ದಾವಣಗೆರೆ, ಏ.23
ಕೊರೊನಾ ವೈರಸ್ ನಿಯಂತ್ರಿಸಲು ರಾಜ್ಯದಲ್ಲಿ ಲಾಕ್‍ಡೌನ್
ಅವಧಿಯನ್ನು ಮೇ 3 ರವರೆಗೆ ವಿಸ್ತರಿಸಿದ್ದು ಈ ಸಂದರ್ಭದಲ್ಲಿ
ಸರ್ಕಾರ ಕೆಲವು ನಿರ್ಬಂಧಗಳನ್ನು ಸಡಿಲಿಕೆ ಮಾಡಿದೆ. ಆಯ್ದ
ವಲಯಗಳಲ್ಲಿ ಕೆಲವು ಚಟುವಟಿಕೆಗಳಿಗೆ ಅವಕಾಶ
ನೀಡಲಾಗಿದ್ದು, ಜಿಲ್ಲೆಯ ಜನತೆ ಲಾಕ್‍ಡೌನ್ ವೇಳೆ ಸಮರ್ಪಕವಾಗಿ
ನಿಯಮಗಳನ್ನು ಪಾಲಿಸುವ ಮೂಲಕ ಸಹರಿಸಬೇಕೆಂದು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದರು.
ಇಂದು ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ
ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿ ಮಾತನಾಡಿದ
ಅವರು ರಾಜ್ಯ ಸರ್ಕಾರದ ನಿರ್ಬಂಧ ಸಡಿಲಿಕೆಯ
ಮಾರ್ಗಸೂಚಿಗಳ ಮಾಹಿತಿ ನೀಡಿ, ಜಿಲ್ಲೆಗೆ ಈ ಮಾರ್ಗಸೂಚಿಗಳು
ಹೇಗೆ ಅನ್ವಯವಾಗುತ್ತವೆ ಎಂಬ ಬಗ್ಗೆ ವಿವರಣೆ ನೀಡಿದರು.
ಯಾವ ಸೇವೆ ಲಭ್ಯ : ಆರೋಗ್ಯ ವಲಯ- ಆಸ್ಪತ್ರೆಗಳು,
ನರ್ಸಿಂಗ್ ಹೋಮ್ಸ್, ಕ್ಲಿನಿಕ್, ಮೆಡಿಕಲ್ ಶಾಪ್, ಜನೌಷಧಿ
ಕೇಂದ್ರಗಳು ಲ್ಯಾಬ್‍ಗಳು, ಟೆಲಿಮೆಡಿಸಿನ್ ಸೌಲಭ್ಯಗಳು.
ಫಾರ್ಮಾಸಿಟಿಕಲ್‍ಗಳು, ಮೆಡಿಕಲ್ ರೀಸರ್ಚ್ ಲ್ಯಾಬ್‍ಗಳು, ಕೋವಿಡ್
19 ಸಂಶೋಧನೆ ಕೈಗೊಂಡ ಸಂಸ್ಥೆಗಳು. ಪಶು
ಆಸ್ಪತ್ರೆಗಳು, ಡಿಸ್ಪೆನ್ಸರೀಸ್ ಕ್ಲಿನಿಕ್‍ಗಳು, ಚುಚ್ಚುಮದ್ದು
ಮತ್ತು ಔಷಧಿ ಸರಬರಾಜು. ಕೋವಿಡ್ 19 ಕಂಟೈನ್‍ಮೆಂಟ್‍ಗೆ
ನೆರವು ನೀಡುತ್ತಿರುವ ಅಧಿಕೃತ ಖಾಸಗಿ ಸಂಸ್ಥೆಗಳು,
ಹೋಮ್‍ಕೇರ್ ಪ್ರೊವೈಡರ್‍ಗಳು, ರೋಗಪತ್ತೆ. ಔಷಧಿ
ಮತ್ತು ಮೆಡಿಕಲ್ ಆಕ್ಸಿಜನ್ ಮತ್ತು ಅವುಗಳ ಪ್ಯಾಕೇಜಿಂಗ್
ಸಾಮಗ್ರಿಗಳು, ಕಚ್ಚಾ ಸಾಮಗ್ರಿಗಳು.
ವೈದ್ಯಕೀಯ/ಆರೋಗ್ಯ ಮೂಲಸೌಕರ್ಯ ಸೇರಿದಂತೆ
ಆ್ಯಂಬುಲೆನ್ಸ್‍ಗಳ ತಯಾರಿಕೆ. ಎಲ್ಲ
ವೈದ್ಯಕೀಯ/ಪಶವೈದ್ಯಕೀಯ ಸಿಬ್ಬಂದಿಗಳ, ವಿಜ್ಞಾನಿಗಳ,
ಶುಶ್ರೂಷಕರ, ಪ್ಯಾರಾಮೆಡಿಕಲ್, ಲ್ಯಾಬ್ ಟೆಕ್ನೀಷಿಯನ್,

ಮಿಡ್‍ವೈಫ್ಸ್ ಮತ್ತು ಆಂಬುಲೆನ್ಸ್ ಸೇರಿದಂತೆ ಇತರೆ
ವೈದ್ಯಕೀಯ ನೆರವು ಹಾಗೂ ಸೇವೆಗಳ ಅಂತರ್ ರಾಜ್ಯ
ಮತ್ತು ರಾಜ್ಯದೊಳಗಿನ ಚಲನೆಗೆ ಅವಕಾಶ.
ಕೃಷಿ ಚಟುವಟಿಕೆ : ಎಲ್ಲಾ ಕೃಷಿ ಮತ್ತು ತೋಟಗಾರಿಕೆ
ಚಟುವಟಿಕೆಗಳು ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲಿವೆ. ಕೃಷಿ
ವಲಯ- ಕೃಷಿ ಚಟುವಟಿಕೆಗಳು, ಎಪಿಎಂಸಿಗಳು, ಕೃಷಿ
ಉಪಕರಣಗಳ ಅಂಗಡಿಗಳು, ಬೀಜ, ಗೊಬ್ಬರ, ಕ್ರೀಮಿನಾಶಕ
ಉತ್ಪಾದನಾ ಘಟಕಗಳು, ಸಿಹೆಚ್‍ಸಿ, ಹಾರ್ವೆಸ್ಟರ್ ಮತ್ತು ಇತರೆ
ಕೃಷಿ ಮತ್ತು ತೋಟಗಾರಿಕೆ ಯಂತ್ರೋಪಕರಣಗಳು.
ಮೀನುಗಾರಿಕೆ : ಮೀನುಗಾರಿಕೆ ಕೃಷಿ, ಮೀನು ಸಾಕಾಣಿಕೆ,
ನಿರ್ವಹಣೆ, ಪ್ಯಾಕೇಜಿಂಗ್, ಕೋಲ್ಡ್ ಚೈನ್, ಮಾರಾಟ ಮತ್ತು
ಮಾರುಕಟ್ಟೆ.
ಪ್ಲಾಂಟೇಷನ್‍ಗಳು : ಶೇ 50 ರಷ್ಟು ಕಾರ್ಮಿಕರೊಂದಿಗೆ ಟೀ,
ಕಾಫಿ ಮತ್ತು ರಬ್ಬರ್ ಪ್ಲಾಂಟೆಶನ್, ಗೋಡಂಬಿ ಪ್ಲಾಂಟೇಷನ್
ಕೆಲಸ, ಸಂಸ್ಕರಣೆ, ಪ್ಯಾಕೇಜಿಂಗ್ ಮಾರುಟ್ಟೆ.
ಪಶು ಸಂಗೋಪನೆ : ಹಾಲು ಮತ್ತು ಹಾಲಿನ ಉತ್ಪನ್ನದ
ಸಂಗ್ರಹಣೆ, ಸಂಸ್ಕರಣೆ ಜೊತೆ ಸಾರಿಗೆ ಮತ್ತು ಸರಬರಾಜು
ಸರಪಳಿ. ಪೌಲ್ಟ್ರಿ ಫಾರಂಗಳು, ಮೊಟ್ಟೆ ಕೇಂದ್ರಗಳ
ಕಾರ್ಯಚಟುವಟಿಕೆ. ಮೆಕ್ಕೆಜೋಳ ಮತ್ತು ಸೋಯಾ
ಸೇರಿದಂತೆ ಪಶು ಮೇವು ಸರಬರಾಜು. ಗೋಶಾಲೆಗಳ
ಕಾರ್ಯ ನಿರ್ವಹಣೆ.
ಸಾರಿಗೆ ವಲಯ- ಗೂಡ್ಸ್‍ರೈಲು, ಕಾರ್ಗೋ ವಿಮಾನ ಯಾನ,
ಒಳನಾಡು ಜಲ ಸಾರಿಗೆ, ಸರಕು ಸಾಗಾಣೆ ಲಾರಿಗಳು, ಟ್ರಕ್
ಚಾಲಕರು ಹಾಗೂ ಕ್ಲೀನರ್‍ಗಳಿಗೆ ಆಹಾರ ಒದಗಿಸಲು ಪ್ರತಿ 20
ಕಿ.ಮೀ ವ್ಯಾಪ್ತಿಗೆ ಡಾಬಾ(ಪಾರ್ಸೆಲ್). ಟ್ರಕ್/ವಾಹನ ರಿಪೇರಿಗೆ ಅವಕಾಶ.
ಸಿಮೆಂಟ್, ಉಕ್ಕು, ಜಲ್ಲಿ, ಟೈಲ್ಸ್, ಪೈಂಟ್, ಇಟ್ಟಿಗೆ ಮತ್ತು ಟಾರ್
ಸರಬರಾಜಿಗೆ ಟ್ರಾಫಿಕ್ ಅವಕಾಶ.
ಬ್ಯಾಂಕಿಗ್ ವಲಯ- ಬ್ಯಾಂಕ್ ಎಟಿಎಂ, ಸೆಕ್ಯುರಿಟಿ ಏಜೆನ್ಸಿ, ಸೆಬಿ, ವಿಮಾ
ಕಂಪನಿ
ಅಗತ್ಯ ಸರಕುಗಳ ಸರಬರಾಜಿಗೆ ಅವಕಾಶ : ಅಗತ್ಯ
ವಸ್ತುಗಳ ಎಲ್ಲ ಸರಬರಾಜು ಸರಪಳಿಗೆ ಅವಕಾಶ. ಅಗತ್ಯ
ವಸ್ತುಗಳ ಉತ್ಪಾದನೆ, ಸಗಟು ವ್ಯಾಪಾರ, ಕಿರಾಣಿ ಅಂಗಡಿ,
ಮಾಂಸದ ಅಂಗಡಿ, ಕೊರಿಯರ್, ಪಡಿತರ ಅಂಗಡಿಗಳು, ಹಣ್ಣು,
ತರಕಾರಿ, ದಿನಸಿ, ಮಿಲ್ಕ್ ಬೂತ್‍ಗಳು, ಪೌಲ್ಟ್ರಿ, ಮೀನು, ಪಶುಗಳ
ಮೇವು, ಅಂಚೆ, ಇ ಕಾಮರ್ಸ್, ರಸ್ತೆ, ಅತೀ ಸಣ್ಣ ಕೈಗಾರಿಕೆ ಸೇರಿ
ಎಲ್ಲಾ ರೀತಿಯ ಕೈಗಾರಿಕಾ ಉತ್ಪಾದನಾ ವಲಯ, ಕಾಮಗಾರಿ,
ಎಲೆಕ್ಟ್ರೀಷಿಯನ್ಸ್, ಪ್ಲಂಬರ್ಸ್, ಟಿವಿ ರಿಪೇರಿ, ಮೊಟಾರ್ ಮೆಕಾನಿಕ್ಸ್,
ಕಾರ್ಪೆಂಟರ್ಸ್‍ಗಳಿಗೆ ಅವಕಾಶ ನೀಡಲಾಗಿದ್ದು, ಕಡ್ಡಾಯವಾಗಿ
ಸಾಮಾಜಿಕ ಅಂತರ ಕಾಯ್ದುಕೊಂಡು ಈ ಸೇವೆಗಳ

ಕಾರ್ಯಾಚರಣೆಗೆ ಸಮಯದ ನಿರ್ಬಂಧವಿರುವುದಿಲ್ಲ. ಆಹಾರ,
ಅಗತ್ಯ ವಸ್ತುಗಳ ಹೋಮ್ ಡೆಲಿವರಿಗೆ ಒತ್ತು ನೀಡಬೇಕು.
ಸಾಮಾಜಿಕ ವಲಯ- ಅನಾಥಾಶ್ರಮ, ವೃದ್ಧಾಶ್ರಮ, ವೃದ್ಧರು,
ವಿಧವೆಯರು, ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಗೆ
ವ್ಯವಸ್ಥೆ, ಅಂಗನವಾಡಿ ಕೆಂದ್ರಗಳು, ಮಾನಸಿಕ ಆರೋಗ್ಯ
ಕೇಂದ್ರಗಳು, ಆನ್‍ಲೈನ್ ಶಿಕ್ಷಣ, ನರೇಗಾ.
ವಾಣಿಜ್ಯ ವಲಯ- ಮಾಧ್ಯಮಗಳು, ಡಿಟಿಎಚ್, ಕೇಬಲ್ ಸೇವೆ,
ಕೋಲ್ಡ್ ಸ್ಟೋರೇಜ್, ಸರ್ಕಾರದ ಚಟುವಟಿಕೆ ನಿರ್ವಹಿಸುವ
ಡಾಟಾ ಮತ್ತು ಕಾಲ್ ಸೆಂಟರ್‍ಗಳು, ಕಾಮನ್ ಸರ್ವಿಸ್ ಸೆಂಟರ್
ಪ್ರೈವೇಟ್ ಸೆಕ್ಯುರಿಟಿ ಸರ್ವಿಸಸ್. ಲಾಕ್‍ಡೌನ್ ಹಿನ್ನೆಲೆಯಲ್ಲಿ
ಸಿಕ್ಕಿಹಾಕಿಕೊಂಡವರಿಗೆ ಹೋಟೆಲ್, ಹೋಮ್ ಸ್ಟೇ, ಲಾಡ್ಜ್,
ಮೋಟೆಲ್ಸ್‍ಗಳಿಗೆ ಅವಕಾಶ. ವೈದ್ಯಕೀಯ ಮತ್ತು ತುರ್ತು
ಸೇವೆ ನೀಡುವವರಿಗೆ ವಿಮಾನ ಮತ್ತು ಹಡಗು ಯಾನಕ್ಕೆ
ಅವಕಾಶ.
ಕೈಗಾರಿಕೆಗಳು/ಕೈಗಾರಿಕಾ ಸಂಸ್ಥೆಗಳು (ಸರ್ಕಾರಿ &ಚಿmಠಿ; ಖಾಸಗಿ) :
ಅಗತ್ಯ ವಸ್ತುಗಳು, ವೈದ್ಯಕೀಯ ಉಪಕರಣಗಳು
ಮತ್ತು ಅದರ ಕಚ್ಚಾ ಸಾಮಗ್ರಿ ಉತ್ಪಾದಿಸುವ ಕೈಗಾರಿಕೆ,
ಫಾರ್ಮಾಗಳಿಗೆ ಅವಕಾಶ. ಗ್ರಾಮೀಣ ಭಾಗದ ಆಹಾರ ಸಂಸ್ಕರಣಾ
ಘಟಕಗಳು. ಕೋಲ್ &ಚಿmಠಿ; ಮೈನ್ಸ್ ಉತ್ಪಾದನೆ, ಪ್ಯಾಕೇಜಿಂಗ್
ಸಾಮಗ್ರಿಗಳಿಗೆ ಅವಕಾಶ.
ಕಟ್ಟಡ ನಿರ್ಮಾಣ ಚಟುವಟಿಕೆಗಳು : ರಸ್ತೆಗಳು, ನೀರಾವರಿ,
ಕಟ್ಟಡಗಳು, ಗ್ರಾಮಾಂತರ ಪ್ರದೇಶದಲ್ಲಿ ಎಂಎಸ್‍ಎಂಇಎಸ್
ಸೇರಿದಂತೆ ಎಲ್ಲಾ ಕೈಗಾರಿಕಾ ಯೋಜನೆಗಳಿಗೆ ಅವಕಾಶ.
ಯಾವ ವ್ಯಕ್ತಿಗಳಿಗೆ ಓಡಾಡಲು ಅವಕಾಶ : ವೈದ್ಯಕೀಯ,
ಪಶುವೈದ್ಯಕೀಯ ಸೇರಿದಂತೆ ಎಮರ್ಜೆನ್ಸಿ ವೇಳೆ ಪಾಸ್‍ನೊಂದಿಗೆ
ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶ. ಸಿಬ್ಬಂದಿಗಳಿಗೆ
ಪಾಸ್‍ನೊಂದಿಗೆ ಕೆಲಸದ ಸ್ಥಳಗಳಿಗೆ ಹೋಗಿಬರಲು ಅವಕಾಶ.
ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕೆಲಸಕ್ಕೆ
ಯಾವುದೇ ನಿರ್ಬಂಧವಿಲ್ಲದೇ ಅವಕಾಶ.
ನಿಷೇಧಿಸಲ್ಪಟ್ಟ ಚಟುವಟಿಕೆಗಳು : ಎಲ್ಲ ಗೃಹಬಳಕೆ ಮತ್ತು
ಅಂತರಾಷ್ಟ್ರೀಯ ವೈಮಾನಿಕ ಪ್ರಯಾಣ ನಿಷೇಧ, ಪ್ಯಾರಾ 5
ಮತ್ತು ಭದ್ರತೆ ಉದ್ದೇಶ ಹೊರತುಪಡಿಸಿ. ಟ್ರೈನ್ ಮತ್ತು
ಸಾರ್ವಜನಿಕ ಬಸ್ ಸಾರಿಗೆ. ಅಂತರ ಜಿಲ್ಲೆ ಮತ್ತು ಅಂತರ ರಾಜ್ಯ
ಚಲನೆ. ಎಲ್ಲಾ ಶೈಕ್ಷಣಿಕ, ತರಬೇತಿ, ಕೋಚಿಂಗ್ ಸಂಸ್ಥೆಗಳ
ಚಟುವಟಿಕೆ ಬಂದ್. ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆ.
ಟ್ಯಾಕ್ಸಿಗಳು, ರಿಕ್ಷಾನ ಮತ್ತು ಕ್ಯಾಬ್ ಸೇವೆ. ಎಲ್ಲ ಸಿನೆಮಾ
ಮಂದಿರ, ಶಾಪಿಂಗ್ ಕಾಂಪ್ಲೆಕ್ಸ್, ಮಾಲ್‍ಗಳು, ಜಿಮ್‍ಗಳು,
ಸ್ಪೋಟ್ರ್ಸ್ ಕಾಂಪ್ಲೆಕ್ಸ್, ಸ್ವಿಮ್ಮಿಂಗ್ ಪೂಲ್, ಉದ್ಯಾನವನಗಳು,
ಬಾರ್‍ಗಳು, ಸಭಾಂಗಣಗಳು, ಈ ತರಹದ ಚಟುವಟಿಕೆಗಳು

ನಿಷೇಧ. ಎಲ್ಲ ಧಾರ್ಮಿಕ ಸ್ಥಳಗಳು, ಸಾರ್ವಜನಿಕ ಸ್ಥಳಗಳ
ಪ್ರವೇಶ ನಿಷೇಧ. ಅಂತ್ಯಕ್ರಿಯೆ ವೇಳೆಯಲ್ಲಿ 20 ಜನರಿಗೆ
ಮಾತ್ರ ಅವಕಾಶ.
ಸ್ಥಳೀಯ ಪ್ರಾಧಿಕಾರ ಗುರುತಿಸಿರುವ ಕಂಟೈನ್‍ಮೆಂಟ್
ಝೋನ್‍ನಲ್ಲಿ ಮೇಲ್ಕಂಡ ಯಾವುದೇ ಚಟುವಟಿಕೆಗಳಿ ನಿರ್ಬಂಧ
ಸಡಿಲಿಕೆ ಅನ್ವಯಿಸುವುದಿಲ್ಲ.
ಯಾವುದೇ ವ್ಯಕ್ತಿ ಈ ಲಾಕ್‍ಡೌನ್ ನಿಯಮಗಳನ್ನು ಮೀರಿದಲ್ಲಿ
ಅವರ ವಿರುದ್ದ ವಿಕೋಪ ನಿರ್ವಹಣೆ ಕಾಯ್ದೆ 200 ರ ಸೆಕ್ಷನ್ 51
ರಿಂದ 60 ರವರೆಗೆ ಹಾಗೂ ಐಪಿಸಿ ಸೆಕ್ಷನ್ 188 ರ ಪ್ರಕರಾ ಕ್ರಮ
ಜರುಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ ಗ್ರಾಮೀಣ
ಪ್ರದೇಶಗಳಲ್ಲಿ ಕಟ್ಟಡ ಕಾಮಗಾರಿ, ನರೇಗಾ ಕಾಮಗಾರಿ
ಅದಕ್ಕೆ ಸೇರಿದಂತೆ ಕಚ್ಚಾ ವಸ್ತು ಒದಗಿಸುವ ಅಂಗಡಿಗಳನ್ನು
ತೆರೆಯಲು ಅವಕಾಶ ಕಲ್ಪಿಸಲಾಗಿದ್ದು, ನರೇಗಾದಡಿ 5
ಜನರಂತೆ ಗುಂಪು ಮಾಡಿ ಕೆಲಸ ನೀಡಬೇಕು. ಮುಖ್ಯವಾಗಿ
ನೀರಾವರಿ ಮತ್ತು ಸ್ವಾಭಾವಿಕ ಸಂಪನ್ಮೂಲ ಸಂರಕ್ಷಣೆಗೆ
ಒತ್ತು ನೀಡಿ ಕೆಲಸ ನೀಡಲಾಗುವುದು ಎಂದರು.
ಕೆಪಿಎಂಇ ನೋಂದಣಿ ರದ್ದು : ಜಿಲ್ಲೆಯ ಎಲ್ಲ ಖಾಸಗಿ
ಆಸ್ಪತ್ರೆಗಳನ್ನು ತೆರೆಯುವಂತೆ ಆದೇಶಿಸಲಾಗಿದ್ದರೂ
ಅನೇಕ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‍ಗಳು ತೆರೆದು ಚಿಕಿತ್ಸೆ
ನೀಡುತ್ತಿಲ್ಲವೆಂಬ ದೂರು ಇದೆ. ಇಂತಹ ನಿಗದಿತ ಕ್ಲಿನಿಕ್ ಸೇವೆ
ನೀಡುತ್ತಿಲ್ಲವೆಂದು ದೂರು ನೀಡಿದಲ್ಲಿ ಅದನ್ನು ಪರಿಶೀಲಿಸಿ ಅಂತಹ
ಕ್ಲಿನಿಕ್/ಆಸ್ಪತ್ರೆಯ ಕೆಪಿಎಂಇ ನೋಂದಣಿಯನ್ನು
ರದ್ದುಪಡಿಸಲಾಗುವುದು ಎಂದು ಡಿಸಿ ಮಹಾಂತೇಶ ಬೀಳಗಿ
ತಿಳಿಸಿದರು.
ಸುಗ್ರೀವಾಜ್ಞೆ : ಎಸ್‍ಪಿ ಹನುಮಂತರಾಯ ಮಾತನಾಡಿ,
ಸಾರ್ವಜನಿಕರು ಆರೋಗ್ಯ ಅಧಿಕಾರಿಗಳು, ವೈದ್ಯರು ಮತ್ತು
ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಹಲ್ಲೆ
ಮಾಡುತ್ತಿರುವ ಪ್ರಕರಣಗಳ ಹಿನ್ನೆಲೆ ವಿಕೋಪ ನಿರ್ವಹಣೆ
ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಈ
ಸುಗ್ರೀವಾಜ್ಞೆ ಪ್ರಕಾರ ಈ ರೀತಿ ಆರೋಗ್ಯ ಸಿಬ್ಬಂದಿಗಳ
ಕರ್ತವ್ಯ ಅಡ್ಡಿಪಡಿಸುವವರ, ಹಲ್ಲೆ ನಡೆಸುವವರ ವಿರುದ್ದ
ನಾನ್‍ಬೈಲಬಲ್ ಪ್ರಕರಣ ದಾಖಲಿಸಿ 5 ರಿಂದ 7 ವರ್ಷಗಳ ಸಜೆ ಮತ್ತು
5 ಲಕ್ಷದ ವರೆಗೆ ದಂಡ ವಿಧಿಸಬಹುದಾಗಿದೆ ಎಂದು ತಿಳಿಸಿದರು.
    ದಾವಣಗೆರೆ ಜಿಲ್ಲೆಯಾದ್ಯಂತ ಬರುವ ಎಲ್ಲಾ ಮಸೀದಿ,
ದರ್ಗಾಗಳಲ್ಲಿ ದೈನಂದಿನ ಮತ್ತು ರಂಜಾನ್ ಮಾಸದ
ಸಾಮೂಹಿಕ ಪ್ರಾರ್ಥನೆಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ
ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಕಂಡಂತೆ
ನಿಬಂಧನೆಗಳನ್ನು ವಿಧಿಸಿ ಮೇ 3 ರವರೆಗೆ ನಿಷೇಧಿಸಿ
ಆದೇಶಿಸಲಾಗಿದೆ.

 ಯಾವುದೇ ಮುಸ್ಲಿಂರಿಗೆ ಐದು ಹೊತ್ತಿನ ಪ್ರಾರ್ಥನೆ
(ನಮಾಜ್)ಯನ್ನು ಶುಕ್ರವಾರ (ನಮಾಜ್) ಪ್ರಾರ್ಥನೆ
ಸಹ ಒಳಗೊಂಡಂತೆ ಮತ್ತು ತರಾವಿ (ನಮಾಜ್)
ಪ್ರಾರ್ಥನೆಯನ್ನು ಮಸೀದಿಯಲ್ಲಿ ಮಾಡಲು
ನಿರ್ಬಂಧಿಸಲಾಗಿರುತ್ತದೆ.
 ಮಸೀದಿಯ ಸಿಬ್ಬಂದಿಗಳು ಯಾವುದೇ ತರಹದ
ಧ್ವನಿವರ್ಧಕಗಳನ್ನು ಮಸೀದಿಯಲ್ಲಿ ಐದು ಹೊತ್ತಿನ
ಪ್ರಾರ್ಥನೆ(ನಮಾಜ್) ಯನ್ನು ಶುಕ್ರವಾರ (ನಮಾಜ್)
ಪ್ರಾರ್ಥನೆ ಸಹ ಒಳಗೊಂಡಂತೆ ಮತ್ತು ತರ್ಹಾವಿ
(ನಮಾಜ್) ಪ್ರಾರ್ಥನೆಗೆ ಬಳಸಲು ನಿರ್ಬಂಧಿಸಲಾಗಿದೆ.
 ಆಜಾನ್‍ನನ್ನು ಕಡಿಮೆ ಶಬ್ದ (ಐoತಿ ಆeಛಿibಟe) ದಲ್ಲಿ ನೀಡುವುದು
ಹಾಗೂ ಮಸೀದಿಯ ಮೌಜಿನ್ ಅಥವಾ ಪೇಶ್‍ಇಮಾಂ ಇವರು
ಸಹರಿ ಮತ್ತು ಇಫ್ತಾರ್ ಸಮಯವನ್ನು ಜನರಿಗೆ ಧ್ವನಿ
ಕಡಿಮೆಗೊಳಿಸಿ ತಿಳಿಸಬೇಕು.
 ಯಾವುದೇ ಇಫ್ತಾರ್ ಮತ್ತು ಸಹರಿಗಳಲ್ಲಿ ಸಾಮೂಹಿಕ
ಭೋಜನಕೂಟ ಮಸೀದಿಗಳಲ್ಲಿ ಆಯೋಜಿಸುವಂತಿಲ್ಲ.
 ಮೊಹಲ್ಲಾಗಳಲ್ಲಿ ಹಂಚಲು ಗಂಜಿ, ಆಶ್, ತಂಪುಪಾನೀಯ
ಮತ್ತು ಇತರೆ ಮಸೀದಿಗಳ ಆವರಣದಲ್ಲಿ
ತಯಾರಿಸುವಂತಿಲ್ಲ.
 ಮಸೀದಿಗಳ ಸುತ್ತಮುತ್ತ ಯಾವುದೇ ಉಪಹಾರ
ಅಂಗಡಿ ಹಾಕುವುದನ್ನು ನಿಷೇಧಿಸಲಾಗಿದೆ ಎಂದು ಎಸ್‍ಪಿ
ಹನುಮಂತರಾಯ ತಿಳಿಸಿದರು.
ಜಿಲ್ಲಾಧಿಕಾರಿಗಳು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ,
ಎಸ್‍ಡಿಆರ್‍ಎಫ್ ಅನುದಾನದಲ್ಲಿ ಆಹಾರ ಧಾನ್ಯ ಖರೀದಿಸಿ
ನೀಡಬಹುದೆಂದು ಸರ್ಕಾರದ ಸುತ್ತೋಲೆ ಇದೀಗ ಬಂದಿದ್ದು,
ಕ್ರಮ ಕೈಗೊಳ್ಳಲಾಗುವುದು. ಶಾಸಕರ
ಅನುದಾನವನ್ನು ಆಹಾರಧಾನ್ಯ ಖರೀದಿಗೆ ಬಳಕೆ
ಮಾಡಿಕೊಳ್ಳುವ ಬಗ್ಗೆ ಸರ್ಕಾರಕ್ಕೆ ಸ್ಪಷ್ಟನೆ ಕೇಳಲಾಗಿದೆ.
ಇದುವರೆಗೆ ಜಿಲ್ಲೆಯಲ್ಲಿ 26 ಸಾವಿರ ಸಿದ್ದಪಡಿಸಿದ ಆಹಾರ
ಪ್ಯಾಕೆಟ್‍ಗಳನ್ನು ವಿತರಿಸಲಾಗಿದೆ. ದಾನಿಗಳಿಂದ 14393 ಆಹಾರದ
ಕಿಟ್‍ಗಳು ಬಂದಿದ್ದು 10880 ವಿತರಣೆಯಾಗಿದೆ. 2.60 ಲಕ್ಷ
ಮಾಸ್ಕ್ ದೇಣಿಗೆ ರೂಪದಲ್ಲಿ ಬಂದಿದ್ದು 2.57 ಲಕ್ಷ
ವಿತರಣೆಯಾಗಿದೆ. 878 ವಲಸೆ ಕಾರ್ಮಿಕರಿದ್ದು ಅವರಿಗೆ ಎರಡು
ಸುತ್ತಿನಲ್ಲಿ 474 ಆಹಾರ ಕಿಟ್ ನೀಡಲಾಗಿದೆ. ಜೊತೆಗೆ
ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು ಇದೀಗ ಸರ್ಕಾರದ
ಸೂಚನೆಯಂತೆ ಅವರ ಮನರಂಜನೆಗಾಗಿ, ಕ್ರಿಕೆಟ್ ಬ್ಯಾಟ್
ಬಾಲ್, ಶೆಟಲ್ ಕಾಕ್ ನೀಡಲಾಗಿದೆ, ಕೇರಂ ಬೋರ್ಡ್ ಮತ್ತು ಟಿವಿ
ವ್ಯವಸ್ಥೆ ಮಾಡುವ ಬಗ್ಗೆ ಚಿಂತಿಸಲಾಗುತ್ತಿದೆ.
ದಾನಿಗಳಿಂದ ಸಿಎಂ ಪರಿಹಾರ ನಿಧಿಗೆ ರೂ.40 ಲಕ್ಷ ದೇಣಿಗೆ
ಹಾಗೂ ಪಿಎಂ ಪರಿಹಾರ ನಿಧಿಗೆ ರೂ.3 ಲಕ್ಷ ದೇಣಿಗೆ ನೀಡಲಾಗಿದೆ
ಎಂದು ಮಾಹಿತಿ ನೀಡಿದರು.

ಇದೇ ವೇಳೆ ಸ್ಮಾರ್ಟ್‍ಸಿಟಿ ಮ್ಯಾನೇಜಿಂಗ್ ಡೈರೆಕ್ಟರ್ ರವೀಂದ್ರ
ಮಲ್ಲಾಪುರ ಇವರು ಸ್ಮಾರ್ಟ್‍ಸಿಟಿ ವತಿಯಿಂದ ಪೊಲೀಸ್ ಇಲಾಖೆಗೆ
100 ಬಾಕ್ಸ್‍ಗಳು ಚ್ಯವನ್‍ಪ್ರಾಶ್‍ನ್ನು ಎಸ್‍ಪಿ ಗೆ ಹಸ್ತಾಂತರಿಸಿದರು.
ಈ ವೇಳೆ ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ
ಹೊಸಗೌಡರ್, ಸ್ಮಾರ್ಟ್‍ಸಿಟಿ ಮ್ಯಾನೇಜಿಂಗ್ ಡೈರೆಕ್ಟರ್ ರವೀಂದ್ರ
ಮಲ್ಲಾಪುರ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್
ನಾಯಕ್ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ
ನಜ್ಮಾ, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ ಇದ್ದರು.

Leave a Reply

Your email address will not be published. Required fields are marked *