ಬೆಂಗಳೂರಿನಲ್ಲಿ ಕೊವಿಡ್-19 ಕಳೆದ ನಾಲ್ಕು ತಿಂಗಳಿಂದ ಕೊರೋನಾದಿಂದ ಜನರು ಪರಿತಪಿಸುತ್ತಿದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಊಟ ಉಪಚಾರ ಸಿಗದೇ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚದಿಂದ ಸುಸ್ತಾಗಿದ್ದು ಹಣ ಖಾಲಿಯಾಗಿ ಮನೆ ಆಸ್ತಿ ಮಾರುವ ಸ್ಥಿತಿ ಬಂದಿದೆ. ಹಾಗೂ ಇತ್ತೀಚಿನ ದಿನಗಳಲ್ಲಿ ಯಾವುದೇ ಆಸ್ಪತ್ರೆಯಲ್ಲಿ ಜಾಗ ಇಲ್ಲದೇ ಬೀದಿ ಬೀದಿಯಲ್ಲಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಹಾಗೂ ಸರಿಯಾದ ಸಂದರ್ಭದಲ್ಲಿ ಅಂಬುಲೆನ್ಸ್ ಸಿಗುತ್ತಿಲ್ಲ. ಸಾರಿಗೆ ವ್ಯವಸ್ಥೆ ಇಲ್ಲದೇ ಕಳೆದ ಆರು ತಿಂಗಳಿಂದ ಯಾರೊಬ್ಬರಿಗೂ ಕೆಲಸವಿಲ್ಲದೆ ಜೇಬಲ್ಲಿರುವ ಹಣ ಖಾಲಿಯಾಗಿ ಆಕಾಶ ನೋಡಬೇಕಾಗಿದೆ. ಕಾರಣ ಸರ್ಕಾರದ ವ್ಯವಸ್ಥೆ ಸರಿಯಲ್ಲ. ತಾಲ್ಲೂಕುಗಳಲ್ಲಿ, ಜಿಲ್ಲೆಗಳಲ್ಲಿ. ಹಾಗೂ ಬೆಂಗಳೂರು ಜನರ ಗೋಳು ಹೇಳತೀರದು. ಬೆಂಗಳೂರು ಖಾಲಿ ಮಾಡಿ ಹೊರಹೋಗುವ ದೃಶ್ಯ ಕಣ್ಣು ಕಟ್ಟಿದೆ. ಆದ್ದರಿಂದ ಸರ್ಕಾರ ಎಲ್ಲಾ ಯೋಜನೆಗಳನ್ನು ಬದಿಗಿಟ್ಟು ಆ ಹಣವನ್ನು ಕೊರೋನಾ ಪಾಸಿಟಿವ್ ಬಂದಂತಹವರಿಗೆ ಹಾಗೂ ಮುಂದೆ ಕೊರೋನಾ ಬರುವ ರಾಜ್ಯದ ಬಡತನದಲ್ಲಿರುವ ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ (ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ) ವ್ಯವಸ್ಥೆ ಮಾಡಲು ಹಾಗೂ ಕೊರೋನಾ ರಾಜ್ಯದಲ್ಲಿ ಕೊನೆಯಾಗುವ ತನಕ ಯಾರಿಂದಲೂ ಹಣ ವಸೂಲಿ ಮಾಡಬಾರದಾಗಿ ರಾಜ್ಯದ ಹಿಂದುಳಿದ ಬಡವರ ಪರವಾಗಿ ಅಗ್ರಹಿಸುತ್ತೇನೆ. ಎಂ.ಡಿ.ಲಕ್ಷ್ಮೀನಾರಾಯಣ (ಅಣ್ಣಯ್ಯ) ಮಾಜಿ ಶಾಸಕರು ಅಧ್ಯಕ್ಷರು – ರಾಜ್ಯ ಹಿಂದುಳಿದ ವರ್ಗಗಳ ವಿಭಾಗ. ಅಧ್ಯಕ್ಷರು – ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ. ಬೆಂಗಳೂರು

Leave a Reply

Your email address will not be published. Required fields are marked *