ದಾವಣಗೆರೆ, ಏ.28
ದಾವಣಗೆರೆ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ
ದೇವಸ್ಥಾನದÀ ಅರ್ಚಕರಾದ ಬಿ.ಪಿ ಲಿಂಗೇಶ್ ಇವರ ವಿರುದ್ದ
ಸಾರ್ವಜನಿಕರ ದೂರಿನನ್ವಯ ಆರೋಪ ದೃಢಪಟ್ಟ
ಹಿನ್ನೆಲೆಯಲ್ಲಿ ನಿಯಮಾನುಸಾರ ಇವರನ್ನು ಸೇವೆಯಿಂದ ವಜಾ
ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ದೇವಸ್ಥಾನಕ್ಕೆ ಬರುವ ಭಕ್ತಾದಿಗಳೊಂದಿಗೆ ಅಸಭ್ಯವಾಗಿ
ವರ್ತಿಸಿರುವ ಕುರಿತು ಹಾಗೂ ಮುಜರಾಯಿ ಅರ್ಚಕರಾಗಿದ್ದರೂ
ಸಹ ಮೇಲಾಧಿಕಾರಿಗಳ ಅನುಮತಿ ಇಲ್ಲದೇ ದೇವಸ್ಥಾನಕ್ಕೆ
ಸಂಬಂಧಿಸಿದ ಆಸ್ತಿಯ ಕುರಿತು ಪ್ರತಿಕಾ ಪ್ರಕಟಣೆ
ಹೊರಡಿಸಿರುವುದರಿಂದ ಹಾಗೂ ದೇವಸ್ಥಾನದ ಪೂಜಾ
ಕೈಂಕರ್ಯಗಳನ್ನು ನಿಗದಿತ ಅವಧಿಯಲ್ಲಿ ನೇರವೇರಿಸದೆ
ಇರುವುದರಿಂದ ದೇವಸ್ಥಾನಕ್ಕೆ ಬರುವ ಆದಾಯದಲ್ಲಿ
ಕುಂಠಿತವಾಗುವಂತೆ ಮಾಡಿರುವ ಆರೋಪ ದೃಪಟ್ಟಿರುವ
ಹಿನ್ನಲೆಯಲ್ಲಿ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು
ಮತ್ತು ಧರ್ಮದಾಯಿ ದತ್ತಿಗಳ ನಿಯಾಮಾವಳಿಗಳು
2002ರ ಕಲಂ 17ರಲ್ಲಿ ನೀಡಿರುವಂತೆ ಪ್ರದತ್ತವಾದ
ಅಧಿಕಾರವನ್ನು ಚಲಾಯಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಅವರು ಅರ್ಚಕ ಬಿ.ಪಿ ಲಿಂಗೇಶ ಇವರನ್ನು ಸೇವೆಯಿಂದ ವಜಾ ಮಾಡಿ
ಕೊಡಲೇ ದೇವಸ್ಥಾನದ ಬೀಗ ಹಾಗೂ ಇತರೆ ಎಲ್ಲಾ
ದಾಖಲೆಗಳನ್ನು, ಒಡವೆ ಹಾಗೂ ವಸ್ತ್ರಗಳನ್ನು ತಹಶೀಲ್ದಾರ್
ಅವರ ಸುರ್ಪರ್ದಿಗೆ ನೀಡಲು ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *