ದಾವಣಗೆರೆ ಏ.30.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಗೀರಥ
ಮಹರ್ಷಿ ಅವರ ಜಯಂತಿ ಆಚರಣೆಯನ್ನು ಅವರ ಭಾವಚಿತ್ರಕ್ಕೆ
ಪುಷ್ಪ ಅರ್ಪಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ
ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಪದ್ಮಾ ಬಸಂತಪ್ಪ,
ಮಹಾನಗರಪಾಲಿಕೆ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಜಿಲ್ಲಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಡಾ.ರಾಘವೇಂದ್ರಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ
ಸಹಾಯಕ ನಿರ್ದೇಶಕ ರವಿಚಂದ್ರ, ಜಿಲ್ಲಾ ಭಗೀರಥ ಸಂಘದ
ಅಧ್ಯಕ್ಷರಾದ ಚಂದ್ರಪ್ಪ ಎನ್.ಎಸ್, ಮಾಜಿ ಅಧ್ಯಕ್ಷ
ಪರಶುರಾಮಪ್ಪ, ಭಗೀರಥ ಸಮುದಾಯದ ಕಾರ್ಯದರ್ಶಿ
ಭರತ್, ಸಮುದಾಯದ ಮುಖಂಡರಾದ ದೇವರಾಜ್,
ಲೋಕೇಶ್, ಉಪಸ್ಥಿತರಿದ್ದರು.