ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅಬಕಾರಿ ಇಲಾಖೆಯ ಅಧಿಕಾರಿಗಳ ಸಂಯೋಗದ ಅಡಿಯಲ್ಲಿ ಬ್ರಾಂಡಿ ಶಾಪ್ ಮಾಲೀಕರುಗಳ ವತಿಯಿಂದ 250 ಕಿಟ್ಟುಗಳಲ್ಲಿ 175 ಕಿಟ್ಟುಗಳನ್ನು ನಿರಾಶ್ರಿತರಿಗೆ ಮತ್ತು 75 ಕಿಟ್ಟುಗಳನ್ನು ಕಾರ್ಡ ಇಲ್ಲದೆ ಇರುವವರಿಗೆ ಪಟ್ಟಣ ಪಂಚಾಯಿತಿಯ ಆವರಣದಲ್ಲಿ ವಿತರಣೆ ಮಾಡಲಾಯಿತು.
ಇವರುಗಳ ನೇತೃತ್ವದಲ್ಲಿ ;- ಹೊನ್ನಾಳಿ ಶಾಸಕರಾದ ಎಂ.ಪಿ ರೇಣುಕಾಚಾರ್ಯರವರು, ಅಬಕಾರಿ ನಿರೀಕ್ಷಕರಾದ ಮುರಡೇಶ್ ರವರು, ಅಬಕಾರಿ ಉಪನಿರೀಕ್ಷಕರುಗಳಾದ ಶ್ರೀಧರ್,ಚೇತನ್ ಮತ್ತು ಅಬಕಾರಿಯ ಸಿಬ್ಬಂದಿ ವರ್ಗದವರು ಹಾಗೂ

ಬ್ರಾಂಡಿ ಶಾಪ್
ಮಾಲೀಕರುಗಳಾದ ಎಂ. ರಮೇಶ್ ಜೋತಿ ವೈನ್ಸ್ ಸ್ಟೋರ್, ಕುಂದೂರು ಷಣ್ಮುಖಪ್ಪ, ಕಿರಣ್ ಬಾರ್ ಸಿದ್ದಪ್ಪ, ಅಪ್ಪಾಜಿ ಬಾರ್
ಮಾಲೀಕರಾದ ಎಂ.ಸುರೇಶ್, ಗೊಲ್ಲರಹಳ್ಳಿ ನಂದೀಶ್ ಮುಂತಾದವರು ಸಹ ಭಾಗಿಯಾಗಿದ್ದರು

Leave a Reply

Your email address will not be published. Required fields are marked *