ದಾವಣಗೆರೆ ಆ.03
ರೈತ ಪರ, ಜಪರ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರಿಗೆ
ಕೊರೊನಾ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದ್ದು ಅವರು
ಶೀಘ್ರ ಗುಣಮುಖರಾಗಿ ಬಂದು ರಾಜ್ಯದ ಜನರ ಸೇವೆ ಮುಂದುವರೆಸಲಿ
ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಜನಪರ ಕಾಳಜಿ ಇರುವ ಯಡಿಯೂರಪ್ಪ ಅವರಿಗೆ ರಾಜ್ಯದ ಜನರ
ಪ್ರಾರ್ಥನೆ ಹಾಗೂ ಹಾರೈಕೆ ಇದ್ದು, ಮೊದಲಿನಂತೆ ಅವರು ಕರ್ತವ್ಯ
ನಿರ್ವಹಿಸಲಿ ಎಂದು ಆಶಿಸುತ್ತೇನೆ ಎಂದು ನಗರಾಭಿವೃದ್ದಿ ಹಾಗು
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
ಕೇಂದ್ರ ಗೃಹ ಮಂತ್ರಿಗಳು ಶೀಘ್ರ
ಗುಣಮುಖರಾಗಲಿ: ಉಸ್ತುವಾರಿ ಸಚಿವರ ಹಾರೈಕೆ
ದಾವಣಗೆರೆ ಆ.03 (ಕರ್ನಾಟಕ ವಾರ್ತೆ)-
ಕೇಂದ್ರ ಸರ್ಕಾರದ ಗೃಹ ಮಂತ್ರಿಗಳಾದ ಅಮಿತ್ ಷಾ ಅವರಿಗೆ
ಕೊರೊನಾ ಸೋಂಕು ತಗುಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾರೆ.
ದೇಶದ ಹಿತದೃಷ್ಟಿಯಿಂದ ಅವರು ಬೇಗ ಗುಣಮುಖರಾಗಿ ಬರಲಿ
ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ದೇಶದ ಕೋಟ್ಯಾಂತರ
ಜನರ ಹಾರೈಕೆ ಹಾಗೂ ಪ್ರಾರ್ಥನೆಗಳು ಅವರ ಪರವಾಗಿ ಇದೆ.
ಶೀಘ್ರವಾಗಿ ಚೇತರಿಸಿಕೊಂಡು ದೇಶದ ಸೇವೆಗೆ ಅವರು
ತೊಡಗಿಕೊಳ್ಳಲೆಂದುು ಆಶಿಸುತ್ತೇನೆ ಎಂದು ನಗರಾಭಿವೃದ್ದಿ
ಹಾಗು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.