ದಾವಣಗೆರೆ ಆ.17
ದಾವಣಗೆರೆ ಜಿಲ್ಲೆಯಾದ್ಯಂತ ಇತ್ತೀಚಿನ ದಿವಸಗಳಲ್ಲಿ ಉತ್ತಮ
ಮಳೆಯಾಗುತ್ತಿದ್ದು, ಯೂರಿಯಾ ರಸಗೊಬ್ಬರ ಹಾಗೂ ಇನ್ನಿತರ
ರಸಗೊಬ್ಬರಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ. ಜಿಲ್ಲೆಯಲ್ಲಿ
ಪ್ರಮುಖವಾಗಿ ಖುಷ್ಕಿಯಲ್ಲಿ ಬೆಳೆಯಲಾಗುತ್ತಿರುವ ಮುಸುಕಿನ
ಜೋಳ ಬೆಳೆಯಲ್ಲಿ ಪ್ರತಿ ಎಕರೆಗೆ 25 ಕೆಜಿ ಯೂರಿಯಾವನ್ನು
ಮಾತ್ರವೇ ಮೇಲುಗೊಬ್ಬರವಾಗಿ ಬಳಕೆ ಮಾಡುವುದು ಸೂಕ್ತ.
ಹೆಚ್ಚಿನ ಪ್ರಮಾಣದಲ್ಲಿ ದಯವಿಟ್ಟು ಬಳಕೆ ಮಾಡಬೇಡಿ. ಕೊರೋನಾ
ಮಾರಿಯು ಹರಡುತ್ತಿರುವ ಈ ಸಂದರ್ಭದಲ್ಲಿ ಸಾಮಾಜಿಕ
ಅಂತರವನ್ನು ಕಾಯ್ದುಕೊಂಡು ರೈತ ಬಾಂಧವರು
ರಸಗೊಬ್ಬರಗಳನ್ನು ಖರೀದಿಸಲು ಕೋರಿದೆ.
ರಸಗೊಬ್ಬರಗಳನ್ನು ಖರೀದಿಸುವಾಗ ಗರಿಷ್ಠ ಚಿಲ್ಲರೆ ಮಾರಾಟ
ಬೆಲೆಗಿಂತ ಹೆಚ್ಚಿನ ಬೆಲೆಗೆ ಯಾರಾದರೂ ಮಾರಾಟ ಮಾಡುತ್ತಿದ್ದರೆ
ಅಥವಾ ಬೇಕಾಗಿರುವ ರಸಗೊಬ್ಬರದ ಜೊತೆ ಬೇರೆ
ಪರಿಕರಗಳನ್ನು ಕಡ್ಡಾಯವಾಗಿ ಖರೀದಿ ಮಾಡಲೇಬೇಕೆಂದು
ಒತ್ತಾಯಿಸಿದರೆ ಕೃಷಿ ಇಲಾಖೆಯ ವಿಚಕ್ಷಣಾ ದಳದ ಅಧಿಕಾರಿಗಳಿಗೆ
(ದೂರವಾಣಿ ಸಂಖ್ಯೆ : 8277931207) ಮಾಹಿತಿ ನೀಡಲು ಕೋರಿದೆ ಹಾಗೂ
ಸಂಬಂಧಿಸಿದ ತಾಲ್ಲೂಕುಗಳ ಸಹಾಯಕ ಕೃಷಿ
ನಿರ್ದೇಶಕರುಗಳನ್ನು ಸಂಪರ್ಕಿಸಬಹುದೆಂದು ಜಂಟಿ ಕೃಷಿ
ನಿರ್ದೇಶಕ ಶ್ರೀನಿವಾಸ ಚಿಂತಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.