ದಾವಣಗೆರೆ ಜು.30
2020-21 ನೇ ಸಾಲಿಗೆ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ
ನಾಗರಿಕರ ಸಬಲೀಕರಣ ಇಲಾಖೆಯಿಂದ
ಶೇ. 60ಕ್ಕಿಂತ ಹೆಚ್ಚು ಅಂಕ ಪಡೆದ ವಿಕಲಚೇತನ ವಿದ್ಯಾರ್ಥಿಗಳಿಗೆ
ಪ್ರೋತ್ಸಾಹಧನ ಯೋಜನೆ &ಚಿmಠಿ; ಸಾಧನ ಸಲಕರಣೆ ಯೋಜನೆಯಡಿ
ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರೋತ್ಸಾಹಧನ ಯೋಜನೆ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ರೂ.3000/-,
ಪಿ.ಯು.ಸಿ ವಿದ್ಯಾರ್ಥಿಗಳಿಗೆ ರೂ.5000/-, ಪದವಿ, ಡಿ.ಎಡ್ ವಿದ್ಯಾರ್ಥಿಗಳಿಗೆ
ರೂ.8000/-, ಬಿ.ಇಡಿ, ಸ್ನಾತಕೋತ್ತರ ಪದವಿ, ಎಂ.ಎ, ಎಂ.ಕಾಂ., ಎಂ.ಎಸ್ಸಿ ಹಾಗೂ
ಪದವಿ ನಂತರ 2 ವರ್ಷಗಳ ಕೋರ್ಸ್ ಮಾಡಿದ ವಿದ್ಯಾರ್ಥಿಗಳಿಗೆ
ರೂ.10,000/- ಹಾಗೂ ಕೃಷಿ ಪದವಿ, ಇಂಜಿನಿಯರಿಂಗ್ ತಾಂತ್ರಿಕ
ಪಶುವೈದ್ಯಕೀಯ, ಎಂ.ಇಡಿ ಮಾಡಿದ ವಿದ್ಯಾರ್ಥಿಗಳಿಗೆ ರೂ.12,000/-
ಪ್ರೋತ್ಸಾಹಧನವನ್ನು ನೀಡಲಾಗುವುದು.
ಪ್ರೋತ್ಸಾಹಧನ ಯೋಜನೆಯಡಿ ಪ್ರಯೋಜನವನ್ನು
ಪಡೆಯಲು ವಿಕಲಚೇತನರು ಕಡ್ಡಾಯವಾಗಿ ರಾಷ್ಟ್ರೀಕೃತ
ಬ್ಯಾಂಕುಗಳಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿರುವ ಉಳಿತಾಯ ಖಾತೆ
ಪುಸ್ತಕದ ಪ್ರತಿ ಹಾಗೂ ಅಂಗವಿಕಲರ ಗುರುತಿನ ಕಾರ್ಡ್
(ಯು.ಡಿ.ಐ.ಸಿ. ಕಾರ್ಡ್), ಆಧಾರ್ ಕಾರ್ಡ್, ಅಂಕಪಟ್ಟಿ ಹಾಗೂ ಇತ್ತೀಚಿನ
ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕು.
ಸಾಧನ ಸಲಕರಣೆ ಯೋಜನೆಯಡಿ ಪ್ರಯೋಜನವನ್ನು
ಪಡೆಯಲು ಕಡ್ಡಾಯವಾಗಿ ಅಂಗವಿಕಲರ ಗುರುತಿನ ಕಾರ್ಡ್
(ಯು.ಡಿ.ಐ.ಸಿ. ಕಾರ್ಡ್), ಆಧಾರ ಕಾರ್ಡ್, ಬಿ.ಪಿ.ಎಲ್. ಜಾತಿ &ಚಿmಠಿ; ಆದಾಯ
ಪ್ರಮಾಣಪತ್ರ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಅರ್ಜಿ
ಸಲ್ಲಿಸಬೇಕು.
ಅರ್ಜಿ ನಮೂನೆಗಳನ್ನು hಣಣಠಿ://ಜತಿಜsಛಿ.ಞಚಿಡಿ.ಟಿiಛಿ.iಟಿ ವೆಬ್ಸೈಟ್ನಿಂದ
ಡೌನ್ಲೋಡ್ ಮಾಡಿಕೊಳ್ಳಬಹುದು ಹಾಗೂ ಗ್ರಾಮ ಪಂಚಾಯ್ತಿ &ಚಿmಠಿ;
ತಾಲ್ಲೂಕು ಪಂಚಾಯ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ
ವಿಆರ್ಡಬ್ಲ್ಯೂ ಮತ್ತು ಎಂಆರ್ಡಬ್ಲ್ಯು ರನ್ನು ಸಂಪರ್ಕಿಸಿ
ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಸಹಾಯವಾಣಿ
&ಚಿmಠಿ; ಮಾಹಿತಿ ಸಲಹಾ ಕೇಂದ್ರ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ
ನಾಗರಿಕರ ಸಬಲೀಕರಣ ಅಧಿಕಾರಿಗಳ ಕಚೆÉೀರಿ, ಶಂಕರಲೀಲಾ ಗ್ಯಾಸ್
ಏಜೆನ್ಸಿ ಹತ್ತಿರ, ಎಂ.ಸಿ.ಸಿ. ‘ಬಿ’ ಬ್ಲಾಕ್, ದಾವಣಗೆರೆ. ದೂ.ಸಂ: 08192-263939 ನ್ನು
ಸಂಪರ್ಕಿಸಬಹುದೆಂದು ಜಿಲ್ಲಾ ಅಂಗವಿಕಲರ ಮತ್ತು ಹಿರಿಯ
ನಾಗರಿಕರ ಕಲ್ಯಾಣಾಧಿಕಾರಿ ಜಿ.ಎಸ್ ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.