ದಾವಣಗೆರೆ ಆ.04
2020-21ನೇ ಸಾಲಿನ ಡಿಪ್ಲೋಮಾ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ
ಆನ್‍ಲೈನ್ ಮುಖಾಂತರ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಥಮ ವರ್ಷದ ಡಿಪ್ಲೋಮ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ/ತತ್ಸಮಾನ
ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶೇ.35ರಷ್ಟು ಅಂಕಗಳನ್ನು
ಪಡೆದಿರತಕ್ಕದ್ದು, ಪ್ರವೇಶ ಮಾಹಿತಿ ಪುಸ್ತಕವನ್ನು ಮತ್ತು
ಇಲಾಖೆಯ ವೆಬ್‍ಸೈಟ್‍ಗಳಾದ hಣಣಠಿ://ಜಣeಣeಛಿh.ಞಚಿಡಿಟಿಚಿಣಚಿಞಚಿ.gov.iಟಿ/ಞಚಿಡಿಣeಛಿhಟಿiಛಿಚಿಟ &ಚಿmಠಿ;
ತಿತಿತಿ.ಛಿeಣoಟಿಟiಟಿe.ಞಚಿಡಿಟಿಚಿಣಚಿಞಚಿ.gov.iಟಿ/ಞeಚಿ ತಿಳಿಸಲಾಗುವುದು.
ಆಗಸ್ಟ್ 06 ರಿಂದ 22 ರವರೆಗೆ ಆನ್‍ಲೈನ್ ಮುಖಾಂತರ ಅರ್ಜಿ
ಸಲ್ಲಿಸಬಹುದು. ಆ.24 ರಂದು ವೆಬ್‍ಸೈಟ್‍ನಲ್ಲಿ ಅರ್ಹ ವಿದ್ಯಾರ್ಥಿಗಳ
ತಾತ್ಕಲಿಕ ಮೆರಿಟ್‍ಪಟ್ಟಿಯ ಪ್ರಕಟಣೆಯನ್ನು
ಪ್ರಕಟಿಸಲಾಗುವುದು. ಆ.25 ರಿಂದ 27 ರವರೆಗೆ ಮೆರಿಟ್ ಪಟ್ಟಿ
ಆಕ್ಷೇಪಣೆಗಳಿಗೆ ಮನವಿ ಸಲ್ಲಿಸಲು ಅಂತಿಮ ದಿನಾಂಕವಾಗಿರುತ್ತದೆ.
ಆ.28 ರಂದು ಅಂತಿಮ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುವುದು.
ಸೆ.01 ರಂದು ಅಣುಕು ಸೀಟು ಆಯ್ಕೆ ಫಲಿತಾಂಶ ಪಟ್ಟಿ
ಪ್ರಕಟಿಸಲಾಗುವುದು. ಸೆ.04 ರಂದು ಪ್ರಥಮ ಸುತ್ತಿನ ಸೀಟು
ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುವುದು.
ವಿದ್ಯಾರ್ಥಿಗಳು ತಮ್ಮ ಸಮೀಪದ ಯಾವುದೇ 124 ಸರ್ಕಾರಿ ಮತ್ತು
ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ಹಾಗೂ ಸೈಬರ್ ಸೆಂಟರ್ ಗಳಲ್ಲಿಯೂ
ಅರ್ಜಿಯನ್ನು ಸಲ್ಲಿಸಬಹುದೆಂದು ಡಿ.ಆರ್.ಆರ್ ಪಾಲಿಟೆಕ್ನಿಕ್‍ನ
ಪ್ರಾಚಾರ್ಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.