ದಾವಣಗೆರೆ ಆ.10
ಜಿಲ್ಲೆಯಲ್ಲಿ ಅನಧಿಕೃತ ಚೀಟಿ ವ್ಯವಹಾರ ನಡೆಸುತ್ತಿರುವುದು
ಹಾಗೂ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಪ್ರಕರಣಗಳ
ಸಂಖ್ಯೆ ಅಧಿಕವಾಗಿರುವುದು ಜಿಲ್ಲೆಯ ಸಹಕಾರ ಸಂಘಗಳ ಉಪ
ನಿಬಂಧಕರ ಕಚೇರಿಯ ಗಮನಕ್ಕೆ ಬಂದಿರುತ್ತದೆ.
ಅನಧಿಕೃತವಾಗಿ ಚೀಟಿ ವ್ಯವಹಾರ ನಡೆಸುವುದು ಕಾನೂನು
ಬಾಹಿರವಾಗಿದ್ದು, ಅಂತಹ ವ್ಯಕ್ತಿಗಳು ಮತ್ತು ಚೀಟಿ ಗುಂಪು
ಪ್ರಾರಂಭಿಸಲು ಪರವಾನಿಗೆ ಪಡೆಯದೆ ಚೀಟಿ ಗುಂಪು ನಡೆಸುವ ಚೀಟಿ
ಸಂಸ್ಥೆಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು.
ಹಾಗೂ ಸಾರ್ವಜನಿಕರು ಅನಧಿಕೃತ ಚೀಟಿ ಸಂಸ್ಥೆಗಳು ಅಥವಾ
ವ್ಯಕ್ತಿಗಳೊಂದಿಗೆ ವ್ಯವಹರಿಸಿ ಮೋಸ ಹೋಗಬಾರದು. ಅಧಿಕೃತ ಚೀಟಿ
ಸಂಸ್ಥೆಗಳಲ್ಲಿ, ಸಂಸ್ಥೆಯು ನಡೆಸುತ್ತಿರುವ ಚೀಟಿಗುಂಪುಗಳಿಗೆ
ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದಿರುವ ಬಗ್ಗೆ ಸಂಸ್ಥೆಯಿದ
ಮಾಹಿತಿ ಪಡೆದು ಖಚಿತ ಪಡಿಸಿಕೊಂಡು ಅಧಿಕೃತವಾಗಿ
ವ್ಯವಹರಿಸಬೇಕೆಂದು ಈ ಮೂಲಕ ತಿಳಿಸಲಾಗಿದೆ ಎಂದು ದಾವಣಗೆರೆ
ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರಾದ ಬಿ.ಜಯಪ್ರಕಾಶ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.