ದಾವಣಗೆರೆ ಏ.30
ದಾವಣಗೆರೆಯಲ್ಲಿ ಏಪ್ರಿಲ್ 29 ಮತ್ತು 30 ರಂದು ವರದಿಯಾದ
ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ
ಸೋಂಕುಗಳ ಮೂಲವನ್ನು ಸಿಡಿಆರ್ ವರದಿಯ ಮೂಲಕ ಪತ್ತೆ
ಹಚ್ಚುವ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ
ಕಚೇರಿಯ ತಂಡ ಮತ್ತು ಜಿಲ್ಲಾ ಸರ್ವೇಕ್ಷಣಾ ಘಟಕದಿಂದ
ನಡೆಯುತ್ತಿದೆ.


ರೋಗಿ ಸಂಖ್ಯೆ 533 ಕ್ಕೆ ಸಂಬಂಧಿಸಿದಂತೆ ಪಾಥಮಿಕ ಸಂಪರ್ಕ
ಹೊಂದಿರುವವರು 26 ಹಾಗೂ ಸೆಕೆಂಡರಿ
ಸಂಪರ್ಕದಲ್ಲಿರುವವರು 49 ಜನರನ್ನು ಪತ್ತೆ ಹಚಿ,್ಚ ಈ 75
ವ್ಯಕ್ತಿಗಳ ಗಂಟಲುದ್ರವ ಮಾದರಿಯನ್ನು ಸಂಗ್ರಹಿಸಿ
ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಹಾಗೂ ಇವರನ್ನು
ಇನ್ಸ್ಟಿಟ್ಯೂಷನ್ ಕ್ವಾರಂಟೈನ್ ಮಾಡಿ ಕ್ರಮ ಕೈಗೊಳ್ಳಲಾಗಿದೆ.
ರೋಗಿ ಸಂಖ್ಯೆ 556 ಕ್ಕೆ ಸಂಬಂಧಿಸಿದಂತೆ ಪಾಥಮಿಕ ಸಂಪರ್ಕ
ಹೊಂದಿರುವವರು 10 ಹಾಗೂ ಸೆಕೆಂಡರಿ
ಸಂಪರ್ಕದಲ್ಲಿರುವವರು 12 ಜನರನ್ನು ಪತ್ತೆ ಹಚ್ಚಿ ಇವರ
ಗಂಟಲುದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ
ಕಳುಹಿಸಿಕೊಡಲಾಗಿದೆ ಹಾಗೂ ಇವರನ್ನು ಇನ್ಸ್ಟಿಟ್ಯೂಷನ್
ಕ್ವಾರಂಟೈನ್ ಮಾಡಲಾಗಿದ್ದು, ಈ ರೋಗಿಗೆ ಸಂಬಂಧಿಸಿದ
ಕಾಂಟಾಕ್ಟ್ ಟ್ರೇಸಿಂಗ್ ಇನ್ನೂ ಪ್ರಗತಿಯಲ್ಲಿದೆ.
ಬಾಷಾನಗರ ಮತ್ತು ಜಾಲಿನಗರಗಳಲ್ಲಿ ಕಂಟೈನ್‍ಮೆಂಟ್
ಝೋನ್ ಸ್ಥಾಪಿಸಿ ಡಿಸ್‍ಇನ್‍ಫೆಕ್ಷನ್ ಕೆಲಸ ಮಾಡಲಾಗಿದೆ. ಹಾಗೂ
ಸಕ್ರಿಯ ಸರ್ವೇಕ್ಷಣಾ ಕ್ರಮಗಳನ್ನು ಸಹ ಕೈಗೊಂಡು
ಸರ್ವೇ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *