ದಾವಣಗೆರೆ ಜು.18
ಜಿಲ್ಲೆಯಲ್ಲಿ ಕೋರೋನಾದಿಂದ ಸಂಭವಿಸುತ್ತಿರುವ ಸಾವಿನ
ಪ್ರಮಾಣ ರಾಜ್ಯದ ಸರಾಸರಿಗಿಂತ ಹೆಚ್ಚಿದ್ದು ಈ ಪ್ರಮಾಣವನ್ನು
ಕಡಿಮೆಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗೆಗೆ
ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ
ಚರ್ಚಿಸಲಾಯಿತು.
ಜಿಲ್ಲಾಡಳಿತ ಭವನದಲ್ಲಿ ಇಂದು ನಡೆದ ಜಿಲ್ಲಾಮಟ್ಟದ
ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಹಾಗೂ ತಜ್ಞ
ವೈದ್ಯÀರುಗಳನ್ನುÀ ಉದ್ದೇಶಿಸಿ ಮಾತಾನಾಡಿದ ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಅವರು ನಮ್ಮ ಜಿಲ್ಲೆಯ ವೈದ್ಯರ
ತಂಡ ಹಾಗೂ ಕೋವಿಡ್ ಹಿನ್ನಲೆಯಲ್ಲಿ
ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಉತ್ತಮವಾಗಿ
ಕಾರ್ಯ ನಿರ್ವಹಿಸಿದ್ದು, ನನಗೆ ತೃಪ್ತಿ ಇದೆ ಆದರೆ ಎಲ್ಲೋ ಒಂದು
ಕಡೆ ಸಾವಿನ ಪ್ರಮಾಣ ನಮ್ಮ ಕಾರ್ಯದಕ್ಷತೆಯನ್ನ
ಪ್ರಶ್ನಿಸುವಂತಿದೆ. ನಮ್ಮಲ್ಲಿ ಸಾಕಷ್ಟು ತಜ್ಞ ವೈದ್ಯರುಗಳು
ಇದ್ದಾಗಿಯೂ ನಾವು ಎಲ್ಲಿ ಎಡವುತ್ತಿದ್ದೇವೆ. ಹಾಗೂ ಎಲ್ಲಿ
ಸರಿಪಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸಾವಿನ ಪ್ರಮಾಣ
ತಗ್ಗಿಸಲು ಅನುಸರಿಸಬೇಕಾದ ಮಾಗೋಪಾಯದ ಬಗ್ಗೆ ಚರ್ಚೆ
ನಡೆಸುತ್ತಿದ್ದೇವೆÉ ಹಾಗೂ ಎಷ್ಟೇ ಕೇಸ್ ಬರಲಿ ನಿಭಾಯಿಸಲು
ಜಿಲ್ಲಾಡಳಿತ ತಂಡ ಸಿದ್ದವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ವೇಕ್ಷಣ
ತಂಡ ಲ್ಯಾಬ್ ಪರೀಕ್ಷಾ ಪ್ರಮಾಣ ಹೆಚ್ಚಿಸಬೇಕು ಹಾಗೂ
ತಾಲ್ಲೂಕುವಾರು ನೀಡಿರುವ ಮೊಬೈಲ್ ಕೋವಿಡ್ ಟೆಸ್ಟಿಂಗ್
ವಾಹನಗಳನ್ನು ತೀವ್ರ ಅನಾರೋಗ್ಯ ವ್ಯಕ್ತಿಗಳು ಇರುವ
ಮನೆಯ ಬಳಿಯೇ ಸಾಗಿ ಪರೀಕ್ಷ್ಷೆಗೆ ಒಳಪಡಿಸುವ ಮೂಲಕ
ಅದಷ್ಟು ಬೇಗ ಸೋಂಕಿಗೆ ಸಿಲುಕಿರುವರನ್ನು ಹಾಗೂ

ಸೋಂಕಿಗೆ ಒಳಗಾಗುರುವರನ್ನು ಪತ್ತೆ ಹಚ್ಚಬೇಕಾಗಿದೆ.
ಎಂದರು
ಕೇರಳ ರಾಜ್ಯದ ಮಾದರಿಯಲ್ಲಿ ಸಾÀಮೂಹಿಕ ಸಹಭಾಗಿತ್ವದಲ್ಲಿ
ಎಲ್ಲರೂ ಮುಂದೆ ಬಂದು ಕೆಲಸ ಮಾಡಬೇಕು.ನಮ್ಮ ಜನ
ಪ್ರತಿನಿಧಿಗಳು, ಮುಖಂಡರೂ, ಈ ಕಾರ್ಯದಲ್ಲಿ
ಕೈಜೋಡಿಸಬೇಕು.
ಈಗಾಗಲೇ ರಚಿಸಲಾಗಿರುವ ವಾರ್ಡ್ ಸಮಿತಿಗಳು ಹೆಚ್ಚು
ಕ್ರಿಯಾಶೀ¯ವಾಗಿ ಕಾರ್ಯನಿರ್ವಹಿಸÀಬೇಕು ಮಹಾನಗರಪಾಲಿಕೆ
ಆಯುಕ್ತರು ಈ ಸಮಿತಿಗಳ ತರಬೇತಿ
ಕಾರ್ಯನಿರ್ವಹಣೆಯನ್ನು ಯಶಸ್ವಿಯಾಗಿ
ನೋಡಿಕೊಳ್ಳಬೇಕು. ಹಾಗೂ ಮುಂದಿನ ದಿನಗಳಲ್ಲಿ ಎಷ್ಟೇ
ಕೇಸ್ ಗಳು ಬಂದರು ನಿಬಾಯಿಸಲು ಸಿದ್ದವಾಗಿರಬೇಕು. ಮತ್ತು
ಅದಷ್ಟು ಸೋಂಕಿತರು ವೆಂಟಿಲೇಟರ್ ಗೆ ಹೋಗುವುದನ್ನು
ಕಡಿಮೆ ಮಾಡಲು ತಪಾಸಾಣೆ ತೀವ್ರÀವಾಗಬೇಕು.
ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಮೂರು ಲ್ಯಾಬ್ ಗಳು
ಕೋರೋನಾ ಪರೀಕ್ಷೆಗೆ ತೊಡಗಿದ್ದು, ಇನ್ನೂ ಹೆಚ್ಚಿನ
ಕ್ಷಿಪ್ರವೇಗದಲ್ಲಿ ಪರೀಕ್ಷೆ ನಡೆಸಲು ಸಿದ್ದವಾಗಬೇಕು. ಅದಕ್ಕೆ
ಬೇಕಾದ ಯಾವುದೇ ಸಹಕಾರವನ್ನು ನನ್ನನ್ನು ಕೇಳಿ
ಒಟ್ಟ್ಟಾರೆ ಟೆಸ್ಟಿಂU,ïಸರ್ವೇಕ್ಷಣೆ ಆಸ್ಪತ್ರೆಗೆ ಅದಷ್ಟು ಬೇಗ
ಸೇರಿಸುವ ಕೆಲಸ ಆಗಬೇಕು ಎಂದರು
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವಾನ್ ಮಾಹಿತಿನೀಡಿ ಈ ಹಿಂದೆ
ಕೆಲವರು ರೆಗ್ಯೂಲರ್ ಆಗಿ ಚಕ್ ಆಪ್‍ಗೆ ಒಳಗಾಗುತ್ತಿದ್ದರು.
ಲಾಕ್‍ಡೌನ್ ನಂತರ ಈ ರೀತಿ ಮುಂಚಿತವಾಗಿ ತಪಾಸಣೆಗೆÉ
ಒಳಗಾಗುವರು ಕಡಿಮೆಯಾಗಿದ್ದಾರೆ. ವೈದ್ಯಕೀಯ
ಸಿಬ್ಬಂದಿಗಳು ಕರೋನಾ ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ. ಬಿಪಿ
ಶುಗರ್ ನಂತಹ ಖಾಯಿಲೆ ಇರುವವರು ಆಸ್ಪತ್ರೆಗೆ
ಬರುವುದನ್ನು ತಡಮಾಡುವುದರಿಂದ ಹೆಚ್ಚು
ತೊಂದರೆಯಾಗುತ್ತಿದೆ. ಎಂದರು.
ತಜ್ಞ ವೈದ್ಯರಾದ ಡಾ.ಕಾಳಪ್ಪ ಮಾತಾನಾಡಿ, ಎಸ್ ಎಸ್
ಆಸ್ಪತ್ರೆಯಲ್ಲಿ ಒಟ್ಟು 9 ಸಾವು ಸಂಭವಿಸಿವೆ ಇದರಲ್ಲಿ 4 ಮಂದಿ
ಕೊನೆಯ 4 ಗಂಟೆ ಒಳಗೆ ನಮ್ಮ ಆಸ್ಪತ್ರೆಯಲ್ಲಿ
ದಾಖಲಾಗಿದ್ದಾರೆ. ಉಳಿದ 4 ಮಂದಿ 24 ಗಂಟೆಯ ಅವಧಿಯಲ್ಲಿ
ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೀಗೆ ಕಡೇಘಳಿಗೆಯಲ್ಲಿ
ಆಸ್ಪತ್ರೆಗೆ ಬಂದರೆ ಇತರೆ ಖಾಯಿಲೆಯೊಂದಿಗೆ ಕರೋನಾ
ಭಾದಿತರಾದವರನ್ನು ಉಳಿಸುವುದು ಕಷ್ಟ ಎಂದರು.
ಡಾ. ಮೀನಾಕ್ಷಿ ಮಾಹಿತಿ ನೀಡಿ ನಗರದಲ್ಲಿ ಒಟ್ಟು 70
ಕಂಟೈನ್‍ಮೆಂಟ್‍ಜೋನ್‍ಗಳಿವೆ ಆರೋಗ್ಯ ಸಿಬಂದ್ದಿಗಳು

ಕಡಿಮೆ ಇದ್ದಾರೆ ಹಾಗೂ ಆಶಾ ಕಾರ್ಯಕರ್ತೆಯರು
ಹೋರಾಟದಲ್ಲಿ ತೊಡಗಿದ್ದಾರೆ. ಹಾಗಾಗಿ ಸರ್ವೇಕ್ಷಣೆ ಸ್ವಲ್ಪ
ತಡವಾಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ,
ಜಿ.ಪಂ ಸಿಇಒ ಪದ್ಮಬಸವಂತಪ್ಪ, ಅಪರ ಜಿಲ್ಲಾಧಿಕಾರಿ
ಪೂಜಾರವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತ
ಹೊಸಗೌಡರ್ ಡಿಹೆಚ್‍ಓ ರಾಘವೇಂದ್ರಸ್ವಾಮಿ, ಡಾ.ಸುರೇಂದ್ರ,
ಡಾ.ಮಹಾಂತೇಶ್,ಡಾ. ರವಿ, ಡಾ.ಪ್ರಸಾದ್ ಜಿಲ್ಲಾಕೋವಿಡ್ ನೋಡೆಲ್
ಅಧಿಕಾರಿ ಪ್ರಮೋದ್ ನಾಯಕ್, ಡಾ.ನಾಗರಾಜ್ ಸೇರಿದಂತೆ ಹಿರಿಯ
ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *