ಹೊನ್ನಾಳಿಯ ಜನಧ್ವನಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಗಳ ವತಿಯಿಂದ ದಿನಾಂಕ -20- 8- 2020ನೇ ಗುರುವಾರ ರಂದು. ಬೆಳಗ್ಗೆ 11:00 ಗಂಟೆಗೆ ಜನಪ್ರಿಯ ಮಾಜಿ ಶಾಸಕರಾದ ಸನ್ಮಾನ್ಯ
ಶ್ರೀ ಡಿ.ಜಿ.ಶಾಂತನ ಗೌಡ್ರು ಹಾಗೂ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಚ್.ಬಿ ಮಂಜಪ್ಪ ರವರ ನೇತೃತ್ವದಲ್ಲಿ ಅಪ್ರತಿಮ ಹೋರಾಟಗಾರ ಶ್ರೀ ಹೊನ್ನಾಳಿಯ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮುಖಾಂತರ ಜನಧ್ವನಿ ಯ ಪ್ರತಿಭಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿ ಯವರಿಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಾಗುವುದು. ನಂತರ ತಾಲೂಕು ಕಚೇರಿ ಮುಂಬಾಗ
ಮಾಜಿ ಪ್ರಧಾನಿ,ಆಧುನಿಕ ಭಾರತದ ಕನಸುಗಾರ, ತಂತ್ರಜ್ಞಾನದ ಪಿತಾಮಹ, ಯುವಕರ ಕಣ್ಮಣಿ, ಬಡವರ ಬಂಧು ಸನ್ಮಾನ್ಯ
ಶ್ರೀ ದಿ|| ರಾಜೀವ್ ಗಾಂಧಿ ಹಾಗೂ ದೀನದಲಿತರ ನಾಯಕ ಹಿಂದುಳಿದ ವರ್ಗಗಳ ನೇತಾರ ಅಸ್ಪೃಶ್ಯತೆಯನ್ನು ಮೆಟ್ಟಿನಿಂತ ಹೋರಾಟಗಾರ ಸನ್ಮಾನ್ಯ ಶ್ರೀ ದಿ||ದೇವರಾಜ್ ಅರಸ್ ರವರ ಜನ್ಮದಿನೋತ್ಸವ ಆಚರಣೆ. ತದನಂತರ, ಬಿಜೆಪಿ ಆಡಳಿತದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕೊರೋನಾ ಸಂದರ್ಭದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ಹಾಗೂ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯವನ್ನು ವಿರೋಧಿಸಿ ನೊಂದಿರುವ ಜನತೆಯ ಧ್ವನಿಯನ್ನು ಸರ್ಕಾರಗಳಿಗೆ ಮುಟ್ಟಿಸುವ ಸಲುವಾಗಿ ಮಾನ್ಯ ತಹಸಿಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಲಾಗುವುದು… ಬೃಹತ್ ಕಾಲ್ನಡಿಗೆ (ಜನಧ್ವನಿ) ಜಾಥಾದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶ್ರೀಯುತ ಎಚ್.ಎ.ಗದ್ದಿಗೇಶ್, ಶ್ರೀ ಸಣ್ಣಕ್ಕಿ ಬಸವನ ಗೌಡ್ರು, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷರಾದ ಶ್ರೀಯುತ ಉಮಾಪತಿ, ವರದರಾಜಪ್ಪಗೌಡ್ರುಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಯುತ ಡಿ ಜಿ ವಿಶ್ವನಾಥ್*
ಬಿ.ಸಿದ್ದಪ್ಪ, ಶ್ರೀ ರಮೇಶ್, ಡಾ|| ಈಶ್ವರನಾಯಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎಸ್ ಜಿ ಮಧುಗೌಡ .NSUI ಅಧ್ಯಕ್ಷರಾದ ಮನೋಜ್ ಭಾಗವಹಿಸಲಿದ್ದಾರೆ, ತಾಲೂಕಿನ ಎಲ್ಲಾ ವ್ಯಕ್ತಿಗಳು ಹಾಗೂ ಮುಂಚೂಣಿ ಘಟಕ (ಜಿಲ್ಲಾ ಪಂಚಾಯತಿ, ತಾಲೂಕ ಪಂಚಾಯತಿ, ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯಿತಿ, ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್, ಎಪಿಎಂಸಿ ಸದಸ್ಯರು, ವಿಎಸ್ಸೆಸ್ಸೆಎನ್ ಸದಸ್ಯರು , ಪಿಎಲ್ ಡಿ ಬ್ಯಾಂಕ್ ಸದಸ್ಯರುಗಳು,ಎನ್.ಎಸ್.ಯು.ಐ, ಕಿಸಾನ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಸಾಮಾಜಿಕ ಜಾಲತಾಣ ಘಟಕ) ದ ನಾಯಕರು, ಪದಾಧಿಕಾರಿಗಳು ಅಭಿಮಾನಿಗಳು, ಕಾರ್ಯಕರ್ತರು ತಪ್ಪದೇ ಕಡ್ಡಾಯವಾಗಿ ಭಾಗವಹಿಸಿ ಈ ಬೃಹತ್ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗಳಿಗೆ ಮನವಿ ಮಾಡಿದರು.

Leave a Reply

Your email address will not be published. Required fields are marked *