ದಾವಣಗೆರೆ ಜಿಲ್ಲೆ ಜುಲೈ 9 ಹೊನ್ನಾಳಿ ಟೌನ್ ಗೆ ಕೊರೋನಾ ವಕ್ಕರಿಸಿದ ಹಿನ್ನೆಲೆಯಲ್ಲಿ ಇಂದು ತಾಲೂಕ ದಂಡಾಧಿಕಾರಿಗಳ ನೇತೃತ್ವದಲ್ಲಿ ಪಟ್ಟಣದಲ್ಲಿ . ಆರು ಕಂಟೋನ್ಮೆಂಟ್ ಜೋನ್ ಗಳಾಗಿವೆ ಕೋಟೆಯ ರಾಮ ದೇವಸ್ಥಾನದ ಹತ್ತಿರ, ಸಂತೆ ಮಾರ್ಕೆಟ್ ,ಮಿಕ್ಸಿ ರಿಪೇರಿ ಅಂಗಡಿ ಅಕ್ಕಪಕ್ಕ , ಬಾಲರಾಜ್ ಗಾಟ್,ಎರಡನೆಯ ರಸ್ತೆ ಕುಂಬಾರಕೇರಿ, ತಿಮ್ಮಿನ ಕಟ್ಟೆ ರಸ್ತೆ ,ದೊಡ್ಡಗಣ್ಣರ ಬೀದಿ 6 ಕಂಟೋನ್ಮೆಂಟ್ ಜೊನ್ ಗಳಿಂದ 12 ಪಾಸಿಟಿವ್ ಗಾಯತ್ರಿ ಮೆಡಿಕಲ್ ಕಾಂಪ್ಲೆಕ್ಸ್ ಸೇರಿದಂತೆ ದಿಡಗೂರ ಹರಳಹಳ್ಳಿಯಲ್ಲಿ 2 ಬಂದಿದೆ ಎಂದು ಮಾನ್ಯ ತಹಸೀಲ್ದಾರರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರತರಾದ ಅಧಿಕಾರಿಗಳು ತಾಲೂಕ್ ದಂಡಾಧಿಕಾರಿಗಳು ತುಷಾರ್ ಬಿ ಹೊಸೂರಾ, ತಾಲೂಕು ವೈದ್ಯಾಧಿಕಾರಿಗಳಾದ ಕೆಂಚಪ್ಪ ಬಂತಿ ,ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ವೀರಭದ್ರಯ್ಯ ನವರು ,ಮತ್ತು ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ರವರು ,
ಇನ್ಸ್ ಪೆಕ್ಟರ್ ಗಳಾದ ತಿಪ್ಪೇಸ್ವಾಮಿ, ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ,ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ವರ್ಗ ,ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿವರ್ಗದ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಯಿತು.