ದಾವಣಗೆರೆ ಆ.15
ತಾಯಿ ಭಾರತಾಂಬೆಯ ದೇಶಪ್ರೇಮಿ ಸುಪುತ್ರ-
ಸುಪುತ್ರಿಯರ ವೀರೋಚಿತ ವೀರಾಗ್ರಣಿಗಳ ಹೋರಾಟ ಹಾಗೂ
ತ್ಯಾಗದ ಫಲವಾಗಿ ಸ್ವಾತಂತ್ರ್ಯವೆಂಬ ಅಮೃತ ಫಲ ಭಾರತಕ್ಕೆ
ದೊರೆತದ್ದು ಈಗ ಇತಿಹಾಸವಾದರೂ, ಈ ಸ್ವಾತಂತ್ರ್ಯವೆಂಬ
ಶಾಂತಿಯ ನೆಲೆಯಲ್ಲಿ ಸಾಗಬೇಕಿದೆ. ಇಡೀ ವಿಶ್ವವೇ ಕೊರೊನಾ
ವೈರಸ್ ದಾಳಿಯಿಂದ ತಲ್ಲಣಗೊಂಡಿದೆ. ನಾವೆಲ್ಲರೂ ಇದನ್ನು ದಿಟ್ಟವಾಗಿ
ಎದುರಿಸುತ್ತಿದ್ದು, ಕೊರೊನಾ ಜೊತೆ ಜೊತೆಗೇ
ಅಭಿವೃದ್ದಿಯೆಡೆ ನಡೆಯಬೇಕಿದೆ ಎಂದು ನಗರಾಭಿವೃದ್ದಿ
ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ನುಡಿದರು.
ಜಿಲ್ಲಾಡಳಿತದ ವತಿಯಿಂದ ಆಗಸ್ಟ್ 15 ರಂದು ಬೆಳಿಗ್ಗೆ 9 ಗಂಟೆಗೆ
ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ
ಕಾರ್ಯಕ್ರಮದಲ್ಲಿ ಅವರು ರಾಷ್ಟ್ರ ಧ್ವಜಾರೋಹಣೆ
ನೆರವೇರಿಸಿ, ಸ್ವಾತಂತ್ರ್ಯ ದಿನಾಚರಣೆ ಸಂದೇಶ ನೀಡಿ
ಮಾತನಾಡಿದರು.
ದಾವಣಗೆರೆ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕೃಷಿ ಸಮ್ಮಾನ್
ಯೋಜನೆಯಡಿ ಒಟ್ಟು 1,59,709 ರೈತರು ನೋಂದಣಿ
ಮಾಡಿಕೊಂಡಿದ್ದು ಪ್ರತಿ ಕಂತಿಗೆ ರೂ. 200 ರಂತೆ 5
ಕಂತುಗಳಲ್ಲಿ 1,46,595 ರೈತರಿಗೆ ರೂ.10962.12 ಲಕ್ಷ ನೇರವಾಗಿ
ರೈತರ ಖಾತೆಗೆ ಜಮಾ ಆಗಿರುತ್ತದೆ.
ಜಿಲ್ಲೆಯಲ್ಲಿ ಕೋವಿಡ್ 19 ಲಾಕ್‍ಡೌನ್ ಸಮಸ್ಯೆ ಹಿನ್ನೆಲೆಯಲ್ಲಿ
ರೈತಸ್ನೇಹಿ, ರೈತಪರ, ಜನಪರ ಹೋರಾಟಗಾರರಾದ ಸನ್ಮಾನ್ಯ
ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರ
ಆದೇಶದಂತೆ 2019-20 ನೇ ಸಾಲಿನಲ್ಲಿ ಮೆಕ್ಕೆ ಜೋಳ ಬೆಳೆದ
ರೈತರಿಗೆ ಆರ್ಥಿಕ ನೆರವು ರೂ.5000/- ನಂತೆ ಇದುವರೆಗೂ 55117
ರೈತರ ಖಾತೆಗೆ ನೇರವಾಗಿ ಹಣವನ್ನು ಜಮೆ ಮಾಡಲು ಕ್ರಮ
ವಹಿಸಲಾಗಿದೆ.
ಕೋವಿಡ್ 19 ಲಾಕ್‍ಡೌನ್ ಸಂದರ್ಭದಲ್ಲಿ ರೈತ ಉತ್ಪಾದಕ ಸಂಸ್ಥೆ
ಮತ್ತು ಜಿಲ್ಲಾ ಹಾಪ್‍ಕಾಮ್ಸ್‍ರವರು ರೈತರಿಂದ ನೇರವಾಗಿ
ತೋಟಗಾರಿಕೆ ಉತ್ಪನ್ನಗಳನ್ನು ಖರೀದಿಸಿ ರಾಜ್ಯದ ಹಾಗೂ ದೇಶದ
ವಿವಿಧ ಮಾರುಕಟ್ಟೆಗಳಿಗೆ ಸರಬರಾಜು ಮಾಡಿ ರೈತರಿಗೆ
ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಕೋವಿಡ್ 19 ಕಾರಣ ವಿಧಿಸಿದ ಲಾಕ್‍ಡೌನ್‍ನಿಂದ ಹೂವು, ಹಣ್ಣು ಮತ್ತು
ತರಕಾರಿ ಬೆಳೆದಂತಹ ರೈತರಿಗೆ ಆಗಿರುವ ತೊಂದರೆ, ಆರ್ಥಿಕ
ನಷ್ಟವನ್ನು ಅನುಲಕ್ಷಿಸಿ ಪ್ರತಿ ಹೆಕ್ಟೇರಿಗೆ ರೂ.15000 ವನ್ನು
ನಮ್ಮ ಸರ್ಕಾರ ಘೋಷಿಸಿದೆ. ಹೂವು ಉತ್ಪನ್ನಗಳ ಮಾರಾಟ
ರೈತರಿಗೆ ರೂ.23.16 ಲಕ್ಷ ಪರಿಹಾರವನ್ನು ವಿತರಿಸಲಾಗಿದೆ.
2859 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣು ಮತ್ತು ತರಕಾರಿ
ಬೆಳೆಗಳನ್ನು ಬೆಳದು ನಷ್ಟ ಅನುಭವಿಸಿದ 4179 ರೈತರಿಗೆ
ಪರಿಹಾರ ವಿತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಜಿಲ್ಲೆಯ ಚಿಗಟೇರಿ ಸಾರ್ವಜನಿಕ ಆಸ್ಪ್ರೆಯನ್ನು ಜಿಲ್ಲಾ ಮಟ್ಟದ 300
ಬೆಡ್‍ಗಳ ಕೋವಿಡ್ ಆಸ್ಪತ್ರೆ ಎಂದು ಗುರುತಿಸಲಾಗಿದೆ. ಅದರಲ್ಲಿ
250 ಬೆಡ್‍ಗಳ ಐಸೋಲೇಷನ್ ವಾರ್ಡ್‍ನ್ನು ಗುರುತಿಸಲಾಗಿದೆ.
ಜಿಲ್ಲೆಯ 4 ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 10 ಐಸೋಲೇಷನ್
ಬೆಡ್‍ಗಳನ್ನು ಸ್ಥಾಪಿಸಲಾಗಿದೆ. ಹಾಗೂ ಹೆಚ್ಚುವರಿಯಾಗಿ 40
ಬೆಡ್‍ಗಳನ್ನು ಐಸೋಲೇಷನ್ ಬೆಡ್ ಮಾಡಲು ಕ್ರಮ ವಹಿಸಲಾಗಿದೆ.
ಪ್ರತಿ ತಾಲ್ಲೂಕಿನಲ್ಲಿ ಗುಣ ಲಕ್ಷಣಗಳು ಇಲ್ಲದ ಪಾಸಿಟಿವ್
ಪ್ರಕರಣಗಳನ್ನು ಚಿಕಿತ್ಸೆಗೆ ಒಳಪಡಿಸಲು 100 ಬೆಡ್‍ಗಳ
ಕೋವಿಡ್ ಕೇರ್ ಸೆಂಟರ್‍ಗಳಾಗಿ ಕಾರ್ಯ ನಿರ್ವಹಿಸಲು
ಗುರುತಿಸಲಾಗಿದೆ. ಹಾಗೂ ದಾವಣಗೆರೆ ನಗರದಲ್ಲಿ ಒಟ್ಟು 300
ಬೆಡ್‍ಗಳ ಕೋವಿಡ್ ಕೇರ್ ಸೆಂಟರ್‍ಗಳು ಕಾರ್ಯ
ನಿರ್ವಹಿಸುತ್ತಿರುವೆ. ಹಾಗೂ ಶೇ.50 ರಷ್ಟು
ಪ್ರಾ.ಆ.ಕೇಂದ್ರಗಳಲ್ಲಿ ಜ್ವರದ ಕ್ಲಿನಿಕ್‍ಗಳನ್ನು ಪ್ರಾರಂಭಿಸಲು
ಕ್ರಮ ಕೈಗೊಳ್ಳಲಾಗುತ್ತಿದೆ.
ನಮ್ಮ ಸರ್ಕಾರ ನೂತನವಾಗಿ 21 ಕೋಟಿ ವೆಚ್ಚದಲ್ಲಿ ಚಿಗಟೇರಿ
ಆಸ್ಪತ್ರೆಯ ಆವರಣದಲ್ಲಿ 100 ಹಾಸಿಗೆಗಳ ತಾಯಿ ಮತ್ತು
ಮಕ್ಕಳ ಆಸ್ಪತ್ರೆ ಸ್ಥಾಪಿಸಲು ಈಗಾಗಲೇ ಶಂಕುಸ್ಥಾಪನೆ
ನೆರವೇರಿಸಲಾಗಿದೆ.
01 ಕೋಟಿ ವೆಚ್ಚದಲ್ಲಿ ಹಿರಿಯ ನಾಗರಿಕರ ಸೌಲಭ್ಯಗಳ 10
ಬೆಡ್‍ಗಳ ವಾರ್ಡ್‍ನ್ನು ಆಸ್ಪತ್ರೆ ಸ್ಥಾಪಿಸಲು ಈಗಾಗಲೇ
ಶಂಕುಸ್ಥಾಪನೆ ನೆರವೇರಿಸಲಾಗಿದೆ. 1.25 ಕೋಟಿ ವೆಚ್ಚದಲ್ಲಿ
ಆಸ್ಪತ್ರೆಯಲ್ಲಿ ಎಸ್.ಡಿ.ಆರ್.ಎಫ್ ನಿಧಿಯಡಿ ಕೋವಿಡ್-19 ರೋಗಿಗಳ
ಚಿಕಿತ್ಸೆಗೆ 180 ಹಾಸಿಗೆಗಳಿಗೆ ಆಕ್ಸಿಜನ್ ಪೈಪ್‍ಲೈನ್ ಕಾಮಗಾರಿ, ವಿವಿಧ
ವೈದ್ಯಕೀಯ ಉಪಕರಣಗಳಾದ ಎಚ್.ಎಫ್.ಎನ್.ಸಿ ಎಕ್ಸ್-ರೇ, ಪೇಷಂಟ್
ಮಾನೀಟರ್, ಅಲ್ಟ್ರಾಸೌಂಡ್ ಮೆಶಿನ್, ಐ.ಸಿ.ಯು ಕಾಟ್ ಹಾಗೂ ಇತರೆ
ಉಪಕರಣಗಳನ್ನು ಸರಬರಾಜು ಪಡೆದು ರೋಗಿಗಳ
ಚಿಕಿತ್ಸೆಗಾಗಿ ಬಳಸಲಾಗುತ್ತಿದೆ.
1.20 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯಲ್ಲಿ ಎಸ್.ಡಿ.ಆರ್.ಎಫ್ ನಿಧಿಯಡಿ
ಕೋವಿಡ್-19 ರೋಗಿಗಳ ಪರೀಕ್ಷೆಗಾಗಿ ಸುಸಜ್ಜಿತ ಆರ್.ಟಿ.ಪಿ.ಸಿ.ಆರ್
ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. 27 ಲಕ್ಷ ವೆಚ್ಚದಲ್ಲಿ
ಸರ್ಕಾರದ ವತಿಯಿಂದ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಲಿಕ್ವಿಡ್
ಆಕ್ಸಿಜನ್ ಪ್ಲಾಂಟ್‍ನ್ನು ಸ್ಥಾಪಿಸಲು ಕ್ರಮವಹಿಸಲಾಗಿದೆ.
ಕೋವಿಡ್ 19 ವಿರುದ್ದ ಹೋರಾಡಲು ಕೊರೊನಾ
ವಾರಿಯರ್ಸ್‍ಗಳಾದ ಪೊಲೀಸ್ ಇಲಾಖೆ ಸಿಬ್ಬಂದಿ, ಆಶಾ
ಕಾರ್ಯಕರ್ತೆಯರು ಮತ್ತಿತರರಿಗೆ ಆಯುಷ್ ರೋಗ
ನಿರೋಧಕ ಶಕ್ತಿವರ್ಧಕ ಔಷಧಿಗಳಾದ ಚ್ಯವನಪ್ರಾಶ್,
ಕಷಾಯ ಚೂರ್ಣ, ಸಂಶಮನವಟಿ, ಆರ್ಸೆನಿಕ್ ಆಲ್ಬಾ ಮಾತ್ರೆಗಳು,
ಆರ್ಕೇ ಅಜೀಬ್ ಔಷಧಗಳನ್ನು ವಿತರಿಸಲಾಯಿತು. ಕೋವಿಡ್ 19
ಸೋಂಕು ದೃಢಪಟ್ಟಿರುವ ರೋಗಿಗಳಿಗೆ ಆಯುರ್ವೇದ
ಔಷಧಿಗಳಾದ ಚ್ಯವನ್‍ಪ್ರಾಶ್, ಸಂಶಮನವಟಿ, ಗೋಲ್ಡನ್
ಮಿಲ್ಕ್‍ನ್ನು ವಿತರಿಸಲಾಗುತ್ತಿದೆ.
2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದಾಗಿ
ಜಿಲ್ಲೆಯಲ್ಲಿ ಒಟ್ಟು 5430 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ
ಹಾನಿಯಾಗಿದ್ದು, ಪರಿಹಾರ ತಂತ್ರಾಂಶದ ಮೂಲಕ 8179 ರೈತರ
ಖಾತೆಗಳಿಗೆ ರೂ. 9,23,54,882/- ಗಳು ಜಮೆ ಮಾಡಲಾಗಿದೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಏಪ್ರೀಲ್ ನಿಂದ
ಇಲ್ಲಿಯವರೆಗೆ ಒಟ್ಟು 273 ಮನೆಗಳು ಭಾಗಶಃ ಹಾನಿಯಾಗಿದ್ದು,
ಮಾರ್ಗಸೂಚಿನ್ವಯ ರೂ 11.31 ಲಕ್ಷ ಪರಿಹಾರ ಪರಿಹಾರ
ನೀಡಲಾಗಿರುತ್ತದೆ. ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಲ್ಲಿ 985
ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು, ಪರಿಹಾರ
ತಂತ್ರಾಂಶದ ಮೂಲಕ 1981 ರೈತರಿಗೆ ರೂ.1.14 ಕೋಟಿ ಪರಿಹಾರ
ನೀಡಲಾಗಿರುತ್ತದೆ.
ಕೋವಿಡ್-19 ನಿಯಂತ್ರಣ ಸಂಬಂಧ ವಿವಿಧ ಸಂಘ ಸಂಸ್ಥೆಗಳು
ಹಾಗೂ ದಾನಿಗಳು ಒಟ್ಟು 15100 ಆಹಾರ ಕಿಟ್‍ಗಳನ್ನು ನೀಡಿದ್ದು
ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ
ನೀಡಲಾಗಿದೆ.
ಜಿಲ್ಲೆಯಲ್ಲಿ 27 ಬಹುಗ್ರಾಮ ಕುಡಿಯುವನೀರಿನ
ಯೋಜನೆಗಳು ಅನುಷ್ಟಾನಗೊಳಿಸಲಾಗಿದ್ದು, ಸದರಿ
ಯೋಜನೆಗಳಡಿ ಒಳಪಡುವ ಒಟ್ಟು 390 ಅವಲಂಬಿತವಾದ
ಗ್ರಾಮಗಳಲ್ಲಿ ಸಮರ್ಪಕವಾಗಿ ಶುದ್ಧ ನೀರು ಸರಬರಾಜು
ಮಾಡಲಾಗುತ್ತಿದೆ. ಹಾಗೂ 4 ಹೊಸ ಯೋಜನೆಗಳ
ಕಾಮಗಾರಿಗಳು ಪ್ರಗತಿಯಲ್ಲಿದ್ದು ಇವುಗಳನ್ನು ತ್ವರಿತವಾಗಿ
ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಮುಂದುವರೆದು ಜಿಲ್ಲೆಯ ಎಲ್ಲಾ ಗ್ರಾಮೀಣ ಭಾಗದ
ಜನವಸತಿಗಳಲ್ಲಿ ಹೊಳೆ ನೀರು ಪೂರೈಸಲು ಕ್ರಮ
ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಒಟ್ಟು 787 ಶುದ್ಧ
ಕುಡಿಯುವ ನೀರಿನ ಘಟಕಗಳನ್ನು ಕಾರ್ಯಗತಗೊಳಿಸಿ
ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು
ಮಾಡಲಾಗುತ್ತಿದೆ.
ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಗೆ ಸಂಬಂಧಿಸದಿಂತೆ
ಒಟ್ಟು 381 ಜಿ+1 ಮಾದರಿಯಲ್ಲಿ ವಸತಿ ಸಮುಚ್ಛಯಗಳನ್ನು
ನಿರ್ಮಿಸುವ ಕಾಮಗಾರಿಯು ಪ್ರಗತಿಯ ಹಂತದಲ್ಲಿದ್ದು
ಸಂಬಂಧಿಸಿದಂತೆ 2019-20ನೇ ಸಾಲಿನ 14ನೇ ಹಣಕಾಸು ಯೋಜನೆಯ
ಸಾಮಾನ್ಯ ನಿಧಿಯಿಂದ ರೂ.113.00 ಲಕ್ಷಗಳನ್ನು 155 ವಸತಿ
ಗೃಹಗಳ ಆಂತರಿಕ ವಿದ್ಯುತ್ ಕಾಮಗಾರಿಗಳಿಗಾಗಿ, 2019-20ನೇ
ಸಾಲಿನ ಎಸ್.ಎಫ್.ಸಿ. ಮುಕ್ತನಿಧಿಯಿಂದ ಒದಗಿಸಿದ
ರೂ.126.10ಲಕ್ಷಗಳನ್ನು ಆಂತರಿಕ ನೀರು ಸರಬರಾಜಿನ ಹಾಗೂ
ನೈರ್ಮಲ್ಯೀಕರಣ ಕಾಮಗಾರಿಗಳನ್ನು
ಕೈಗೊಳ್ಳಲಾಗುವುದು.
ದಾವಣಗೆರೆ ಮಹಾನಗರ ಪಾಲಿಕೆಯ ನೀರು ಸರಬರಾಜಿಗೆ
ಸಂಬಂಧಿಸಿದಂತೆ ಕೆಯುಐಡಿಎಫ್‍ಸಿ ಇಲಾಖೆ ವತಿಯಿಂದ ಜಲಸಿರಿ
ಯೋಜನೆಯಡಿಯಲ್ಲಿ ದಾವಣಗೆರೆ ಸಿಟಿಗೆ (24ಘಿ7) ನೀರು
ಪೂರೈಸಲು ಉದ್ದೇಶಿಸಲಾಗಿರುತ್ತದೆ. ಅದರಂತೆ ಸದರಿ
ಯೋಜನೆಗೆ ಅಂದಾಜು ಮೊತ್ತ ರೂ 83.37 ಕೋಟಿಯಲ್ಲಿ
ರಾಜನಹಳ್ಳಿಯಲ್ಲಿ 120 ಎಂಎಲ್‍ಡಿ ಸಾಮಥ್ರ್ಯದ ಜಾಕ್‍ವೆಲ್ ಮತ್ತು
ಬಾತಿಯಲ್ಲಿ 40 ಎಂ.ಎಲ್.ಡಿ ಸಾಮಥ್ರ್ಯದ ನೀರು ಶುದ್ಧೀಕರಣ ಘಟಕ
ಹಾಗೂ ದಾವಣಗೆರೆ ನಗರದವರೆಗೆ ಮುಖ್ಯ ನೀರು ಸರಬರಾಜು
ಕೊಳವೆಯನ್ನು ನಿರ್ಮಿಸಲಾಗುತ್ತಿದೆ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ
ಪ್ರಸಕ್ತ ಸಾಲಿನಲ್ಲಿ ದಿನ ಒಂದಕ್ಕೆ ರೂ.275 ಕೂಲಿ ದರವು
ನಿಗದಿಯಾಗಿದ್ದು ಯೋಜನೆಯಡಿ ಒಟ್ಟು 200249 ಕುಟುಂಬಗಳು
ನೋಂದಣಿಯಾಗಿದ್ದು, ಇದುವರೆಗೆ ಒಟ್ಟು 964155 ಮಾನವ
ದಿನಗಳನ್ನು ಸೃಜಿಸಿ ಒಟ್ಟು ರೂ. 26.61 ಕೋಟಿ ಕೂಲಿ
ಮೊತ್ತವನ್ನು ಪಾವತಿಸಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 91802 ಕಾರ್ಮಿಕರಿಗೆ
ರೂ.5000 ಧನಸಹಾಯ ವಿತರಿಸಲಾಗಿದೆ. ಅದರ ಮೊತ್ತ ರೂ.45,9
ಕೋಟಿ ಆಗಿರುತ್ತದೆ.
ಜಿಲ್ಲೆಯಲ್ಲಿ ಅಗಸ ಮತ್ತು ಕ್ಷೌರಿಕ ವೃತ್ತಿಯ 4133
ಕಾರ್ಮಿಕರು ಕೋವಿಡ್ 19 ಧನಸಹಾಯಕ್ಕೆ ಅರ್ಜಿ ಸಲ್ಲಿಸಿದ್ದು 3948
ಅರ್ಜಿಗಳನ್ನು ಅನುಮೋದನೆ ನೀಡಲಾಗಿದೆ.
ಆರ್‍ಟಿಓ ಕಚೇರಿಯಿಂದ ಕೋವಿಡ್ ಹಿನ್ನೆಲೆಯಲ್ಲಿ
ಸಂಕಷ್ಟದಲ್ಲಿರುವ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಕ್ಯಾಬ್
ಚಾಲಕರಿಗೆ ಸಹಾಯಧನ ರೂ.5000 ನೀಡಲು ಅರ್ಜಿ ಆಹ್ವಾನಿಸಿದ್ದು,
ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಕ್ಯಾಬ್ ಚಾಲಕರು ಸೇರಿ ಒಟ್ಟು 1,05,467
ಅರ್ಜಿದಾರರ ಖಾತೆಗೆ ನೇರವಾಗಿ ಹಣ ಪಾವತಿಸಲಾಗಿದೆ.
ದಾವಣಗೆರೆ ನಗರವು ಮೊದಲನೇ ಹಂತದಲ್ಲಿ ಸ್ಮಾರ್ಟ್ ಸಿಟಿ
ಯೋಜನೆಯಡಿ ಆಯ್ಕೆಯಾಗಿದ್ದು, ಒಟ್ಟಾರೆ ರೂ.1.014
ಕೋಟಿಗಳ ಯೋಜನಾ ಮೊತ್ತದಲ್ಲಿ 89 ಕಾಮಗಾರಿಗಳನ್ನು
ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿಯವರೆಗೆ ರೂ.198 ಕೋಟಿಗಳ
ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಈಗಾಗಲೇ 17 ಕಾಮಗಾರಿಗಳು
ಪೂರ್ಣಗೊಂಡಿದ್ದು ಉಳಿದ ಕಾಮಗಾರಿಗಳು ಪ್ರಗತಿಯ ವಿವಿಧ
ಹಂತದಲ್ಲಿ ಇವೆ. ಕೇಂದ್ರ ಸರ್ಕಾರ ಪ್ರಸ್ತುತಪಡಿಸಿದ ಇತ್ತೀಚಿನ
ಮೌಲ್ಯಮಾಪನದಂತೆ ದಾವಣಗೆರೆ ನಗರವು ರಾಜ್ಯ ಮಟ್ಟದಲ್ಲಿ
ಪ್ರಥಮ ಸ್ಥಾನದಲ್ಲಿದ್ದು, ರಾಷ್ಟ್ರ ಮಟ್ಟದಲ್ಲಿ 10 ನೇ
ಸ್ಥಾನದಲ್ಲಿದೆ ಎಂದರು.
ಆಕರ್ಷಕ ಪಥ ಸಂಚಲನ : ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ
ವಿದ್ಯಾರ್ಥಿಗಳ ತಂಡಗಳನ್ನು ಹೊರತುಪಡಿಸಿ ಸರ್ಕಾರಿಯ 6
ತಂಡಗಳು ಶಿಸ್ತಿನ ಮತ್ತು ಆಕರ್ಷಕ ಪಥ ಸಂಚಲನದಲ್ಲಿ
ಪಾಲ್ಗೊಂಡವು. ಡಿಎಆರ್‍ನ ಆರ್‍ಪಿಐ ಎಸ್.ಎನ್.ಕಿರಣ್ ಕುಮಾರ್ ಅವರು
ಕವಾಯತುನ ಪ್ರಧಾನ ನಾಯಕತ್ವ ವಹಿಸಿದ್ದರು.
ರಾಘವೇಂದ್ರ ರಾಮತಾಳ ನೇತೃತ್ವದ ಡಿ.ಎ.ಆರ್ ಪೊಲೀಸ್
ತಂಡ, ಪಿಎಸ್‍ಐ ನೂರ್ ಆಹಮದ್ ನೇತೃತ್ವದ ನಾಗರಿಕ ಪೊಲೀಸ್
ತಂಡ, ಅಂಬರೀಶ ಕೆ.ಎಸ್ ನೇತೃತ್ವದ ಗೃಹರಕ್ಷಕ ದಳ
ತಂಡ, ಭರತೇಶ್ ನೇತೃತ್ವದ ಅಬಕಾರಿ ಜಿಲ್ಲಾ ತಂಡ, ವೆಂಕಟೇಶ್
ನಾಯ್ಕ ನೇತೃತ್ವದ ಜಿಲ್ಲಾ ಅರಣ್ಯ ಇಲಾಖೆ ತಂಡ, ಸುಹಾಸ್.ಪಿ
ನೇತೃತ್ವದ ಅಗ್ನಿಶಾಮಕ ದಳ ತಂಡವು ಮುಖ್ಯ ಅತಿಥಿಗಳಿಗೆ
ಗೌರವ ವಂದನೆ ಸಲ್ಲಿಸುವ ಮೂಲಕ ಆಕರ್ಷಕ ಪಥಸಂಚಲನ
ನಡೆಸಿದವು. ಈ 6 ತಂಡಗಳಿಗೆ ಡಿಎಆರ್‍ನ ಎಆರ್‍ಎಸ್‍ಐ ಬ್ಯಾಂಡ್ ಮಾಸ್ಟರ್
ಹೊನ್ನೂರಪ್ಪ ಶುಶ್ರಾವ್ಯ ವಾದ್ಯ ನುಡಿಸಿದರು.
ಕೋವಿಡ್ ವಾರಿಯರ್ಸ್‍ಗೆ ಸನ್ಮಾನ : ಕೋವಿಡ್ ಸಂದರ್ಭದಲ್ಲಿ ಜೀವದ
ಹಂಗು ತೊರೆದು ಜಿಲ್ಲೆಯ ಸಾರ್ವಜನಿಕರ ಹಾಗೂ ಸೋಂಕಿತರ
ಆರೈಕೆ ಮತ್ತು ಆರೋಗ್ಯದ ಹಿತಕ್ಕಾಗಿ ಸಾಂಕ್ರಾಮಿಕ
ರೋಗದ ನಿಯಂತ್ರಣಕ್ಕಾಗಿ ಹಗಲಿರುಳು ಅವಿರತವಾಗಿ ಶ್ರಮಿಸಿದ
ಸರ್ಕಾರಿ ನೌಕರರ ಸೇವೆ ಅನನ್ಯವಾದದು. ಸಾಂಕ್ರಾಮಿಕ
ರೋಗದಂತಹ ಆತಂಕದ ಸನ್ನಿವೇಶದಲ್ಲಿ
ಯುದ್ದೋಪಾದಿಯಲ್ಲಿ ಸೇವೆ ಸಲ್ಲಿಸಿದ ವೈದ್ಯರು ಹಾಗೂ
ವೈದ್ಯಕೀಯ ಸಿಬ್ಬಂದಿಗಳಿಗೆ ಜಿಲ್ಲಾ ಮಟ್ಟದಿಂದ ಪ್ರಶಂಸನಾ
ಪತವನ್ನ್ರು ಅಭಿನಂದನಾ ಪೂರ್ವಕವಾಗಿ ಸಚಿವರು ವಿತರಿಸುವ
ಮೂಲಕ ಸನ್ಮಾನಿಸಲಾಯಿತು.
ವಿಕಲಚೇತನರಿಗೆ ವಾಹನ ವಿತರಣೆ : 2019-20ನೇ ಸಾಲಿನಲ್ಲಿ
ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲಿಕರಣ ಇಲಾಖೆ
ವತಿಯಿಂದ ಜಿಲ್ಲೆಗೆ 56 ಯಂತ್ರಚಾಲಿತ ದ್ವಿಚಕ್ರ
(ರೆಟ್ರೋಫಿಟ್‍ಮೆಂಟ್ ಸಹಿತ ವಾಹನ) ವಾಹನಗಳು
ಮಂಜೂರಾಗಿದ್ದು, ಸ್ವಾತಂತ್ರ್ಯ ದಿನದ ಅಂಗವಾಗಿ ಸಚಿವರಾದ ಬಿ.ಎ
ಬಸವರಾಜ ಅವರು 14 ಫಲಾನುಭವಿಗಳಿಗೆ ವಿತರಣೆ ಮಾಡಿದರು.
ಉಳಿದ ಫಲಾನುಭವಿಗಳಿಗೆ ಅಗಸ್ಟ್ 15 ನಂತರ
ವಿತರಿಸಲಾಗುವುದು.
ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‍ನ ಪ್ರಚಾರ ವಾಹನಕ್ಕೆ ಚಾಲನೆ :
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ
ಪ್ರಸಕ್ತ ಸಾಲಿನಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ
ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರಗಳ ಸಮೇತ
ಸ್ವಯಂ ದಾಖಲಿಸುವ ವಿನೂತನ ಯೋಜನೆಯ ‘ಬೆಳೆ ಸಮೀಕ್ಷೆ
ಮೊಬೈಲ್ ಆ್ಯಪ್ ಪ್ರಚಾರ ವಾಹನಕ್ಕೆ’ ಸಚಿವರು ಚಾಲನೆ ನೀಡಿದರು.
ಅಂಧ ಮಕ್ಕಳಿಗೆ ಟಾಕಿಂಗ್ ಲ್ಯಾಪ್‍ಟಾಪ್ ವಿತರಣೆ : ದೃಷ್ಟಿದೋಷ
ಉಳ್ಳವರಿಗೆ ಟಾಕಿಂಗ್ ಲ್ಯಾಪ್‍ಟಾಪ್‍ಗಳನ್ನು ವಿತರಿಸಲು ಜಿಲ್ಲೆಗೆ 20
ಲ್ಯಾಪ್‍ಟಾಪ್ ನೀಡಲಾಗಿದೆ. ಅದರಂತೆ ಕೋವಿಡ್ ಹಿನ್ನಲೆಯಲ್ಲಿ 3
ಜನರಿಗೆ ಸಾಂಕೇತಿಕವಾಗಿ ಸಚಿವರು ವಿತರಿಸಿದರು.
ಜಿಲ್ಲೆಗೆ 25 ಟಾಕಿಂಗ್ ಲ್ಯಾಪ್‍ಟಾಪ್‍ಗಳನ್ನು ವಿತರಿಸಲು ಗುರಿ ನೀಡಿದೆ.
ಅದರಂತೆ 25 ಫಲಾನುಭವಿಗನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿ
ಮೂಲಕ ಆಯ್ಕೆ ಮಾಡಲಾಗಿತ್ತು.
ವಿದ್ಯಾರ್ಥಿಗಳಿಗೆ ಸನ್ಮಾನ : ಸಾರ್ವಜನಿಕ ಶಿಕ್ಷಣ ಇಲಾಖೆ
ಉಪನಿರ್ದೇಶಕರ ಕಚೇರಿ ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ
ಅತಿಹೆಚ್ಚು ಅಂಕ ಪಡೆದ 5 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದಾವಣಗೆರೆ ಉತ್ತರ ವಿಧಾನಸಭಾ
ಕ್ಷೇತ್ರದ ಶಾಸಕರಾದ ಎಸ್.ಎ.ರವೀಂದ್ರನಾಥ್ ಅಧ್ಯಕ್ಷತೆ
ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಜಿಲ್ಲಾ
ಪಂಚಾಯತ್ ಉಪಾಧ್ಯಕ್ಷೆ ಸಾಕಮ್ಮ, ಮಹಾನಗರಪಾಲಿಕೆ
ಮಹಾಪೌರರಾದ ಬಿ.ಜಿ.ಅಜಯ ಕುಮಾರ್, ದೂಡಾ ಅಧ್ಯಕ್ಷ ರಾಜನಳ್ಳಿ
ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ.ಸಿಇಓ ಪದ್ಮಾ
ಬಸವಂತಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಸೇರಿದಂತೆ
ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು
ಪಾಲ್ಗೊಂಡಿದ್ದರು.