ದಾವಣಗೆರೆ ಜಿಲ್ಲೆಯ ಸಣ್ಣ ವರ್ತರು, ದೊಡ್ಡ ಪ್ರಮಾಣದ ವರ್ತಕರು,
ಎ.ಪಿ.ಎಂ.ಸಿ ಖರೀದಿ ಮತ್ತು ದಲಾಲಿ ವರ್ತಕರುಗಳು, ಸಣ್ಣ ಮತ್ತು ಮಧ್ಯಮ
ಕೈಗಾರಿಕೊಧ್ಯಮಿಗಳಿಗೆ ನಮ್ಮ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ
ಪರವಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಕರ್ನಾಟಕ ರಾಜ್ಯ ವಾಣಿಜ್ಯ
ತೆರಿಗೆ ಇಲಾಖೆಯ ಆಯುಕ್ತರ ಮೌಖಿಕ ಸಂದೇಶದ ಪ್ರಕಾರ
ತಾವುಗಳು ಅಂದರೆ ಮೇಲ್ಕಂಡ ವರ್ತಕರುಗಳು ತಮ್ಮ ವ್ಯಾಪಾರದಲ್ಲಿ
ನಡೆಯುವ ಖರೀದಿ ಮತ್ತು ವಿಕ್ರಿ ಬಿಲ್ಲುಗಳು ಮತ್ತು ದಿನವಹಿ
ಪುಸ್ತಕಗಳನ್ನು ಬರೆದಿಟ್ಟುಕೊಳ್ಳಬೇಕು, ಕಾರಣ ವಾಣಿಜ್ಯ ತೆರಿಗೆ
ಇಲಾಖೆಯ ಇಟಿಜಿoಡಿಛಿemeಟಿಣ (ಜಾರಿ) ಇವರುಗಳು ತಮ್ಮ ವ್ಯಾಪಾರದ
ಸ್ಥಳಗಳಿಗೆ ಪರಿಶೀಲನೆ ನಡೆಸಲು ಬರುತ್ತಾರೆ, ಆ ಸಮಯದಲ್ಲಿ
ತಾವುಗಳು ಖರೀದಿ ಮತ್ತು ವಿಕ್ರಿ ಬಿಲ್ಲುಗಳನ್ನು ಮತ್ತು ದಿನವಹಿ
ಪುಸ್ತಕಗಳನ್ನು ತೋರಿಸದೇ ಇದ್ದಲ್ಲಿ ಜಿ.ಎಸ್.ಟಿ ಕಾಯ್ದೆಯನ್ವಯ
ಮೊದಲ ಬಾರಿ ರೂ.20,000/- ಎರಡನೇ ಬಾರಿ ರೂ.50,000/- ದಂಡಗಳನ್ನು
ವಿಧಿಸಲಿದ್ದಾರೆ. ಆ ದಂಡವನ್ನು ಅಧಿಕಾರಿಗಳು ಪರಿಶೀಲಿಸಿ ತಮಗೆ ನೋಟೀಸ್ ಜಾರಿ
ಮಾಡಿದಲ್ಲಿ 7 ದಿನಗಳೊಳಗಾಗಿ ಅಂತರ್ಜಾಲದಲ್ಲಿ ಪಾವತಿಸಬೇಕಾಗುತ್ತದೆ.
ಈ ಎಲ್ಲಾ ದಂಡಗಳನ್ನು ತಪ್ಪಿಸಲು ತಾವುಗಳು ವಿಕ್ರಿ ಬಿಲ್ಲುಗಳನ್ನು
ಹಾಕಿ ಮತ್ತು ದಿನವಹಿ ಪುಸ್ತಕಗಳನ್ನು ತಮ್ಮ ವ್ಯಾಪಾರದ ಸ್ಥಳದಲ್ಲಿ
ಇಡತಕ್ಕದ್ದು.
ತಾವುಗಳು ದೇಶದ ಆರ್ಥಿಕ ಪರಿಸ್ಥತಿ ಕುಸಿದಿರುವುದರಿಂದ
ವ್ಯಾಪಾರಸ್ಥರು ಕೈಗಾರಿಕೊಧ್ಯಮಿಗಳು ತೆರಿಗೆಯನ್ನು ಪಾವತಿಸಿ
ಕಾರಣೀಭೂತರಾಗಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ.
ವಂದನೆಗಳೊಂದಿಗೆ