Month: April 2020

ಪಾಲಿಕೆ ಸದಸ್ಯ ವಿನಾಯಕ ಪೈಲ್ವಾನ್‍ರಿಂದ 2000 ನಾಗರೀಕರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಗೆ ಶಾಸಕ ಡಾ||ಎಸ್ಸೆಸ್ ಚಾಲನೆ

ದಾವಣಗೆರೆ: ಮಹಾನಗರ ಪಾಲಿಕೆಯ 7ನೇ ವಾರ್ಡ್ ಸದಸ್ಯರಾದ ವಿನಾಯಕ ಪೈಲ್ವಾನ್ ಅವಶ್ಯಕವಿರುವ 2000 ನಾಗರೀಕರಿಗೆ ಜೋಳ್ಕ, ಸಕ್ಕರೆ, ರವೆ, ಬೇಳೆ, ಅಡುಗೆ ಎಣ್ಣೆಯ ಆಹಾರ ಸಾಮಾಗ್ರಿಗಳ ಕಿಟ್‍ನ್ನು ವಿತರಿಸಲು ಡಾ|| ಶಾಮನೂರ ಶಿವಶಂಕರಪ್ಪನವರು ಚಾಲನೆ ನೀಡಿದರು. ಇಂದು ಬೆಳಿಗ್ಗೆ ತಮ್ಮ ಗೃಹ…

ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕ ರವೀಂದ್ರನಾಥ್ ಸಲಹೆ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಪ್ರಕರಣ ಬಾರದಂತೆ ನೋಡಿಕೊಳ್ಳಿ

ದಾವಣಗೆರೆ, ಏ.17 ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಈಗಾಗಲೇ ಜಿಲ್ಲಾಡಳಿತ ಉತ್ತಮ ಕ್ರಮ ಕೈಗೊಂಡಿದೆ. ಅದನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಪ್ರಕರಣ ಬಾರದಂತೆ ನೋಡಿಕೊಳ್ಳುವುದರ ಮೂಲಕ ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಶಾಸಕ…

ನಿಮಗಾಗಿ ನಾವು ಬೀದಿಯಲ್ಲಿದೇವೆ ನೀವು ಮನೆಯಲ್ಲಿಯೇ ಇರಿ : ಜಿಲ್ಲಾಧಿಕಾರಿ ಲಾಕ್‍ಡೌನ್ ಉಲ್ಲಂಘಿಸಿ ಅನವಶ್ಯಕವಾಗಿ ತಿರುಗಾಡಿದರೆ   ಕೇಸ್ ಕಡ್ಡಾಯ ಒದೆ ಬೋನಸ್ : ಎಸ್‍ಪಿ

ದಾವಣಗೆರೆ, ಏ.17 ಅನವಶ್ಯಕವಾಗಿ ಬೈಕ್ ಮೇಲೆ ತಿರುಗಾಡುತ್ತಿದ್ದ ವಾಹನ ಸವಾರರನ್ನು ಬಂಧಿಸಿದ್ದೇವೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಯಾರೂ ಮನೆಯಿಂದ ಹೊರಬರಬಾರದು. ನಿಮಗಾಗಿ ನಾವು ಬೀದಿಯಲ್ಲಿದ್ದೇವೆ. ದಯಮಾಡಿ ನೀವು ಮನೆಯಲ್ಲಿಯೇ ಇರಿ ಎಂದು ಧ್ವನಿವರ್ಧಕಗಳ ಮೂಲಕ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಾರ್ವಜನಿಕರಿಗೆ ವಿನಂತಿ ಮಾಡಿದರು.…

3 ಲೀಟರ್ ನೀರು ಮಿಶ್ರಿತ ಸರ್ಜಿಕಲ್ ಸ್ಪಿರಿಟ್ ಜಪ್ತಿ

ದಾವಣಗೆರೆ ಏ.16 ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಮದ್ಯ ಮಾರಾಟ ನೀಷೆಧಿಸಿರುವ ಹಿನ್ನೆಲೆ ಸಿದ್ದವೀರಪ್ಪ ಬಡಾವಣೆಯ 1663/60ಎ, 10ನೇ ಕ್ರಾಸ್, 10 ನೇ ಮೇನ್ ನಿವಾಸಿ ದಲ್ಲಾಳಿ ಬಸವರಾಜಪ್ಪ, 57 ವರ್ಷ ಇವರು ಔಷಧಿ ಅಂಗಡಿಗಳಲ್ಲಿ ದೊರೆಯುವ ಸರ್ಜಿಕಲ್…

ಲಾಕ್‍ಡೌನ್ ಆದೇಶ ಮೀರಿ ಓಡಾಡಿದರೆ ಬಂಧನ ವೈದ್ಯರ ಸಲಹೆ ಇಲ್ಲದೇ ಔಷಧಿ ತೆಗೆದುಕೊಂಡರೆ 1077 ಗೆ ಮಾಹಿತಿ ನೀಡಿ : ಡಿಸಿ

ದಾವಣಗೆರೆ ಏ.16 ಸಾರ್ವಜನಿಕರು ವೈದ್ಯರ ಸಲಹಾ ಚೀಟಿ ಇಲ್ಲದೇ ಮೆಡಿಕಲ್ ಶಾಪ್‍ಗಳಿಗೆ ಬಂದು ಕೆಮ್ಮು, ಶೀತ, ಜ್ವರ ಮತ್ತು ಗಂಟಲುನೋವಿಗೆ ಮಾತ್ರೆ ಅಥವಾ ಸಿರಪ್ ಖರೀದಿಸಿದರೆ ಮೆಡಿಕಲ್ ಶಾಪ್‍ನವರು ಅಂತಹ ವ್ಯಕ್ತಿಗಳ ಮೊಬೈಲ್ ಸಂಖ್ಯೆ ತೆಗೆದುಕೊಂಡು ಜಿಲ್ಲಾಡಳಿತದ ಸಹಾಯವಾಣಿ 1077 ಗೆ…

“ದಿನ ಬಳಕೆ ವಸ್ತುಗಳು ಸಿಗದೆ ಕಂಗಾಲದ ನಿವೃತ್ತ ಸೈನಿಕರು”

ದಾವಣಗೆರೆ ಜಿಲ್ಲೆ;-ಏ 16 ಹೊನ್ನಾಳಿ ತಾಲೂಕು “ದಿನ ಬಳಕೆ ವಸ್ತುಗಳು ಸಿಗದೆ ಕಂಗಾಲದ ನಿವೃತ್ತ ಸೈನಿಕರು” ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ನಿವೃತ್ತ ಸೈನಿಕ ಸಂಘದ ಅಧ್ಯಕ್ಷರಾದ ಎಂ ವಾಸಪ್ಪನವರು ಎ.ಬಿ.ಸಿ ನ್ಯೂಸ್ ಆನ್ ಲೈನ್ ಚಾನಲ್ ಪತ್ರಿಕಾಗೊಷ್ಠಿ ಮೂಲಕ ಮಾತನಾಡಿ…

ನಕಲಿ ಮದ್ಯ ಮಾರಾಟ ಕಂಡುಬಂದಲ್ಲಿ ಕಂಟ್ರೋಲ್ ರೂಂಗೆ ಕರೆ ಮಾಡಿ

ದಾವಣಗೆರೆ ಏ.16 ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಮದ್ಯ ಮಾರಾಟ ಹಾಗೂ ಮದ್ಯ ಸರಬರಾಜು ನಿಷೇಧಿಸಲಾಗಿದೆ. ಆದರೆ ಕೆಲವು ಸಮಾಜಘಾತುಕ ವ್ಯಕ್ತಿಗಳು ದಾವಣಗೆರೆ ಜಿಲ್ಲೆಯಾದ್ಯಂತ ಸ್ಪಿರಿಟ್ (ಮದ್ಯಸಾರ) ನ್ನು ಬಳಸಿ ನಕಲಿ ಮದ್ಯ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು…

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕ್‍ಗಳ ಒಕ್ಕೂಟದಿಂದ 7.31 ಲಕ್ಷ ರೂ.

ದಾವಣಗೆರೆ : ಕರೋನಾ ವೈರಸ್‍ನಿಂದ ದೇಶಾದ್ಯಂತ ಲಾಕ್ ಡೌನ್ ಆಗಿ ಆರ್ಥಿಕ ಸಂಕಷ್ಟದಿಂದ ಸಂತ್ರಸ್ಥರಿಗೆ ನೆರವಾಗುವ ದೃಷ್ಟಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಾವಣಗೆರೆ ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕ್‍ಗಳ ಒಕ್ಕೂಟದಿಂದ 7,31,001 ರೂಗಳನ್ನು ಪರಿಹಾರ ನೀಡಲಾಯಿತು. ಇಂದು ಒಕ್ಕೂಟದ ಗೌರವ ಅಧ್ಯಕ್ಷರು,…

ಇಂಡಸ್ ಟವರ್ಸ್ ಕಂಪೆನಿಯಿಂದ ಪಿಪಿಇ ಕಿಟ್ಸ್ ದೇಣಿಗೆ

ದಾವಣಗೆರೆ ಏ.15 ( ಕೋವಿಡ್-19 ನಿಯಂತ್ರಣ ಹಿನ್ನೆಲೆ ಬೆಂಗಳೂರಿನ ಇಂಡಸ್ ಟವರ್ಸ್ ಲಿಮಿಟೆಡ್ ವತಿಯಿಂದ ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರಿಗೆ ಈ ಕಂಪೆನಿಯ ಪ್ರತಿನಿಧಿಗಳು 50 ಪಿಪಿಇ (ಪರ್ಸನಲ್ ಪ್ರೊಟೆಕ್ಟಿವ್ ಕಿಟ್ಸ್) ಕಿಟ್‍ಗಳನ್ನು ದೇಣಿಗೆ ರೂಪದಲ್ಲಿ ನೀಡಿದರು.