
ಬಂದಿತು ಎಂಬುದು ಎಲ್ಲರಿಗೂ ತಿಳಿದ ವಿಷಯ.
ಸರ್ವಜನಾಂಗದ ಶಾಂತಿಯ ತೋಟವಾಗಿರುವ ನಮ್ಮ ಭಾರತಕ್ಕೂ
ಸೋಂಕಿರುವ ಈ ವೈರಾಣುವ್ಯಾಪಿಸುವುದನ್ನು ನಿಯಂತ್ರಿಸುವಲ್ಲಿ
ಯಶಸಿನ ಮಾರ್ಗ ಸಿಕ್ಕಿತ್ತು. ಈ ಸಂದರ್ಭದಲ್ಲಿ ದೆಹಲಿಯ
ನಿಜಾಮುದ್ದಿನ್ ಸಮಾವೇಶದಸಂಗಮವು ಸೋಂಕು ಹರಡುವ
ಸರಪಳಿಗೆಮತ್ತೆ ಬೆಸುಗೆ ಹಾಕಿತೆಂದೇ ಹೇಳಬೇಕಾಗುತ್ತದೆ.
ಈ ಸಮಾವೇಶದಲ್ಲಿ ಸಂಗಮಗೊಂಡವರು ಬಹುತೇಕ
ಉಳ್ಳವರು ಅಂತರಾಷ್ಟ್ರೀಯ ಮಟ್ಟದ ಆರ್ಥಿಕತೆಗೆ
ಹೋಲುವವರು.
ಜೀವ ರಕ್ಷಕ ಆರಕ್ಷಕರು :ನಾಗರಿಕ ಸಮಾಜದ ಇತ್ತೀಚಿನ
ದಿನಗಳ ನಡವಳಿಕೆಯಲ್ಲಿ
ಪೊಲೀಸ(ಆರಕ್ಷಕರು)ರೆಂದರೆನಂಬಿಕೆ ಕಳೆದುಕೊಳ್ಳುವ
ವಾತಾವರಣ ನಿರ್ಮಾಣವಾಗುತ್ತಿತ್ತು. ಅಂತಹ ಸಂದಿಗ್ಧತೆಯಲ್ಲಿ
ದೇಶಕ್ಕೆ ವಕ್ಕರಿಸಿದ ಕೊರಾನಾ ಮಹಾಮಾರಿ ಹರಡುವುದನ್ನು
ನಿಯಂತ್ರಸಿಲು ಮೊದಲು ಕರ್ತವ್ಯಕ್ಕೆ ನಿಂತÀರು. ಆ
ರಕ್ಷಕರಾಗಿದ್ದವರು ಜೀವ ರಕ್ಷಕರಾದರು.ಸರಕಾರಿ ಆಸ್ಪತ್ರೆ
ಹಾಗೂ ವೈದ್ಯರೆಂದರೆ ಯಮಸ ಸ್ವರೂಪಿ ಎಂಬ ತಾತ್ಸಾರಕ್ಕೆ
ಗುರಿಯಾಗಿದ್ದ ವೈದ್ಯರು ಮಹಾಮಾರಿ ವೈರಾಣು ಸೋಂಕಿತ
ಶಂಕಾಸ್ಪದ ವ್ಯಕ್ತಿಗಳ ತಪಾಸಣೆ ಮಾಡಿ, ಚಿಕಿತ್ಸೆ ನೀಡುತ್ತಾ
ಉಪಚರಿಸಿದ ಆಸ್ಪತ್ರೆಗಳು ದೇವಾಲಯಗಳಾಗಿ, ವೈದ್ಯರು
ದೇವರಾಂತೆ ಕಾಣಲಾರಂಭಿಸಿದರು.
ಲಾಕ್‍ಡೌನ್ ಸಂದರ್ಭದ ಮೊದಲ ದಿನಗಳಲ್ಲಿ
ಜತೆಗೂಡುತ್ತಿದ್ದವರಲ್ಲಿ ಯಾರು ಸೋಂಕಿತರು ಎಂಬುದನ್ನು
ಲೆಕ್ಕಿಸದೆಪೊಲೀಸರು ಲಾಠಿ ಹಿಡಿದು ಚದುರಿಸಿದರು. ತಿರುಗಿ ಮೇಲೆ
ಬಿದ್ದವರಿಂದ ಒದೆ ತಿಂದರು. ತಮಗೂ ಸೋಂಕು
ತಗುಲಬಹುದೆಂಬ ಭಯ ನಿಟ್ಟರು. ತಮ್ಮ ಮಡದಿ ಮಕ್ಕಳನ್ನು
ಮರೆತು ಕರ್ತವ್ಯ ನಿಷ್ಠ ಮೆರೆದರು. ಸಮೀಪದಿಂದ ಚಿಕಿತ್ಸೆ

ನೀಡಿದರೆ ತಮಗೂ ಸೋಂಕು ಬರುತ್ತದೆಂಬ ಭಯ ಬಿಟ್ಟು
ಎದೆಯೊಡ್ಡಿ ಸೋಂಕಿತ ರೋಗಿಗಳನ್ನು ಅತ್ಯಂತ ನಿಗಾವಹಿಸಿ
ಉಪಚರಿಸಿದ ವೈದ್ಯರು, ದಾದಿಯರು ವೈದ್ಯೋ ನಾರಾಯಣ ಹರಿ ಎಂಬ
ಉಕ್ತಿಗೆ ಮತ್ತೆ ಸಾಕ್ಷಿಯಾದರು. ನಮ್ಮ ಸಹೋದರಿಯರೇ
ಆಗಿರುವ ಆಶಾ ಕಾರ್ಯಕರ್ತೆಯರು ನೆರಳು ನೀರು ಇಲ್ಲದ
ಬೀದಿಗಳಿಗೂ ಭೇಟಿ ನೀಡಿ ಜನ ಸಂಪರ್ಕಿಸಿ ಆರೋಗ್ಯ ಕ್ಷೇಮ ವಿಚಾರಿಸಿ
ಮಾಹಿತಿ ದಾಖಲಿಸಿ ನಮ್ಮನ್ನು ಸುರಕ್ಷಿತವಾಗಿರುವಂತೆ
ಎಚ್ಚರಗೊಳಿಸಿದರು.
ಕಛೇರಿಯಲ್ಲಿ ಕುಳಿತು ಶೀತ ವಾಹನಗಳಲ್ಲಿ ಓಡಾಡಿ ನಾಗರಿಕ
ಆಡಳಿತ ಸೇವೆ ಒದಗಿಸುತ್ತಿದ್ದ ಐಎಎಸ್, ಐಪಿಎಸ್ ಹಂತದ
ಅಧಿಕಾರಿಗಳುಜಿಲ್ಲಾಧಿಕಾರಿ,ಪೊಲೀಸ್ ವರಿಷ್ಠಾಧಿಕಾರಿಗಳೂ ಖುದ್ದಾಗಿ
ಬೀದಿಗಿಳಿದು ಕೈ ಮುಗಿದು ಜನ ಸೇವೆ ಮಾಡಿಅರಿವು
ಮೂಡಿಸಿದರು.ಮಹಿಳಾ ಅಧಿಕಾರಿಗಳು ಕಂಕುಳಲ್ಲಿ ಹಸುಗೂಸು
ಕಟ್ಟಿಕೊಂಡು ಜನಸೇವೆ ಮಾಡಿದರು. ಇಂತಹ ಸನ್ನಿವೇಶದಲ್ಲಿ ಹಿತ
ಕಾಪಾಡುವ ಸೇವಕರು/ಅಧಿಕಾರಿಗಳ ಮೇಲೆ ದುರ್ವರ್ತನೆ
ಮಾಡುವುದು ಸರಿಯೇ ಎಂದು ಯಂತಹ ಅಮಾನುಷರೂ ಸಹ
ನಿಂತು ಯೋಚಿಸಬೇಕು. ರಾಕ್ಷಸಿ ಸ್ವಭಾವ ಬಿಟ್ಟು ನಮಗಾಗಿ
ದುಡಿಯುವವರೊಂದಿಗೆ ಸಹಕರಿಸಬೇಕು.ಇದ್ದು ಸಹಬಾಳ್ವೆ ಮಾಡಿ
ಸತ್ತರೆ ಶ್ರೇಯಸ್ಸು, ದ್ವೇಶ ಭಾಮ ಕೋಮುಡಳ್ಳುರಿ ಸಾಧಿಸಿ
ಸತ್ತರೆ ಪ್ರಯೋಜನ ಯಾರಿಗೆ ?
ಆಡಳಿತ ಯಂತ್ರವು ಕಾಲಕಾಲಕ್ಕೆ ನೀಡುತ್ತಿರುವ
ನಿಯಮಪಾಲಿಸುವುದು ನಮ್ಮ ಆದ್ಯ ಕರ್ತವ್ಯವಾಗಲಿ.
ಮನೆಯಲ್ಲೆ ಇರಿ, ನಿಮಗಾಗಿ ನಾವಿದ್ದೇವೆ ಎಂದವರನ್ನು
ಗೌರವಿಸೋಣ. ರಂಜಾನ್ ರೋಜಾವನ್ನು ಮಾಡುತ್ತಾ ದೇಶದ
ಒಳಿತಿಗೆ ಪ್ರಾರ್ಥನೆ ಮಾಡೋಣ. ಮನೆಯಲ್ಲೆ ನಮಾಜ್ ಮಾಡಿ
ಅಲ್ಲಾನ ಮೊರೆ ಹೋಗೋಣ.
ಮಾರಣಾಂತಿಕ ವೈರಸ್ ಸೋಂಕು ಮನುಕುಲ ವಿನಾಶಕಾರಿ
ಎಂಬುದು ಗೊತ್ತಿದ್ದರೂ ಅದರ ಪರ ನಿಂತಂತೆ
ನಡೆದುಕೊಳ್ಳುತ್ತಿರುವ ಮಂದಿಗೆ ಮತ್ತೊಮ್ಮೆ ಧಿಕ್ಕಾರ.
ತಪ್ಪು ಮಾಡುವರಾರೇ ಆದರೂ ಅವರಿಗೆ ಕಾನೂನಿನನ್ವಯ ಶಿಕ್ಷೆ
ವಿಧಿಸುವುದು ಮಾನವಧರ್ಮ ರಕ್ಷಿಸಿ ಸಂವಿಧಾನ ಪಾಲನೆ
ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯಾಗಲಿ.
ಮನುಕುಲ ಉಳಿಯಲಿ, ದೇಶ ಬೆಳೆಯಲಿ

Leave a Reply

Your email address will not be published. Required fields are marked *