ದಾವಣಗೆರೆ ಜು.07
ದಾವಣಗೆರೆ ಜಿಲ್ಲೆಯಲ್ಲಿರುವ ಕರ್ನಾಟಕ ರಾಜ್ಯ ವಕ್ಫ್
ಮಂಡಳಿಯಲ್ಲಿ ನೋಂದಣಿಯಾದ ಮಸೀದಿಗಳಲ್ಲಿ ಈಗಾಗಲೇ
ಪೇಶ್ ಇಮಾಮ್ ಹಾಗೂ ಮೌಜಿನ್ ಆಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿ
ನಿವೃತ್ತಿ ಹೊಂದಿರುವವರು ಹಾಗೂ 65 ವರ್ಷ ವಯೋಮಾನದ
ವೃದ್ದ ಪೇಶ್ ಇಮಾಮ್ರಿಗೆ ತಿಂಗಳಿಗೆ ರೂ.2000/- ಹಾಗೂ ಮೌಜಿನ್
ರವರಿಗೆ ತಿಂಗಳಿಗೆ ರೂ.1.500/- ಪಿಂಚಣಿ ಪಾವತಿಸುವ
ಯೋಜನೆಯನ್ನು ಕರ್ನಾಟಕ ರಾಜ್ಯ ವಕ್ಪ್ ಮಂಡಳಿ ಜಾರಿಗೊಳಿಸಿದೆ.
ಮಸೀದಿಗಳಿಂದ ನಿವೃತ್ತಿ ಹೊಂದಿದ ವೃದ್ದ ಪೇಶ್ ಇಮಾಮ್ ಹಾಗೂ
ಮೌಜಿನ್ಗಳು ಇದರ ಸದುಪಯೋಗವನ್ನು
ಪಡೆದುಕೊಳ್ಳಬಹುದು.
ಪಿಂಚಣಿ ಪಡೆಯಲು ಬೇಕಾಗುವ ಅಗತ್ಯ ದಾಖಲೆಗಳು: ಅರ್ಜಿ
ನಮೂನೆ, ಮಸೀದಿಯ ಅಧ್ಯಕ್ಷರು ನೀಡುವ ಸೇವಾ
ಪ್ರಮಾಣಪತ್ರ, 3 ಭಾವಚಿತ್ರ, ಆಧಾರ್ ಕಾರ್ಡ್, ಗುರುತಿನ ಚೀಟಿ, ಜಾತಿ
ಮತ್ತು ಆದಾಯ ಪ್ರಮಾಣ ಪತ್ರ(ಆದಾಯ ರೂ.1.20 ಲಕ್ಷಕ್ಕಿಂತ
ಕಡಿಮೆ ಇರುವವರು ಅರ್ಹರು), ರಾಷ್ಟ್ರೀಕೃತ ಬ್ಯಾಂಕ್ ಖಾತೆಯ
ಪಾಸ್ ಬುಕ್ ಪ್ರತಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜನಾಬ್
ಮೊಹಮ್ಮದ್ ಸಿರಾಜ್, ಅಧ್ಯಕ್ಷರು, ಜಿಲ್ಲಾ ವಕ್ಪ್ ಸಲಹಾ ಸಮಿತಿ,
ದಾವಣಗೆರೆ ಇವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
