ದಾವಣಗೆರೆ ಏ.24
ನಗರದಲ್ಲಿ ಇಂದು ಪಿ.ಬಿ ರಸ್ತೆಯ ಸಂಗೊಳ್ಳಿ ರಾಯಣ್ಣ
ವೃತ್ತದಲ್ಲಿ ತಮ್ಮ 44ನೇ ಜನ್ಮ ದಿನೋತ್ಸವದ ಅಂಗವಾಗಿ
ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಶ್ರೀ
ನಿರಂಜನಾನಂದಪುರಿ ಸ್ವಾಮೀಜಿ ಇವರು ನಿರಾಶ್ರಿತರು ಹಾಗೂ
ಕಾರ್ಮಿಕರಿಗೆ ಆಹಾರ ಸಾಮಗ್ರಿ ವಿತರಿಸಿದರು. ಈ ಸಂದರ್ಭದಲ್ಲಿ
ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಹನುಮಂತರಾಯ ಇದ್ದರು.