ದಾವಣಗೆರೆ ಆ.03
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಎ.ವಿ.ಕೆ ಕಾಲೇಜು
ರಸ್ತೆಯಲ್ಲಿರುವ ಲಿಡ್‍ಕರ್ ಮಾರಾಟ ಮಳಿಗೆಯಲ್ಲಿ ಆ.3 ರಿಂದ 20
ರವರೆಗೆ ಚರ್ಮ ಕುಶಲಕರ್ಮಿಗಳಿಂದ ತಯಾರಿಸಿದ ಚರ್ಮದ
ವಸ್ತುಗಳು, ಪಾದರಕ್ಷೆಗಳು, ಚರ್ಮದ ಬೆಲ್ಟ್, ಪರ್ಸ್, ಲೇಡಿಸ್ ವ್ಯಾನಿಟಿ
ಬ್ಯಾಗ್‍ಗಳು, ಇತ್ಯಾದಿಗಳನ್ನು ಶೇ.20 ರ ರಿಯಾಯಿತಿ ದರದಲ್ಲಿ ಮಾರಾಟ
ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ
ಪಡೆಯಬಹುದೆಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ
ಅಭಿವೃದ್ದಿ ನಿಗಮ ನಿಯಮಿತದ ಜಿಲ್ಲಾ ಸಂಯೋಜಕರು ಹಾಗೂ
ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.