ದಾವಣಗೆರೆ, ಏ.29
ಕೊರೋನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ
ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ
ಮಂಗಳವಾರ (ಏ.28) ಜಿಲ್ಲಾಡಳಿತ ಭವನದಲ್ಲಿ ಶ್ರೀ
ಶಂಕರಾಚಾರ್ಯರ ಜಯಂತಿಯನ್ನು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಅವರು ಶಂಕರಾಚಾರ್ಯರ
ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ
ಆಚರಿಸಲಾಯಿತು.
ಪುಷ್ಪಾರ್ಚನೆ ಮಾಡಿದ ಜಿಲ್ಲಾಧಿಕಾರಿಗಳು,
ಶಂಕರಾಚಾರ್ಯರು ತೋರಿದ ಭಕ್ತಿ ಮಾರ್ಗದಲ್ಲಿ ನಾವೆಲ್ಲರೂ
ನಡೆಯೋಣ. ಅವರ ತತ್ವಾದರ್ಶಗಳನ್ನು ಪಾಲಿಸೋಣ ಎಂದರು.
ಸಮಾಜದ ಎಲ್ಲ ಮುಖಂಡರಿಗೂ ಶಂಕರಾಚಾರ್ಯರ
ಜಯಂತಿಯ ಶುಭಾಶಯಗಳನ್ನು ತಿಳಿಸಿದರು.
ಶಂಕರ ಸೇವಾ ಸಂಘದ ಅಧ್ಯಕ್ಷ ಡಾ.ಬಿ.ಟಿ.ಅಚ್ಚುತ್
ಮಾತನಾಡಿ, ಲಾಕ್ಡೌನ್ ಹಿನ್ನೆಲೆಯಲ್ಲಿ 250 ಬಡಕುಟುಂಬಗಳಿಗೆ
ಆಹಾರ ಕಿಟ್ಗಳನ್ನು ಸಂಘದಿಂದ ವಿತರಣೆ ಮಾಡಲಾಗಿದೆ.
ಅಲ್ಲದೇ ಲಾಕ್ಡೌನ್ ಜಾರಿಯಾದ ದಿನದಿಂದ 21 ದಿನಗಳವರೆಗೆ 500
ಜನರಿಗೆ ಆಹಾರ ಪೊಟ್ಟಣ ಊಟ ನೀಡಲಾಗಿದೆ ಎಂದರು.
ಶಂಕರ ಸೇವಾ ಸಂಘದಿಂದ ಜಿಲ್ಲಾಧಿಕಾರಿಗಳಿಗೆ
ಶಂಕರಾಚಾರ್ಯರ ಪುಸ್ತಕವನ್ನು ಉಡುಗರೆಯಾಗಿ
ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ
ಯಶೋಧಮ್ಮ ಮರುಳಪ್ಪ, ಸ್ಮಾರ್ಟ್ ಸಿಟಿ ಎಂ.ಡಿ ರವೀಂದ್ರ
ಮಲ್ಲಾಪುರ್, ಕನ್ನಡ ಸಂಸ್ಕøತಿ ಇಲಾಖೆ ಸಹಾಯಕ
ನಿರ್ದೇಶಕ ರವಿಚಂದ್ರ, ಶಂಕರ ಸೇವಾ ಸಂಘದ
ಕಾರ್ಯದರ್ಶಿ ಉಮಾಕಾಂತ ದೀಕ್ಷಿತ್, ಸದಸ್ಯರಾದ ಗಿರೀಶ ನಾಡಿಗ್,
ವಿನಾಯಕ್ ಜೋಷಿ, ಮೋತಿ ಸುಬ್ರಮಣ್ಯ, ಬಾಲಕೃಷ್ಣ ವೈದ್ಯ,
ಸತ್ಯನಾರಾಯಣ ರಾವ್, ಹಾಜರಿದ್ದರು.