ದಾವಣಗೆರೆ ಜು.09 

  ಕೇಂದ್ರ ಪುರಸ್ಕ್ರತ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ
ಆತ್ಮ-ನಿರ್ಭರ್ ನಿಧಿಯ
(Pಓ-Sಗಿಂಓiಜhi) ಯೋಜನೆಯನ್ನು
ಅನುಷ್ಟಾನಗೊಳಿಸಲಾಗುತ್ತಿದ್ದು, ಈ ಯೋಜನೆಯ ಲಾಭ
ಪಡೆದುಕೊಳ್ಳಲು ಬೀದಿ ವ್ಯಾಪಾರಿಗಳು ದಾವಣಗೆರೆ
ಮಹಾನಗರಪಾಲಿಕೆಗೆ ಅರ್ಜಿ ಸಲ್ಲಿಸಬಹುದಾಗಿದೆ.
   ಈ ಯೋಜನೆಯಡಿ ಬೀದಿ ವ್ಯಾಪಾರಸ್ಥರಿಗೆ ಕೈಗೆಟುಕುವ ದರದಲ್ಲಿ
ಬ್ಯಾಂಕ್‍ಗಳ ಮೂಲಕ ರೂ. 10,000 ವರೆಗೆ ಸಾಲ ಸೌಲಭ್ಯ
ನೀಡಲಾಗುವುದು. ನಿಯಮಿತವಾಗಿ ಸಾಲ ಮರುಪಾವತಿ ಮಾಡಿದವರಿಗೆ
ಶೇ.7 ರ ಬಡ್ಡಿ ಸಹಾಯಧನ ನೀಡಲಾಗುವುದು. ಸಮೀಕ್ಷೆಯಲ್ಲಿ
ಗುರುತಿಸಲ್ಪಟ್ಟು, ಗುರುತಿನ ಕಾರ್ಡ್ ಹೊಂದಿರುವ ಬೀದಿ
ವ್ಯಾಪಾರಸ್ಥರು ಅರ್ಹ ಫಲಾನುಭವಿಗಳಾಗಿದ್ದು ನಿಗದಿತ
ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಜು.30 ಅರ್ಜಿ ಸಲ್ಲಿಸಲು
ಕೊನೆಯ ದಿನವಾಗಿದ್ದು, ಫಲಾನುಭವಿಗಳು ಜು.20 ರೊಳಗೆ
ಪಾಲಿಕೆಯಿಂದ ಬೀದಿಬದಿ ವ್ಯಾಪಾರದ ಮಾರಾಟ ಪ್ರಮಾಣ ಪತ್ರ, ಆಧಾರ್
ಕಾರ್ಡ್, ಮುಂತಾದ ದಾಖಲೆಗಳೊಂದಿಗೆ ಪಾಲಿಕೆಗೆ ಅರ್ಜಿ ಸಲ್ಲಿಸಬಹುದು.
  ಹೆಚ್ಚಿನ ಮಾಹಿತಿಗಾಗಿ ಕಚೇರಿಯ
ವೆಬ್‍ಸೈಟ್ ತಿತಿತಿ.ಜಚಿvಚಿಟಿಚಿgeಡಿeಛಿiಣಥಿ.mಡಿಛಿ.gov.iಟಿ ನಲ್ಲಿ ಅಥವಾ ಕಚೇರಿ
ಸಮಯದಲ್ಲಿ ಎಎಸ್‍ಜೆಎಸ್‍ಆರ್‍ವೈ ಶಾಖೆಗೆ ಭೇಟಿಯಾಗಬಹುದೆಂದು
ಮಹಾನಗರಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *