ದಾವಣಗೆರೆ ಜು.07
ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ದಿ ಸಚಿವರಾದ ಬಿ.ಎ.ಬಸವರಾಜ
ಇವರು ಜು.16 ರಂದು ಸಂಜೆ 6 ಗಂಟೆಗೆ ದಾವಣಗೆರೆ ಪ್ರವಾಸಿ
ಮಂದಿರಕ್ಕೆ ಆಗಮಿಸುವರು ಹಾಗೂ ವಾಸ್ತವ್ಯ ಮಾಡುವರು.
ಜು.17 ರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ
ಏರ್ಪಡಿಸಿರುವ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ
(ಕೆ.ಡಿ.ಪಿ ಸಭೆ)ಯಲ್ಲಿ ಪಾಲ್ಗೊಳ್ಳುವರು ನಂತರ ಮಧ್ಯಾಹ್ನ 3.30
ಕ್ಕೆ ದಾವಣಗೆರೆಯಿಂದ ನಿರ್ಗಮಿಸಿ ಚಿತ್ರದುರ್ಗಕ್ಕೆ ತೆರಳುವರೆಂದು
ಪ್ರಕಟಣೆ ತಿಳಿಸಿದೆ.
