ತೂಗುತಿರು ತಂಗಾಳಿಯೆ
ನೀ ಹಗಲಿರುಳು ತೂಗುತಿರು
ನನ್ನವಳ ಉಯ್ಯಾಲೆಗೆ
ನೀ ತಂಪೆರೆಯಲು ತೂಗುತಿರು

ಪ್ರೇಮದ ಉಯ್ಯಾಲೆಗೆ
ನೀ ವರವಾಗಿ ಹರಸುತಿರು
ಅನುರಾಗದ ಅಲೆಗಳನು
ನೀ ಇಂಪಾಗಿ ಬೀಸುತಿರು

ಸಂತಸದ ಕನಸನು
ನಮ್ಮೆದೆಯಲಿ ಬಿತ್ತುತಿರು
ಒಲುಮೆಯ ರಾಶಿಯನು
ಮಳೆಯಾಗಿ ಸುರಿಸುತಿರು

ಸಂತೋಷದ ತೇರನು
ನಮಗಾಗಿ ಸಿಂಗರಿಸು
ಸಂಭ್ರಮದ ಬಾಳನು
ಮಾಧುರ್ಯದ ಕಡಲಾಗಿಸು

ನನ್ನವಳ ಲಾಲಿತ್ಯಕೆ
ಉಲ್ಲಾಸದ ಸೊಬಗಾಗಲು
ಪ್ರೀತಿಯ ಸಂಕೇತಕೆ
ಉನ್ಮಾದದ ಸರಕಾಗಲು

ನನ್ನವಳ ಮಂದಹಾಸಕೆ
ಸೌಭಾಗ್ಯದ ಸಿರಿಯಾಗಲು
ನಗುಮೊಗದ ಚೆಲುವೆಗೆ
ಸೌಮ್ಯದ ಬೆಳಕಾಗಲು..

ತೂಗು ತಿರು ತಂಗಳಿಯೆ ನನ್ನವಳ ನೆಮ್ಮದಿಯನ್ನು

ತೋರಣದ ತರಹ ಸ್ವಾಗತಿ ಸೂ

ಕನಸಿನ ಲೋಕ ದೀ ತೆಲಾಡಿಸು ಓ ತಂಗಾಳಿ ಯೆ ಬೀಸುವಾಗ ತೋಗೆನ್ನ ಪ್ರೇಮದ ಸಿರಿಯಾ

ಜಿ ಕೆ ಹೆಬ್ಬಾರ್

Leave a Reply

Your email address will not be published. Required fields are marked *