ದಾವಣಗೆರೆ ಆ.05
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ಕರ್ನಾಟಕ ಆದಿಜಾಂಬವ
ಅಭಿವೃದ್ದಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ, ಕರ್ನಾಟಕ
ಭೋವಿ ಅಭಿವೃದ್ದಿ ನಿಗಮ ಹಾಗೂ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ
ನಿಗಮದಿಂದ ಪರಿಶಿಷ್ಟ ಜಾತಿ ಜನರ ಆರ್ಥಿಕ ಅಭಿವೃದ್ದಿಗಾಗಿ ವಿವಿಧ
ಯೋಜನೆಗಳ ಸಾಲ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಯೋಜನೆಯಡಿ ನೇರಸಾಲ ಯೋಜನೆ,
ಉದ್ಯಮಶೀಲತಾ ಅಭಿವೃದ್ದಿ ಯೋಜನೆ. ಮೈಕ್ರೋ ಕ್ರೆಡಿಟ್
(ಪ್ರೇರಣಾ-ಮಹಿಳಾ ಸ್ವಸಹಾಯ ಗುಂಪುಗಳಿಗೆ) ಯೋಜನೆ, ಭೂ
ಒಡೆತನ ಹಾಗೂ ಗಂಗಾ ಕಲ್ಯಾಣ ಯೋಜನೆಗಳಡಿ ಸಾಲ ಸೌಲಭ್ಯ
ಪಡೆಯಲು ಅರ್ಜಿ ಸಲ್ಲಿಸಬಹುದಾಗಿದ್ದು, ಅಭ್ಯರ್ಥಿಗಳ ವಯೋಮಿತಿ 21
ರಿಂದ 50 ವರ್ಷದೊಳಗಿರಬೇಕು.
ಅರ್ಜಿಗಳನ್ನು ಆಯಾ ನಿಗಮದ ವೆಬ್‍ಸೈಟ್‍ಗಳಾದ ಡಾ.ಬಿ.ಆರ್.
ಅಂಬೇಡ್ಕರ್ ಅಭಿವೃದ್ದಿ ನಿಗಮ hಣಣಠಿ://ಚಿಜಛಿಟ.ಞಚಿಡಿಟಿಚಿಣಚಿಞಚಿ.gov.iಟಿ, ಕರ್ನಾಟಕ
ಆದಿಜಾಂಬವ ಅಭಿವೃದ್ದಿ ನಿಗಮ hಣಣಠಿ://ಚಿಜiರಿಚಿmbಚಿvಚಿ.ಞಚಿಡಿಟಿಚಿಣಚಿಞಚಿ.gov.iಟಿ, ಕರ್ನಾಟಕ
ತಾಂಡಾ ಅಭಿವೃದ್ದಿ ನಿಗಮ hಣಣಠಿ://bಚಿಟಿರಿಚಿಡಿಚಿಣhಚಿಟಿಜಚಿ.ಞಚಿಡಿ.ಟಿiಛಿ.iಟಿ, ಕರ್ನಾಟಕ ರಾಜ್ಯ
ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮ hಣಣಠಿ://ಞssಞಜಛಿ.ಞಚಿಡಿ.ಟಿiಛಿ.iಟಿ ಈ
ವೈಬ್‍ಸೈಟ್‍ಗಳಲ್ಲಿ ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿದ
ಅರ್ಜಿಗಳನ್ನು ಆಯಾ ನಿಗಮದ ಜಿಲ್ಲಾ ಕಚೇರಿಗೆ ಅಥವಾ ಆನ್‍ಲೈನ್‍ನಲ್ಲಿ
ಭರ್ತಿ ಮಾಡಿ ಅವಶ್ಯ ದಾಖಲಾತಿಗಳೊಂದಿಗೆ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್
ಮಾಡಬಹುದು.
ಅರ್ಜಿ ಸಲ್ಲಿಸಲು ಆ.31 ಕಡೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ
ದೂರವಾಣಿ ಸಂಖ್ಯೆ 08192-258648 ಹಾಗೂ ಆಯಾ ನಿಗಮದ ಜಿಲ್ಲಾ
ಕಚೇರಿಯನ್ನು ಸಂಪರ್ಕಿಸಬಹುದೆಂದು ಡಾ.ಬಿ.ಆರ್.ಅಂಬೇಡ್ಕರ್
ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *