ದಾವಣಗೆರೆ ಏ.28
ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್-19 ವೈರಸ್
ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ
ಸ್ಥಗಿತಗೊಂಡಿದ್ದ ಗಣಿ/ಕಲ್ಲು/ಮರಳು ಗಣಿಗಾರಿಕೆ ಮತ್ತು
ಸಾಗಾಣಿಕೆ ಕಾರ್ಯವನ್ನು ಷರತ್ತುಗಳೊಂದಿಗೆ ಪುನರ್
ಆರಂಭಿಸಲು ಅನುಮತಿ ನೀಡಲಾಗಿದೆ.
ಜಿಲ್ಲೆಯಲ್ಲಿರುವ ಗಣಿ/ಕಲ್ಲು/ಮರಳು ಗುತ್ತಿಗೆ
ಪ್ರದೇಶಗಳು ಹಾಗೂ ಕ್ರಷರ್ ಘಟಕ ಕಾರ್ಯ
ಚಟುವಟಿಕೆಗಳಿಗೆ ಈ ಕೆಳಕಂಡ ಮುಂಜಾಗ್ರತಾ
ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಕೆಲವು
ನಿಬಂಧನೆ ಹಾಗೂ ಷರತ್ತುಗಳೊಂದಿಗೆ ಆರಂಭಿಸಲು
ತಿಳಿಸಲಾಗಿದೆ.
ಷರತ್ತುಗಳು: ಕೋವಿಡ್-19 ತಡೆಗಟ್ಟಲು ಮುಂಜಾಗ್ರತಾ
ಕ್ರಮವಾಗಿ ಸರ್ಕಾರ ಜಾರಿಗೊಳಿಸಿದ ಎಲ್ಲಾ ವಿಧಾನಗಳನ್ನು
ಕಾರ್ಮಿಕರು ಅಳವಡಿಸಿಕೊಂಡು ಸುರಕ್ಷತೆ
ಕಾಪಾಡಿಕೊಳ್ಳುವುದು. ಗುತ್ತಿಗೆ ಪ್ರದೇಶಗಳಲ್ಲಿ ಕಾರ್ಯ
ನಿರ್ವಹಿಸುವ ಕಾರ್ಮಿಕರು ಸಾಮಾಜಿಕ ಅಂತರವನ್ನು
ಕಾಯ್ದುಕೊಳ್ಳುವುದು. ಗಣಿ/ಕಲ್ಲು/ಮರಳು ಗುತ್ತಿಗೆ

ಪ್ರದೇಶಗಳು ಹಾಗೂ ಕ್ರಷರ್ ಘಟಕಗಳಲ್ಲಿ ಬಳಸುವ
ವಾಹನಗಳು ಹಾಗೂ ಉಪಕರಣಗಳಿಗೆ ಆಗಿಂದಾಗ್ಗೆ
ಡಿಸ್‍ಇನ್‍ಫೆಕ್ಷನ್ ದ್ರಾವಣ ಸಿಂಪಡಿಸಿ ವೈರಸ್ ಮುಕ್ತವಾಗಿರುವಂತೆ
ನೋಡಿಕೊಳ್ಳುವುದು. ಶೌಚಾಲಯ, ವಾಟರ್ ಪಂಪ್ ಮುಂತಾದ
ಕಡೆ ಕಡ್ಡಾಯವಾಗಿ ಸೋಪ್ ಮತ್ತು ಸ್ಯಾನಿಟೈಸರ್
ಬಳಸುವುದು. ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು
ಕಾರ್ಯ ನಿರ್ವಹಿಸುವುದು ಮತ್ತು ಹೊರ ಪ್ರದೇಶದಿಂದ
ಕಾರ್ಮಿಕರನ್ನು ಕರೆತರುವಂತಿಲ್ಲ.
ಎಲ್ಲಾ ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಗ್ಲೌಸ್
ಧರಿಸುವುದು. ಎಲ್ಲಾ ಕಾರ್ಮಿಕರು ಹಾಗೂ ಸಿಬ್ಬಂದಿಗಳು
ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್
ಮಾಡಿಕೊಂಡು ವಿವರಗಳನ್ನು ಅಪ್ಲಿಕೇಷನ್‍ಲ್ಲಿ ದಾಖಲಿಸವುದು.
ಗಣಿಗಾರಿಕೆ/ಕ್ರಷರ್ ಪ್ರದೇಶಗಳಲ್ಲಿ 05 ಅಥವಾ ಅದಕ್ಕಿಂತ
ಹೆಚ್ಚಿನ ಜನರು ಒಟ್ಟಾಗಿ ಸೇರಿಸುವುದನ್ನು ನಿರ್ಬಂಧಿಸಿದೆ.
ಕಾರ್ಮಿಕರ ಸುರಕ್ಷತಾ ದೃಷ್ಟಿಯಿಂದ ಗುಟ್ಕಾ, ತಂಬಾಕು
ಬಳಕೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ
ಉಗುಳುವುದನ್ನು ನಿಷೇಧಿಸಿದೆ. ಗಣಿ ಮಾಲೀಕರು ಹಾಗೂ
ಕಾರ್ಮಿಕರನ್ನು ಹೊರತುಪಡಿಸಿ ಇತರೆ ಸಾರ್ವಜನಿಕರು/
ಸಂದರ್ಶಕರನ್ನು ಗಣಿಗಾರಿಕೆ ಪ್ರದೇಶಗಳಲ್ಲಿ ನಿóಷೇಧಿಸಿದೆ.
ಎಲ್ಲಾ ಕಾರ್ಮಿಕರಿಗೆ ಪ್ರತಿ ದಿನ ಊಟದ ವ್ಯವಸ್ಥೆ ಅಥವಾ
ಮೂಲಭೂತ ಸೌಕರ್ಯ, ಟೆಂಪರೇಚರ್ ಸ್ಕ್ರೀನಿಂಗ್
ನಡೆಸುವುದು. ಸ್ಯಾನಿಟೈಸರ್/ಸೋಪ್ ನೀಡಿ ಆಗಿಂದಾಗ್ಗೆ ಕೈ
ತೊಳೆದುಕೊಳ್ಳುವಂತೆ ಶುಚಿತ್ವಕ್ಕೆ ಆದ್ಯತೆ ನೀಡುವುದು.
60 ವರ್ಷ ಮೇಲ್ಪಟ್ಟವರಯ, ದೃಷ್ಟಿಹೀನ, ಅಂಗವೈಕಲ್ಯ
ಹೊಂದಿರುವ ಹಾಗೂ 14 ವರ್ಷದ ಒಳಪಟ್ಟ ಮಕ್ಕಳನ್ನು
ಹಾಗೂ ಅನಾರೋಗ್ಯ ಪೀಡಿತರನ್ನು ಕಾರ್ಮಿಕರಾಗಿ ಕೆಲಸ
ನಿರ್ವಹಿಸಲು ನಿರ್ಬಂಧಿಸಲಾಗಿರುತ್ತದೆ. ಕಾರ್ಮಿಕರಿಗೆ
ಕಡ್ಡಾಯವಾಗಿ ಆರೋಗ್ಯ ವಿಮೆಯನ್ನು ಮಾಡಿಸುವುದು.
ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವುದು. ಕೋವಿಡ್-19
ತಡೆಗಟ್ಟುವ ಸಂಬಂಧ ಕಾರ್ಮಿಕರಿಗೆ ಜಾಗೃತಿ
ಮೂಡಿಸುವುದು. ಯಾವುದೇ ಶೀತ, ಕೆಮ್ಮು, ಜ್ವರ ರೋಗ
ಲಕ್ಷಣಗಳು ಕಾರ್ಮಿಕರಲ್ಲಿ ಕಂಡುಬಂದಲ್ಲಿ ತಕ್ಷಣ ಜಿಲ್ಲಾ
ಕಂಟ್ರೋಲ್ ರೂಂ ಸಂಖ್ಯೆ.-1077 ಕ್ಕೆ ಹಾಗೂ ಸ್ಥಳೀಯ
ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡುವುದು. ಬೆಳಿಗ್ಗೆ 6 ರಿಂದ
ಸಂಜೆ 6 ರವರೆಗೆ ಮಾತ್ರ ಕೆಲಸ ನಿರ್ವಹಿಸುವುದು.
ಈ ಮೇಲ್ಕಂಡ ಸೂಚನೆಗಳನ್ನು ಉಲ್ಲಂಘಿಸಿದಲ್ಲಿ ವಿಪತ್ತು
ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 58 ಹಾಗೂ ಐಪಿಸಿ ಸೆಕ್ಷನ್ 188ರ

ರೀತ್ಯಾ ಕಾನೂನು ಕ್ರಮ ಜರುಗಿಸಲಾಗುವುದು ಎಂದು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *