ದಾವಣಗೆರೆ ಏ.26
   ಸಮಾನತೆಯ ಹರಿಕಾರ, ಮಹಾ ಮಾನವÀತಾವಾದಿ, ತತ್ವಜ್ಞಾನಿ
ಬಸವೇಶ್ವರÀರು 12 ನೇ ಶತಮಾನದ ಶ್ರೇಷ್ಟ
ರಾಜಕಾರಣಿಯಾಗದ್ದರೆಂದು ಮಹಾನಗರಪಾಲಿಕೆ ಮೇಯರ್
ಬಿ.ಜಿ. ಅಜಯ್‍ಕುಮಾರ್ ಹೇಳಿದರು.
ಭಾನುವಾರ ಮಹಾನಗರಪಾಲಿಕೆಯ ಶಾಮನೂರು
ಶಿವಶಂಕರಪ್ಪ ಸಭಾಂಗಣದಲ್ಲಿ ನಡೆದ ಶ್ರೀ ಬಸವೇಶ್ವರರ 887
ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು  
ಇಂದಿನ  ಆಧುನಿಕ ಜಗತ್ತಿನ ಯುಗದಲ್ಲಿ ಬಸವೇಶ್ವರರ
ವಚನಗಳು ಕೇವಲ ವಚನಗಳಾಗಿವೆ. ಅವು ಆಚರಣೆಗೆ
ಬರುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಪ್ರಸುತ್ತ ರಾಜಕೀಯದ ಪರಿಕಲ್ಪನೆ, ಇಂದಿನ ಲೋಕಸಭೆ
ಮತ್ತು ವಿಧಾನಸಭೆಗಳು 12 ನೇ ಶತಮಾನದ ಅನುಭವ
ಮಂಟಪಕ್ಕೆ ಸಾಕ್ಷಿಯಾಗಿದೆ.  ನಾಡಿನ ಮಂತ್ರಿಯಾಗಿದ್ದ
ಸಂದರ್ಭದಲ್ಲಿ ದೀನ ದಲಿತರಿಗಾಗಿ ಅವರು ಮಾಡಿದ ಕೆಲಸ ಇಂದಿಗೂ
ಅಜರಾಮರ  ಆ ಶ್ರೇಷ್ಟ ರಾಜಕಾರಣಿ ಹಾಕಿಕೊಟ್ಟ ರಾಜಕೀಯದ
ಮಾರ್ಗದಲ್ಲಿ ನಾವು ನಡೆಯಬೇಕಾಗಿದೆ. ಇಂದು ಎಲ್ಲಾ
ಇಲಾಖೆಗಳು ಭ್ರಷ್ಟ ವ್ಯವಸ್ಥೆಯಿಂದ ಕೂಡಿದ್ದು ಈ ಹಣೆಪಟ್ಟಿ
ತೊಡೆಯಲು ಅವರ ಹಾದಿಯಲ್ಲಿ ನಡೆಯುವ
ಅನುಯಾಯಿಗಳು ನಾವಾಗಬೇಕು ಎಂದ ಅವರು ನನಗೆ
ಎಲ್ಲರೂ ಸಹಕಾರ ನೀಡಿದಲ್ಲಿ ಮಧ್ಯ ಕರ್ನಾಟಕದ ದಾವಣಗೆರೆ
ನಗರವನ್ನು ಅಭಿವೃದ್ದಿಪಡಿಸಲು ಸಹಕರಿಸುತ್ತೇನೆ ಎಂದು
ಹೇಳಿದರು.
ಹಣವೇ ಜೀವನವಲ್ಲ. ಎಷ್ಟು ಕೋಟಿ ಹಣವಿದ್ದರೇನು? ಇಂದು
ಕೊರೋನಾದಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ.್ಲ
ಆದ್ದರಿಂದ ಮಾನವೀಯತೆ, ಪ್ರೀತಿ ವಿಶ್ವಾಸ, ಬಹುಮುಖ್ಯ ಎಂದರು.
    ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್ ಮಾತನಾಡಿ, ಕನ್ನಡಕ್ಕೆ
ಬಸವಣ್ಣನವರು ಒಂದು ಶ್ರೇಷ್ಟ ಧರ್ಮಗ್ರಂಥವನ್ನು
ನೀಡಿದ್ದಾರೆ ಅದುವೇ ವಚನ ಸಾಹಿತ್ಯ. ನಮ್ಮ ಜೀವನ ಬದಲಾಗಲು

ಶರಣರ ಒಂದು ವಚನ ಸಾಕು. ಮಹಿಳಾ ಸ್ವಾತಂತ್ರ್ಯದ ಬಗ್ಗೆ
ಮೊಟ್ಟ ಮೊದಲು ಧ್ವನಿ ಎತ್ತಿದವರು ಬಸವಣ್ಣ.
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ,
ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ ಇದಿರ
ಹಳಿಯಲು ಬೇಡ.. ಈ ವಚನ ನನ್ನ ಬದುಕು ಬದಲಿಸಿದೆ
ಬಸವೇಶ್ವರರ ವಚನಗಳಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ಥ,
ಜೈನ್ ಬೌದ್ದ, ಸಿಖ್, ಪಾರ್ಸಿ, ಎಲ್ಲರೂ ಒಂದೇ ಎನ್ನುವ ಅರ್ಥ ಇದೆ.
ಹಾಗಾಗಿಯೇ ಅವರು ವಿಶ್ವ ಗುರುವಾದರು ಎಂದರು.
ಉಳ್ಳವರು ಶಿವಾಲಯವ ಮಾಡುವರು. ನಾನೇನು ಮಾಡಲಿ
ಬಡವನಯ್ಯ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶೀರವೇ
ಹೊನ್ನ ಕಳಶÀವಯ್ಯ  ಕೂಡಲ ಸಂಗಮದೇವÀ
ಕೇಳಯ್ಯ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು
ಹೇಳಿದರು.
  ಪಾಲಿಕೆ ಆಯುಕ್ತರಾದ ವಿಶ್ವನಾಥ್ ಮುದಜ್ಜಿ ಮಾತನಾಡಿ,
ಕೊರೋನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಾವು ಸರಳವಾಗಿ
ಬಸವೇಶ್ವರ ಜಯಂತಿ ಆಚರಿಸುತ್ತಿದ್ದೇವೆ. ಬುದ್ದ, ಬಸವ,
ಅಂಬೇಡ್ಕರ್ ಈ ಮೂರು ಜನ ಮಹಾನ್ ಪುರುಷರು
ಸಮಾನತೆಗಾಗಿ ಹೋರಾಡಿದ ಚೈತನ್ಯಗಳು. 12 ನೇ
ಶತಮಾನದಲ್ಲಿ ಜಾತಿ ಪದ್ದತಿ, ಮೂಡನಂಬಿಕೆ, ಅಸಮಾನತೆ,
ವಿರುದ್ದ  ಧ್ವನಿ ಎತ್ತಿದ ದಾರ್ಶನಿಕ ಚಿಂತಕ ಬಸವಣ್ಣ,
ಸಂವಿಧಾನದ ಪರಿಕಲ್ಪನೆ ನೀಡಿದವರು ಬಸವಣ್ಣನವರು.
ತದನಂತರ ಅಂಬೇಡ್ಕರ್‍ರವರು ಸಂವಿಧಾನ ರಚಿಸುವ
ಮೂಲಕ ನಮಗೆ ಸಮಾನತೆ ನೀಡಿದರು ಎಂದರು.
  ಕಾರ್ಯಕ್ರಮದಲ್ಲಿ ಪಾಲಿಕೆ ಉಪ ಮಹಾಪೌರರಾದ ಸೌಮ್ಯ
ನರೇಂದ್ರ ಕುಮಾರ್, ಸದಸ್ಯರಾದ ಎ. ನಾಗರಾಜ್, ಶಿವನಗೌಡ
ಪಾಟೀಲ್, ಗೊಣೇಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *