ABCNews

ದಾವಣಗೆರೆ ಏ.29
ಕೋವಿಡ್ 19 ಸಂಬಂಧ ಏ. 27 ರಂದು ಮಾನ್ಯ
ಮುಖ್ಯಮಂತ್ರಿಗಳ ವಿಡಿಯೋ ಸಂವಾದದಲ್ಲಿ ನಿರ್ದೇಶಿಸಿದ ಪ್ರಕಾರ
ಜಿಲ್ಲೆಯಲ್ಲಿ ಮೇ 3 ರವರೆಗೆ ಲಾಕ್‍ಡೌನ್ ಅವಧಿಯಲ್ಲಿ ಕೆಲವು
ಅಗತ್ಯ ಇಲಾಖೆಗಳಿಗೆ ಮತ್ತು ಆಯ್ದ ಕೆಲವು ವಾಣಿಜ್ಯ
ಚಟುವಟಿಕೆಗಳನ್ನು ಆರಂಭಿಸಲು ಷರತ್ತುಬದ್ದ
ಅನುಮತಿಯನ್ನು ನೀಡಲಾಗಿತ್ತು.
ಆದರೆ ದಾವಣಗೆರೆ ನಗರದಲ್ಲಿ ಏ.29 ರಂದು ಒಂದು ಪಾಸಿಟಿವ್
ಪ್ರಕರಣ ಕಂಡು ಬಂದಿರುವುದರಿಂದ ನಿಯಂತ್ರಣ
ವಲಯವನ್ನು ಅಧಿಸೂಚಿಸಲಾಗಿರುತ್ತದೆ. ಪ್ರಯುಕ್ತ
ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ಅಧಿಸೂಚಿತ
ನಿಯಂತ್ರಣ ವಲಯದ ಬಫರ್ ಝೋನ್ ವ್ಯಾಪ್ತಿಗೆ
ಅನ್ವಯಿಸುವಂತೆ ಮಾತ್ರ ಅನುಮತಿ ನೀಡಲಾಗಿದ್ದ
ಚಟುವಟಿಕೆಗಳ ಆದೇಶವನ್ನು ಹಿಂಪಡೆದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *