ದಾವಣಗೆರೆ ಜಿಲ್ಲೆ;-ಕೆಪಿಸಿಸಿ ರಾಜ್ಯಾದ್ಯಕ್ಷರಾದ ಡಿ ಕೆಶಿವಕುಮಾರ್ ರವರ ಆದೇಶದ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಹೆಚ್.ಬಿ ಮಂಜಪ್ಪನವರು ಮತ್ತು ಮಾಜಿ ಶಾಸಕರಾದ ಡಿ.ಜಿ
ಶಾಂತನಗೌಡ್ರುರವರ ನೇತೃತ್ವದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಘಟಕ ಅಧ್ಯಕ್ಷರಾದ ಕೆ.ಎಲ್ ಹರೀಶ್ ಹಾಗೂ ಹೊನ್ನಾಳಿ ಯುವ ಘಟಕ ಅಧ್ಯಕ್ಷರಾದ ಮಧುಗೌಡರವರ ವತಿಯಿಂದ ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಕಂಡು ಬಂದಿರು ಕಾರಣ, ಜಿಲ್ಲಾ ಚಿಗಟೇರಿ ಸರ್ಕಾರಿ ಆಸ್ಪತ್ರೆ ಬ್ಲಡ್ ಬ್ಯಾಂಕ್ ಇವರುಗಳ ಸಂಯೋಗದಲ್ಲಿ ಹೊನ್ನಾಳಿ ತಾಲೂಕ್ ವೈದ್ಯಧಿಕಾರಿಗಳಾದ ಕೆಂಚಪ್ಪ ಬಂತಿಯವರ ಸಹಾಕಾರದೊಂದಿಗೆ ಕೋರ್ಟ ಹಿಂಭಾಗದಲ್ಲಿರುವ ಬಿ.ಸಿ.ಎಂ ಹಾಸ್ಟೆಲ್ ನಲ್ಲಿ 43 ಕಾಂಗ್ರೆಸ್ ಯುವ ಕಾರ್ಯಕರ್ತರುಗಳು ಸ್ವಯಂ ಪ್ರೇರಣೆಯಿಂದ ರಕ್ತದಾನವನ್ನು ಮಾಡಿ ಮಾನವೀಯತೆ ಮೆರೆದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾದವರು;- ಜಿಲ್ಲಾಧ್ಯಕ್ಷರಾದ ಹೆಚ್.ಬಿ ಮಂಜಪ್ಪನವರು, ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರು, ಟಿ.ಹೆಚ್.ಓ ಕೆಂಚಪ್ಪ ಬಂತಿಯವರು, ಕಾಂಗ್ರೆಸ್ ಅಧ್ಯಕ್ಷರಾದ ಸಣ್ಣಕ್ಕಿ ಬಸವನಗೌಡ್ರು,
ಚನ್ನವೀರಪ್ಪ ಗೌಡ್ರು, ಪಿ.ಎಲ್.ಡಿ ಬ್ಯಾಂಕಿನ ನಿರ್ದೇಶಕರಾದ ಟಿ.ಜಿ ರಮೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಲ್ ಹರೀಶ್, ಹೊನ್ನಾಳಿ ಯುವ ಘಟಕ ಅಧ್ಯಕ್ಷರಾದ ಮಧುಗೌಡ, ಬೆಳಗುತ್ತಿ ಪ್ರಕಾಶ್,
ಪ್ರವೀಣ್, ಸ್ವರೂಪ್, ರೋಷನ್, ಬಾಹುಬಲಿ, ಸುಪ್ರಿತ್, ಗಿರೀಶ್ ದ್ಯಾಮಜ್ಜಿ, ಕಿರಣ್, ಹರೀಶ್, ಶಿವರಾಜ್ ತರಗನಹಳ್ಳಿ, ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಸಿಬ್ಬಂದಿವರ್ಗ ಹಾಗೂ ಆಪ್ತ ಸಮಾಲೊಚಕರು ರಾಘವೇಂದ್ರ ಕೆ,ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರು ದುರ್ಗೇಶ್ ಬ್ಲಡ್ ಬ್ಯಾಂಕ್ ದಾವಣಗೆರೆ ಮತ್ತು ಎಲ್ಲಾ ಸಿಬ್ಬಂದಿವರ್ಗದವರ ಸಹಾಕಾರದೊಂದಿಗೆ ಈ ಕಾರ್ಯಕ್ರಮವು ಯಶಸ್ವಿಯಾಯಿತು.

Leave a Reply

Your email address will not be published. Required fields are marked *