ದಾವಣಗೆರೆ ಆ.03
ಜಿಲ್ಲೆಯ ತೋಳಹುಣಸೆ ಗ್ರಾಮ ಮತ್ತು ಹೆಬ್ಬಾಳು ಟೋಲ್
ಗೇಟ್ ಬಳಿ ಜೂ.26 ಮತ್ತು 28 ರಂದು ಆಹಾರ ಇಲಾಖೆ ಮತ್ತು ಪೊಲೀಸ್
ಉಪನಿರೀಕ್ಷಕರು, ಗ್ರಾಮಾಂತರ ಪೊಲೀಸ್ ಠಾಣೆ ದಾವಣಗೆರೆ ಇವರು
ಅಗತ್ಯ ವಸ್ತುಗಳ ಕಾಯ್ದೆ 1955ರ ಪ್ರಕರಣಗಳಲ್ಲಿ
ವಶಪಡಿಸಿಕೊಂಡಿರುವ ಅಕ್ಕಿಯಯನ್ನು ಬಹಿರಂಗ ಹರಾಜು
ಮಾಡಲಾಗುವುದು.
ವಶಪಡಿಸಿಕೊಂಡಿರುವ ದಾಸ್ತಾನು ಕ್ರಮವಾಗಿ 6.32 ಕ್ವಿಂಟಾಲ್ ಹಾಗೂ
202.45 ಕ್ವಿಂಟಾಲ್ ಸೇರಿದಂತೆ ಒಟ್ಟು 208.77ಕ್ವಿಂಟಾಲ್ ಇದ್ದು, ಈ ಅಕ್ಕಿ
ದಾಸ್ತಾನನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಆ.11 ರಂದು
ಬೆಳಿಗ್ಗೆ 11 ಗಂಟೆಗೆ ಟಿ.ಎ.ಪಿ.ಸಿ.ಎಂ.ಸಿ(ಲಿ) ಗ್ರಾಮಾಂತರ ಸಗಟು ಮಳಿಗೆ,
ಎ.ಪಿ.ಎಂ.ಸಿ ಯಾರ್ಡ್, ಡಿ ಬ್ಲಾಕ್, ಎ.ಆರ್.ಸಿ.ಗೋದಾಮು, ಎ.ಪಿ.ಎಂ.ಸಿ ಕಚೇರಿ ಹಿಂಭಾಗ
ದಾವಣಗೆರೆ ಇಲ್ಲಿ ಬಹಿರಂಗ ಹರಾಜು ಮಾಡಲಾಗುವುದೆಂದು ತಹಶೀಲ್ದಾರ್
ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.