ದಾವಣಗೆರೆ ಜು.08
ಕಳಪೆ ಬಿತ್ತನೆ ಬೀಜ ಮಾರಾಟದ ಮೇಲೆ ತೀವ್ರ ನಿಗಾ
ವಹಿಸಬೇಕು. ಇಂತಹ ಪ್ರಕರಣಗಳು ಕಂಡುಬಂದರೆ ಕಠಿಣ
ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೃಷಿ ಇಲಾಖೆಯ 2020-
21ನೇ ಸಾಲಿನ ಜಿಲ್ಲಾ ಮಟ್ಟದ ಟಾಸ್ಕ್‍ಫೆÇೀರ್ಸ್ ಸಭೆಯ ಅಧ್ಯಕ್ಷತೆ
ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜದ ಬಗ್ಗೆ
ರೈತರಿಂದ ಎಲ್ಲಿಯೂ ಕೂಡ ದೂರು ಬರಬಾರದು. ಒಂದು ವೇಳೆ
ದೂರು ಬಂದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ
ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಯಾವುದೇ ಬಿತ್ತನೆ ಬೀಜ, ರಸಗೊಬ್ಬರದ
ಕೊರತೆ ಬಾರದಂತೆ ನೋಡಿಕೊಳ್ಳಬೇಕು. ಎಲ್ಲ
ಕಡೆಗಳಲ್ಲಿಯೂ ಸರಿಯಾಗಿ ವಿತರಣೆ ಮಾಡಬೇಕು.
ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗಬಾರದು.
ಆಗಸ್ಟ್ ತಿಂಗಳವರೆಗೂ ದಾಸ್ತಾನು ಇರುವಂತೆ ನೋಡಿಕೊಂಡು
ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು. ಜೊತೆಗೆ ಖಾಸಗಿ
ಅಂಗಡಿಗಳಲ್ಲಿ ಬಿತ್ತನೆ ಬೀಜಗಳು, ರಸಗೊಬ್ಬರಗಳು ಹೆಚ್ಚಿನ
ಬೆಲೆಗೆ ಮಾರಾಟ ಆಗದಂತೆ ಕ್ರಮ ವಹಿಸಬೇಕು. ಯಾವುದೇ
ಕಾರಣಕ್ಕೂ ರೈತರು ಅನ್ಯಾಯಕ್ಕೆ ಒಳಗಾಗಬಾರದು ಎಂದು
ಅಧಿಕಾರಿಗಳಿಗೆ ಸೂಚಿಸಿದರು.
ಜಗಳೂರಿನಲ್ಲಿ ಕಳಪೆ ಮಟ್ಟದ ಬಿತ್ತನೆ ಬೀಜ ವಿತರಣೆ
ಮಾಡಲಾಗಿದೆ ಎಂಬುದರ ಬಗ್ಗೆ ರೈತರಿಂದ ದೂರುಗಳಿರುವ ಬಗ್ಗೆ
ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಕೃಷಿ
ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಮಳೆ ಬಂದು ಬೀಜ
ಕಪ್ಪಾಗಿದ್ದವು ಅμÉ್ಟೀ. ಅವು ಕಳಪೆ ಆಗಿರಲಿಲ್ಲ ಎಂದ ಅವರು,
ರೈತರಿಗೆ ವಿತರಣೆ ಮಾಡಲಾದ ಬೀಜಗಳನ್ನು ಹಿಂಪಡೆದು ಬೇರೆ
ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಉತ್ತಮ
ಗುಣಮಟ್ಟದ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಈಗಾಗಲೇ ಎಲ್ಲ ಸಹಾಯಕ ಕೃಷಿ ಅಧಿಕಾರಿಗಳಿಗೆ ಕಳಪೆ
ಗುಣಮಟ್ಟದ ಬಿತ್ತನೆ ಬೀಜದ ಬಗ್ಗೆ ನಿಗಾವಹಿಸಲು ನಿರ್ದೇಶನ
ನೀಡಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಒಟ್ಟು ಬಿತ್ತನೆ ಬೀಜ ಮುಂಗಾರು ಬೇಡಿಕೆ 40,381
ಕ್ವಿಂಟಾಲ್ ಅವಶ್ಯಕವಿತ್ತು. ದಾಸ್ತಾನು 41,647 ಕ್ವಿಂಟಾಲ್ ಇದ್ದು,
37,500 ಕ್ವಿಂಟಾಲ್ ವಿತರಣೆ ಮಾಡಲಾಗಿದೆ. 4,147 ಕ್ವಿಂಟಾಲ್ ಉಳಿಕೆ ಇದೆ.
ಜೊತೆಗೆ ಜುಲೈ ಮಾಹೆಯಲ್ಲಿ 65,286 ಟನ್ ರಸಗೊಬ್ಬರ ದಾಸ್ತಾನು
ಇದೆ. 1,800 ಟನ್ ರರಸಗೊಬ್ಬರ ಸರÀಬರಾಜಾಗಿದ್ದು, ಕಾಪು
ರಸಗೊಬ್ಬರ ಸೇರಿದಂತೆ ಒಟ್ಟು 81,432 ಟನ್ ರಸಗೊಬ್ಬರ ಲಭ್ಯವಿದೆ.
ಈವರೆಗೆ 52,335 ಟನ್ ರಸಗೊಬ್ಬರ ಮಾರಾಟವಾಗಿದ್ದು, 29,096 ಟನ್
ರಸಗೊಬ್ಬರ ದಾಸ್ತಾನು ಇದೆ. ಇಲ್ಲಿಯವರೆಗೆ ಯಾವುದೇ
ರಸಗೊಬ್ಬರದ ಕೊರತೆ ಇರುವುದಿಲ್ಲ ಎಂದು ಸಭೆಗೆ ವಿವರಣೆ
ನೀಡಿದರು.
ಸರ್ಕಾರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ
ಪ್ರಧಾನಮಂತ್ರಿ ಫಸಲು ಬಿಮಾ (ವಿಮಾ) ಯೋಜನೆ ಹಾಗೂ ಬೆಳೆ
ವಿಮಾ ಯೋಜನೆಯನ್ನು ಜಾರಿಗೊಳಿಸಿದೆ. ಇದನ್ನು
ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಅಗತ್ಯ ಕ್ರಮ
ಕೈಗೊಳ್ಳುವಂತೆ ಕೃಷಿ, ತೋಟಗಾರಿಕೆ, ಲೀಡ್ ಬ್ಯಾಂಕ್ ಅಧಿಕಾರಿಗಳು
ಮತ್ತು ಬ್ಯಾಂಕ್‍ಗಳ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಸರ್ಕಾರ ರೈತರ ಅನುಕೂಲಕ್ಕಾಗಿ ಈ ವಿಮಾ ಯೋಜನೆಯನ್ನು
ಜಾರಿಗೊಳಿಸಿದ್ದು, ಈ ಕಾರ್ಯಕ್ರಮ ಅನುμÁ್ಠನಗೊಳಿಸಲು ಎಲ್ಲಾ
ಅಧಿಕಾರಿಗಳು ಸಹಕರಿಸಬೇಕು. ಮುಂಗಾರು ಹಂಗಾಮಿನಲ್ಲಿ
ಅತಿವೃಷ್ಟಿಯಿಂದ ಬೆಳೆ ನಷ್ಟ ಉಂಟಾದಲ್ಲಿ ವಿಮಾ ಸೌಲಭ್ಯ ಪಡೆಯಲು
ಈ ಯೋಜನೆಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ,
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ಬಿಮಾ
ಯೋಜನೆಯಡಿ ಭತ್ತ ಮತ್ತು ಮುಸುಕಿನ ಜೋಳ
ಒಳಪಟ್ಟಿದ್ದು, ವಿಮಾ ಕಂತು ಪಾವತಿಸಲು ಜು. 30 ಕೊನೆಯ
ದಿನವಾಗಿದೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು,
ರೈತರು ವಿಮೆ ಸೌಲಭ್ಯ ಪಡೆಯಲು ಜಾಗೃತಿ, ಅರಿವು
ಮೂಡಿಸಬೇಕು. ಇದಕ್ಕಾಗಿ ಪ್ರಚಾರ ನೀಡಬೇಕು. ಜಿಲ್ಲೆಯಲ್ಲಿ
ಹೆಚ್ಚು ಬೆಳೆ ವಿಮೆ ಮಾಡಿಸಲು ಅಧಿಕಾರಿಗಳು, ಬ್ಯಾಂಕ್
ವ್ಯವಸ್ಥಾಪಕರು ಸಹಕರಿಸಬೇಕು. ಜೊತೆಗೆ ಬೆಳೆ ವಿಮೆ
ಮಾಡಿಸಲು ಕೊನೆಯ ದಿನದವರೆಗೆ ರೈತರು ಕಾಯಬಾರದು.
ಇಂದಿನಿಂದಲೇ ಬೆಳೆ ವಿಮೆ ಮಾಡಿಸಲು ರೈತರಲ್ಲಿ ಮನವಿ ಮಾಡಿ ಎಂದು
ತಿಳಿಸಿದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆವಾರು ಬಿತ್ತನೆಯಲ್ಲಿ
ನಿಗದಿತ ಗುರಿ ಸಾಧಿಸಬೇಕು ಎಂದ ಅವರು, ಜಿಲ್ಲೆಯಲ್ಲಿ ಬೆಳೆ
ನೋಂದಣಿ ಸಮರ್ಪಕವಾಗಿ ಆಗುತ್ತಿಲ್ಲ. ಬೆಳೆಯಲ್ಲಿ ಯಾವುದೇ
ವ್ಯತ್ಯಾಸವಾಗಬಾರÀದು. ಹೊನ್ನಾಳಿ-ಜಗಳೂರು ಭಾಗಗಳಲ್ಲಿ
ಕ್ರಾಪ್ ಎಂಟ್ರಿ ಸರಿಯಾಗು ಆಗುತ್ತಿಲ್ಲ. ಇದರಲ್ಲಿ ಲೋಪ
ಕಂಡುಬಂದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ನೇರವಾಗಿ
ಹೊಣೆಗಾರರಾಗುತ್ತಾರೆ. ಜೊತೆಗೆ ಬ್ಯಾಂಕ್‍ಗಳಲ್ಲಿ ಬೆಳೆ ವಿಮೆಗೆ
ಸಂಬಂಧಪಟ್ಟಂತೆ ಬಹಳಷ್ಟು ಅಡಚಣೆಗಳಿವೆ ಎಂಬುದರ ಬಗ್ಗೆ
ದೂರುಗಳಿವೆ. ಸಾಲ ರಹಿತ ಫಲಾನುಭವಿಗಳು ಬಂದಾಗ
ಯಾರನ್ನು ಕೂಡ ವಾಪಾಸ್ಸು ಕಳುಹಿಸಬಾರದು. ಇದನ್ನು
ಗಂಭೀರವಾಗಿ ಪರಿಗಣಿಸಬೇಕು ಎಂದು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ
ತಿಳಿಸಿದರು.
ಹರಿಹರ, ಮಲೆಬೆನ್ನೂರು ಭಾಗಗಳಲ್ಲಿ ಸ್ವಯಂ ಪ್ರೇರಿತವಾಗಿ
ಲಾಕ್‍ಡೌನ್ ಮಾಡಿಕೊಳ್ಳಲಾಗಿದೆ. ನಾವು ಯಾವುದೇ ಆದೇಶ
ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಆ ಭಾಗದ ತಹಶೀಲ್ದಾರ್ ಗಮನಕ್ಕೆ
ತಂದು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು
ರೈತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ
ಕೃಷಿಗೆ ಸಂಬಂಧಪಟ್ಟಂತಹ ಬಿತ್ತನೆ ಬೀಜ, ರಸಗೊಬ್ಬರ ಹಾಗೂ
ಕೃಷಿ ಯಂತ್ರೋಪಕರಣಗಳ ಅಂಗಡಿಗಳು
ಸಂಜೆಯವÀರೆಗೆ ತೆರೆಯುವಂತೆ ನೋಡಿಕೊಳ್ಳಲು
ಅಧಿಕಾರಿಗಳಿಗೆ ತಿಳಿಸಿದರು.
ಇದೇ ವೇಳೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ
ಫಸಲು ಬಿಮಾ (ವಿಮಾ) ಯೋಜನೆ ಪ್ರಚಾರಕ್ಕೆ ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಚಾಲನೆ ನೀಡಿದರು. ಸಭೆಯಲ್ಲಿ ಹೆಚ್ಚುವರಿ
ಪೊಲೀಸ್ ಅಧೀಕ್ಷಕ ರಾಜೀವ್, ಉಪ ಕೃಷಿ ನಿರ್ದೇಶಕರು, ಸಹಾಯಕ
ಕೃಷಿ ನಿರ್ದೇಶಕರು, ವಿಮಾ ಕಂಪನಿ ಪ್ರÀತಿನಿಧಿಗಳು, ಲೀಡ್ ಬ್ಯಾಂಕ್
ಮ್ಯಾನೇಜರ್, ಡಿಸಿಸಿ ಬ್ಯಾಂಕ್ ಪ್ರರತಿನಿಧಿಗಳು, ಸಹಕಾರಿ ಸಂಘಗಳ
ಉಪನಿಬಂಧಕರು, ರಸಗೊಬ್ಬರ ಮಾರಾಟಾಧಿಕಾರಿಗಳು,
ರಸಗೊಬ್ಬರ ಉತ್ಪಾದನಾ ಕಂಪನಿಯ ಪ್ರತಿನಿಧಿಗಳು, ಜಿಲ್ಲಾ
ಕೃಷಿಕ ಸಮಾಜದ ಅಧ್ಯಕ್ಷರು, ಎ.ಆರ್.ಎಸ್. ಕತ್ತಲಗೆರೆ
ವಿಜ್ಞಾನಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.