ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ ಬುಧವಾರ ರಾತ್ರಿ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೊನ್ನಾಳಿ ಸಿ.ಪಿ.ಐ ಟಿ.ವಿ.ದೇವರಾಜ, ನ್ಯಾಮತಿ ಎಸ್.ಐ. ಹನುಮಂತಪ್ಪ ಶಿರೀಹಳ್ಳಿ, ಹೊನ್ನಾಳಿ ಎಸ್.ಐ. ಟಿ.ಎನ್. ತಿಪ್ಪೇಸ್ವಾಮಿ, ನ್ಯಾಮತಿ ಉಪತಹಶೀಲ್ದಾರ್ ನ್ಯಾಮತಿ ನಾಗರಾಜಪ್ಪ, ನೇತೃತ್ವದಲ್ಲಿ ನ್ಯಾಮತಿ-ಸುರಹೊನ್ನೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಯಿತು.


ಈ ಸಂದರ್ಭದಲ್ಲಿ ಗೃಹ ರಕ್ಷದ ದಳದ ಪ್ಲೇಟೂನ್ ರಾಘವೇಂದ್ರ ಮೂಳೆಕರ್, ಗ್ರಾ.ಪಂ.ಸದಸ್ಯ ಸಿ.ಕೆ.ರವಿಕುಮಾರ್, ಕರ್ನಾಟಕ ಪತ್ರಕರ್ತರ ಸಂಘದ ಡಿ.ಎಂ.ಹಾಲಾರಾಧ್ಯ, ಹೆಚ್.ಎಂ.ಎಸ್. ಶಾಸ್ತ್ರೀ ಹೊಳೆಮಠ್, ಆರ್.ಟಿ.ಐ. ಕಾರ್ಯಕರ್ತ ಡಿ.ಎಂ. ವಿಜೇಂದ್ರ ಮಹೇಂದ್ರಕರ್ ಪಥ ಸಂಚಲನದಲ್ಲಿ ಇದ್ದರು.

Leave a Reply

Your email address will not be published. Required fields are marked *