ದಾವಣಗೆರೆ ಜು.15 
     ಜಿಲ್ಲಾ ಪಂಚಾಯತ್ ಸಿಇಓ ಪದ್ಮಾ ಬಸವಂತಪ್ಪ ಇವರು ಇಂದು
ಚನ್ನಗಿರಿ ತಾಲ್ಲೂಕಿನ ಮೆದಿಕೆರೆ, ಸಂತೇಬೆನ್ನೂರು, ದಿಗ್ಗಿಹಳ್ಳಿ,
ರಾಜಗೊಂಡನಹಳ್ಳಿ ತಾಂಡ, ಪಾಂಡೊಮಟ್ಟಿ, ತಾವರಕೆರೆ,
ಹಿರೇಕೋಗಲೂರು ಸೇರಿದಂತೆ ಗ್ರಾಮೀಣ ಭಾಗದ ಕೋವಿಡ್ 19
ಕಂಟೈನ್‍ಮೆಂಟ್ ಝೋನ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ
ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಮನೆಗಳ ಯಾವ
ವ್ಯಕ್ತಿಗಳೂ ಹೊರಗೆ ಬಾರದಂತೆ ಬ್ಯಾರಿಕೇಡ್‍ಗಳನ್ನು
ಹಾಕಲು ಹಾಗೂ ಈ ವಲಯದಲ್ಲಿ ಇರುವ ಮನೆಗಳಿಗೆ ಅಗತ್ಯ
ವಸ್ತುಗಳನ್ನು ಮತ್ತು ಜಾನುವಾರುಗಳಿಗೆ ಮೇವು
ಸರಬರಾಜು ಮಾಡುವಂತೆ ಸಂಬಂಧಿಸಿದ ಪಿಡಿಓ ಗಳಿಗೆ ಸೂಚನೆ
ನೀಡಿದರು.

Leave a Reply

Your email address will not be published. Required fields are marked *