ದಾವಣಗೆರೆ 13.

ಇಂದು ಜಿಲ್ಲಾಡಳಿತ ಭವನದಲ್ಲಿ ನಡೆದ ಕೋವಿಡ್ ನಿರ್ವಹಣಾ ತಜ್ಞರ ಸಮಿತಿ ಸಭೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕೋವಿಡ್ 19 ನಿಯಂತ್ರಿಸುವ ಸಲುವಾಗಿ ಸರ್ವೇಕ್ಷಣಾ ಸಿಬ್ಬಂದಿಗಳು ಸಾರ್ವಜನಿಕರ ಮನೆ ಬಾಗಿಲಿಗೆ ಬಂದತಹ ಸಂದರ್ಭದಲ್ಲಿ ಸಾರ್ವಜನಿಕರು ಮುಂದೆನಿಂತು ತಪಾಸಣೆಗೆ ಸಹಕರಿಸದೇ ತಮ್ಮ ಮನೆ ಬಾಗಿಲುಗಳನ್ನು ಹಾಕಿಕೊಂಡು ಸರ್ವೇಕ್ಷಣಾ ಸಿಬ್ಬಂದಿಗಳಿಗೆ ಸಹಕಾರ ನೀಡದೆ ಇರುವುದು ಜಿಲ್ಲೆಯಾದ್ಯಂತ ಕಂಡುಬಂದಿದ್ದು.

ಸಾರ್ವಜನಿಕರು ಕೋವಿಡ್ 19 ರೋಗಲಕ್ಷಣಗಳು ಇದ್ದಾಗ್ಯೂ ಸಹ ಸರ್ಕಾರದ ನಿಯಮವಳಿಗಳ ಪ್ರಕಾರ ತಪಾಸಣೆಗೆ ಒಳಪಡಿಸಿಕೊಳ್ಳದೇ ಮನೆಯಲ್ಲೆ ಇದ್ದು ರೋಗಲಕ್ಷಣಗಳು ಉಲ್ಬಣವಾದ ಸಮಯದಲ್ಲಿ ಆಸ್ವತ್ರೆಗಳಿಗೆ ಬರುತ್ತಿರುವುದು ಕಂಡುಬಂದಿದೆ.

ಈ ಕೊನೆಯ ಹಂತದಲ್ಲಿ ರೋಗಿಯನ್ನು ವೈದ್ಯರು ಬದುಕಿಸಲು ಎಷ್ಟೇ ಶ್ರಮವಹಿಸಿದರೂ ಕಷ್ಟ ಸಾಧ್ಯವಾಗುವ ಸಂಭವವಿರುತ್ತದೆ ಹಾಗಾಗಿ ಸಾರ್ವಜನಿಕರು ಕೋವಿಡ್ ನಿಯಂತ್ರಿಸುವ ಸಲುವಾಗಿ ತಮ್ಮ ವಾರ್ಡ್, ಮತ್ತು ಗ್ರಾಮಗಳ ಮನೆ ಬಾಗಿಲಿಗೆ ಜಿಲ್ಲಾ ಸರ್ವೇಕ್ಷಣಾ ಸಿಬ್ಬಂದಿಗಳು ಮನೆಗೆ ಬಂದಾಗ ಸೋಂಕಿತರ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕಕ್ಕೆ ಬಂದವರು ಹಾಗೂ ಕೋವಿಡ್ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದಾಗ ಅವರ ಕುಟುಂಬದವವರು, ನೆರೆಹೊರೆಯವರು, ಮತ್ತು ಶೀತ, ಕೆಮ್ಮು, ಜ್ವರ, ಯಾವುದಾದರು ಧೀರ್ಘ ಕಾಲದ ಗಂಭಿರ ಕಾಯಿಲೆಯಿಂದ ಬಳಲುತ್ತೀರುವವರು ಕೂಡಲೇ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಲು ಮನವಿ ಮಾಡಲಾಗಿದೆ ಇದರಿಂದಾಗಿ ಕೋವಿಡ್-19 ರೋಗವು ಆದಷ್ಟು ಬೇಗನೆ ಪತ್ತೆಯಾದರೆ ಅಗತ್ಯ ಚಿಕಿತ್ಸೆ ನೀಡಿ ಸಂಭವಿಸಬಹುದಾದ ಸಾವುಗಳನ್ನು ತಪ್ಪಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದರು.

Leave a Reply

Your email address will not be published. Required fields are marked *