ದಾವಣಗೆರೆ ಆ.17
2020-21 ನೇ ಸಾಲಿಗೆ ಸಂಬಂಧಿಸಿದ ಮೂರು ವರ್ಷಗಳ ಅವಧಿಯ
ಡಿಪ್ಲೊಮಾ ಕೋರ್ಸುಗಳ ಪ್ರವೇಶಕ್ಕೆ (ಅಖಿಲ ಭಾರತ ಮಟ್ಟದಲ್ಲಿ)

ವಿಶೇಷಚೇತನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು
ಆಹ್ವಾನಿಸಲಾಗಿದೆ.
ಅನುದಾನಿತ ಕೋರ್ಸುಗಳಾದ ಆರ್ಕಿಟೆಕ್ಟ್, ಕಮರ್ಷಿಯಲ್
ಪ್ರಾಕ್ಟೀಸ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್. ಅನುದಾನ
ರಹಿತ ಕೋರ್ಸ್‍ಗಳಾದ ಜ್ಯುವೆಲರಿ ಡಿಸೈನ್ ಮತ್ತು ಟೆಕ್ನಾಲಜಿ,
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, ಕಂಪ್ಯೂಟರ್
ಅಪ್ಲಿಕೇಷನ್ಸ್ ಫಾರ್ ದಿ ವಿಷ್ಯುಯಲಿ ಇಂಪೇರ್ಡ್ ಕೋರ್ಸ್‍ಗಳಿಗೆ ಅರ್ಜಿ
ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಟ
ಶೇ.35 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಹಾಗೂ
ಕ್ರ.ಸಂ 1 ರಿಂದ 5 ರ ಕೋರ್ಸಿಗೆ ಮೂಳೆ ಮತ್ತು ಕೀಲು ಅಂಗವಿಕಲತೆ
ಶೇ 40 ಮತ್ತು ಮೇಲ್ಪಟ್ಟು ಇರಬೇಕು. ಕಿವುಡ ಮತ್ತು ಮೂಗ
ಅಂಗವಿಕಲತೆ ಶೇ.60 ಡಿಬಿ ಮತ್ತು ಮೇಲ್ಪಟ್ಟು ಇರಬೇಕು. ಕ್ರ.ಸಂ.2
ಮತ್ತು 6 ರ ಕೋರ್ಸುಗಳಿಗೆ ಭಾಗಶಃ ಮತ್ತು ಪೂರ್ಣ ಅಂಧ್ವ
ಇರಬೇಕು.
ಜ್ಯುವೆಲರಿ ಡಿಸೈನ್ ಮತ್ತು ಟೆಕ್ನಾಲಜಿ ಕೋರ್ಸಿಗೆ ಸಾಮಾನ್ಯ
(ವಿಶೇಷಚೇತನರಲ್ಲದ) ಅಭ್ಯರ್ಥಿಗಳೂ ಸಹ ಜೆಎಸ್‍ಎಸ್
ಮಹಾವಿದ್ಯಾಪೀಠದ ಯೋಜನೆಯಡಿಯಲ್ಲಿ ಪ್ರವೇಶ
ಪಡೆಯಬಹುದು.
ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿದ್ಯಾರ್ಥಿವೇತನದ
ಆರ್ಥಿಕ ಸಹಾಯ ದೊರೆಯುತ್ತದೆ. ಪಾಲಿಟೆಕ್ನಿಕ್‍ನ ಯಶಸ್ವಿ
ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ತರಬೇತಿ ಕೇಂದ್ರದ ಮೂಲಕ
ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ವಿದ್ಯಾರ್ಥಿ ಹಾಗೂ
ವಿದ್ಯಾರ್ಥಿನಿಯರುಗಳಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯದ ಸೌಲಭ್ಯ
ಕಲ್ಪಿಸಲಾಗಿದೆ.
ಅರ್ಜಿಗಳನ್ನು ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್(ಕರ್ನಾಟಕ
ಸರ್ಕಾರದ ಅನುದಾನಿತ ಸ್ವಾಯತ್ತ ಹಾಗೂ ಎಐಸಿಟಿಇ ಮಾನ್ಯತೆ ಪಡೆದ
ಸಂಸ್ಥೆ), ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಚಯ,
ಮೈಸೂರು – 570 006, ಇವರಿಂದ (ಸಾಮಾನ್ಯ ವರ್ಗದ ಅಭ್ಯರ್ಥಿಗಳು
ರೂ.100, ಹಾಗೂ ಎಸ್‍ಸಿಎಸ್‍ಟಿ/ಪ್ರವರ್ಗ 1 ಇವರಿಗೆ ರೂ.50) ನಗದು ಅಥವಾ
ಡಿಡಿ/ಎಂಒ ಮೂಲಕ ಖಿhe Pಡಿiಟಿಛಿiಠಿಚಿಟ, ಎSSPಆಂ, ಒಥಿsoಡಿe ಇವರ ಹೆಸರಿಗೆ
ಮೈಸೂರಿನಲ್ಲಿ ಸಂದಾಯವಾಗುವಂತೆ ಕಳುಹಿಸಿ ಪಡೆಯಬಹುದು
ಅಥವಾ ವೆಬ್‍ಸೈಟ್ ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ
ಮಾಹಿತಿಗಾಗಿ ವೆಬ್‍ಸೈಟ್ ತಿತಿತಿ.ರಿssಠಿಜಚಿ.oಡಿg/ಇಮೇಲ್ ರಿssಠಿಜಚಿ@gmಚಿiಟ.ಛಿom,
ದೂರವಾಣಿ ಸಂಖ್ಯೆ 0821-25483, 2548316 ಮೂಲಕ ಸಂಪರ್ಕಿಸಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ್ 12 ರೊಳಗೆ ಕಚೇರಿಗೆ
ತಲುಪಿಸಬೇಕೆಂದು ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್‍ನ
ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *