ಕ್ಯಾಪ್ಟನ್ ಅಜಿತ್‌ಕುಮಾರ್ ಜಿ ಎ, ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ರವರ ನಿರ್ದೇಶನದ ಮೇರೆಗೆ ಭದ್ರಾವತಿ ನಗರದ ಬಿ ಹೆಚ್ ರಸ್ತೆ ಬುಳ್ಳಾಪುರ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಮತ್ತು ಮಿಲ್ಲಿ ಕ್ಯಾಂಪ್ ಹತ್ತಿರ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಉತ್ಪಾದನೆಯಾಗಿದೆ ಎಂದು ನಮೂದಾಗಿರುವ 750 ಮಿಲಿ ಲೀಟರ್ ವಿವಿಧ ಮಾದರಿಯ 10 ಬಾಟಲಿ ಒಟ್ಟು 7.500 ಲೀಟರ್ ಮದ್ಯವನ್ನು ತಲಾ ಒಂದು ಬಾಟಲಿಗೆ ರೂ.10000/- ಗಳಿಗೆ ಮಾರಾಟ ಮಾಡಲು ಮಾರುತಿ ಸ್ವಿಫ್ಟ್ ನೋಂದಣಿ ಸಂಖ್ಯೆ ಕೆಎ-18-ಪಿ-7503 ಮತ್ತು ಬಚಾಟ್ ಡಿಸವರಿ ಬೈಕ್ ಕೆಎ-14-ಇಜೆ-6243 ರಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆಹಚ್ಚಿ ಎರಡು ಘೋರ ಪ್ರಕರಣ ದಾಖಲಿಸಿರುತ್ತಾರೆ. ಸದರಿ ಮಧ್ಯದ ಮತ್ತು ವಾಹನಗಳ ಅಂದಾಜು ಮೌಲ್ಯ ರೂ.5,15,000/ ಗಳಾಗಿರುತ್ತದೆ. ಸದರಿ ಪ್ರಕರಣದ ಆರೋಪಿಗಳಾದ 1) ಮನೋಜ್ ಬಿನ್ ಅನಂತರಾಜು 2) ಅಜಯ್ ಬಿನ್ ವೆಂಕಟೇಶ 3) ನವೀನ್‌ನಾಯ್ಕ ಬಿನ್ 4) ಕಿರಣ್ ಕುಮಾರ್ ಬಿನ್ ಶಿವಣ್ಣ ಎಂಬ ನಾಲ್ಕು ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ಸದರಿ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಆಯುಕ್ತರ ಕಛೇರಿಯ ಶ್ರೀ ಹನುಮಂತಪ್ಪ ಡಿ ಎನ್, ಅಬಕಾರಿ ನಿರೀಕ್ಷಕರು, ಅಬಕಾರಿ ರಕ್ಷಕರಾದ ಶ್ರೀ ಚಂದ್ರಪ್ಪ, ಶ್ರೀ ರವೀಂದರ್, ವಾಹನ ಚಾಲಕ ಅರ್ಜುನ್ ಹಾಗೂ ಶಿವಮೊಗ್ಗ ಉಪ ವಿಭಾಗ ಕಛೇರಿಯ ಅಬಕಾರಿ ಉಪ ನಿರೀಕ್ಷಕರಾದ ಶ್ರೀ ಹಾಲಾನಾಯ್ ಮತ್ತು ಅಬಕಾರಿ ರಕ್ಷಕರಾದ ಶ್ರೀ ಮಧುಸೂದನ್ ಬಿ ಸಿ ಇತರ ಅಬಕಾರಿ ಸಿಬ್ಬಂಧಿಗಳು ಭಾಗವಹಿಸಿರುತ್ತಾರೆ. ಮೇಲ್ಕಂಡ ವಿವರಗಳನ್ನು ರಾಜ್ಯ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ಸರ್ಕಾರಕ್ಕೆ ವೆಚ್ಚ ಬಾರದಂತೆ ಪ್ರಕಟಿಸಲು ತಮ್ಮಲ್ಲಿ ಕೋರಲಾಗಿದೆ

Leave a Reply

Your email address will not be published. Required fields are marked *