ದಾವಣಗೆರೆ, ಏ.25
ಈ ಕೈಯಲೆ ಸುಖವು,
ಈ ಕೈಯಲೆ ದುಖಃವು.
ಏಕಯ್ಯಾ, ನೀ ನಮ್ಮ ಬರಿದೆ ಬಳಲಿಸುವೆ
ನಾನಾರ ಸೇರುವೆನಯ್ಯಾ
ಆರೂ ಇಲ್ಲದ ದೇಸಿಗೆ ನಾನು,
ಕೂಡಲಸಂಗಮದೇವಾ. ಎಂದು ಜಗತ್ತಿಗೆ ಸಾರಿದ ಭಕ್ತಿ ಭಂಡಾರಿ
ವಿಶ್ವಗುರು ಬಸವೇಶ್ವರರ 887ನೇ ಜನ್ಮ ದಿನದಂದು
ಕನ್ನಡನಾಡಿನ ಜನತೆಗೆ ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ
ಸಚಿವರಾದ ಬಿ.ಎ ಬಸವರಾಜ ಅವರು ಶುಭ ಕೋರಿದ್ದಾರೆ.
12ನೇ ಶತಮಾನದಲ್ಲಿ ಸಾಮಾಜಿಕ ಸುಧರಾಣೆಗಾಗಿ ಟೊಂಕ
ಕಟ್ಟಿ ನಿಂತು ಹೊಸ ಮೌಲ್ಯಗಳನ್ನು ಸಾರಿದವರು
ಬಸವೇಶ್ವರರು. ಮಹಾಮಾನವತವಾದಿಯಾಗಿದ್ದ ಬಸವಣ್ಣನವರ
ಕಾಯಕವೇ ಕೈಲಾಸ, ನುಡಿದಂತೆ ನಡೆ ಮತ್ತು ದಯವೇ
ಧರ್ಮದ ಮೂಲ ಎಂಬ ತತ್ವಗಳನ್ನು ನಮ್ಮ ಜೀವನದಲ್ಲಿ
ಅಳವಡಿಸಿಕೋಳ್ಳೋಣ ಎಂದು ಸಚಿವರು ಕರೆ ನೀಡಿದ್ದಾರೆ.
ದೇಶವೇ ಕೊರೊನಾ ಸೋಂಕು ನಿರ್ಮೂಲನೆಯ
ಯುದ್ದದಲ್ಲಿ ನಿರ್ಣಾಯಕ ಘಟ್ಟದಲ್ಲಿ ಇದ್ದು ದೇಶಾದ್ಯಂತ
ಲಾಕ್‍ಡೌನ್ ಇರುವ ಕಾರಣ ನಾವೆಲ್ಲರೂ ನಮ್ಮ ಮನೆಗಳಲ್ಲಿಯೇ
ವಚನಗಳನ್ನು ಪಠಿಸುವ ಮೂಲಕ ಸರಳವಾಗಿ ಬಸವೇಶ್ವರ
ಜಯಂತಿಯನ್ನು ಆಚರಿಸೋಣ ಎಂದು ಅವರು ಮನವಿ ಮಾಡಿದ್ದಾರೆ.