ದಾವಣಗೆರೆ ಆ.12
ದಾವಣಗೆರೆ ಸಿಡಾಕ್-ದಿಶಾ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರದಿಂದ
ಸ್ವಂತ ಉದ್ಯಮ ಪ್ರಾರಂಭಿಸಿ ಸ್ವಾವಲಂಬಿಗಳಾಗಲು ಇಚ್ಛಿಸುವ
ದಾವಣಗೆರೆ ಜಿಲ್ಲೆಯ ಮಹಿಳಾ ಉದ್ಯಮಾಕಾಂಕ್ಷಿಗಳಿಗೆ 30
ದಿನಗಳ(ವಸತಿರಹಿತ) ಬ್ಯೂಟಿಷಿಯನ್ ಮತ್ತು ನೈರ್ಮಲ್ಯ ವಿಷಯಕ್ಕೆ
ಸಂಬಂಧಿಸಿದಂತೆ ಉದ್ಯಮಶೀಲತಾ ಕೌಶಲ್ಯಾಭಿವೃದ್ಧಿ ತರಬೇತಿ
ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಸೆಪ್ಟಂಬರ್ ಮಾಹೆಯ
ನಾಲ್ಕನೇ ವಾರದಲ್ಲಿ ಪ್ರಾರಂಭಿಸಿ ಸಂಘಟಿಸಲು ಯೋಜಿಸಲಾಗಿದೆ.
ಈ ಉದ್ಯಮಶೀಲತಾ ಕೌಶಲ್ಯಾಭಿವೃದ್ಧಿ ತರಬೇತಿಯಲ್ಲಿ ಉದ್ಯಮಶೀಲರ
ಗುಣಲಕ್ಷಣಗಳು, ಉದ್ಯಮ ಪ್ರಾರಂಭಿಸಲು ಕೈಗೊಳ್ಳಬೇಕಾದ
ಮಜಲುಗಳು, ಮಾರುಕಟ್ಟೆ ನಿರ್ವಹಣೆ ಮುಂತಾದ ವಿಷಯಗಳ
ಬಗ್ಗೆ ಮಾಹಿತಿ ಹಾಗೂ ಬ್ಯುಟೀಷಿಯನ್-ನೈರ್ಮಲ್ಯ ವಿಷಯದ
ಪ್ರಾಯೋಗಿಕ ತರಬೇತಿಯನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು
ಕೊನೆಯ ಸೆಪ್ಟೆಂಬರ್ 10 ಕಡೆಯ ದಿನವಾಗಿದೆ
ಶಿಬಿರಾರ್ಥಿಗಳು ತರಬೇತಿ ಪಡೆದ ನಂತರ ಸ್ವಂತ ಉದ್ಯೋಗ
ಅಥವಾ ಉದ್ಯೋಗಿ ಆಗಲು ಸಮರ್ಥರಾಗುವಂತೆ ರೂಪಿಸಲಾಗುವದು.
ತರಬೇತಿ ಉಚಿತವಾಗಿದ್ದು ಶಿಬಿರಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ
ಪ್ರಯಾಣಿಸಿ ಭಾಗವಹಿಸಬೇಕಾಗಿರುತ್ತದೆ. ತರಬೇತಿ ಅವಧಿಯಲ್ಲಿ
ಊಟೋಪಚಾರ ಒದಗಿಸಲಾಗುವದು.
ತರಬೇತಿಯನ್ನು ಪಡೆಯಲು ಇಚ್ಛಿಸುವ ಆಸಕ್ತರು ಅರ್ಜಿ
ಸಲ್ಲಿಸುವ ಕುರಿತು ಹಾಗೂ ಇತರೆ ವಿವರಗಳಿಗಾಗಿ ಮೊಬೈಲ್ ಸಂಖ್ಯೆ:
9035229821, ಕುಮಾರಿ ಸವಿತ, ಸಮಾಲೋಚಕರು, ಸಿಡಾಕ್-ದಿಶಾ
ಉದ್ಯಮಶೀಲತಾ ಮಾರ್ಗದರ್ಶಿ ಕೇಂದ್ರ ದಾವಣಗೆರೆ ಇವರನ್ನು ಕಛೇರಿ
ವೇಳೆಯಲ್ಲಿ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.