ದಾವಣಗೆರೆ ಆ.19
ಗಣೇಶ ಹಾಗೂ ಮೊಹರಂ ಹಬ್ಬಗಳನ್ನು ಸಾರ್ವಜನಿಕರು ಶಾಂತಿ
ಮತ್ತು ಸೌಹಾರ್ದಯುತವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿ
ಮಹಂತೇಶ ಬೀಳಗಿ ಕರೆ ನೀಡಿದರು.
ಬುಧವಾರ ನಗರದ ಜಿಲ್ಲಾ ಪೆÇಲೀಸ್ ವರಿμÁ್ಟಧಿಕಾರಗಳ ಕಚೇರಿ
ಸಭಾಂಗಣದಲ್ಲಿ ಗಣೇಶ ಮತ್ತು ಮೊಹರಂ ಹಬ್ಬಗಳ ಆಚರಣೆ
ಪ್ರಯುಕ್ತ ಆಯೋಜಿಸಲಾಗಿದ್ದ ನಾಗರಿಕರ ಸೌಹಾರ್ಧ ಸಭೆಯ
ಅಧ್ಯಕ್ಷೆತೆ ವಹಿಸಿ ಮಾತನಾಡಿದ ಅವರು, ಹಬ್ಬಗಳ ಆಚರಣೆಯು
ಆಡಂಬರಗಳಿಲ್ಲದೇ ಭಕ್ತಿಪೂರಕವಾಗಿರಬೇಕು ಎಂದರು.
ನಾಗರಿಕರು ಕಾನೂನುಗಳನ್ನು ಉಲ್ಲಂಘನೆ ಮಾಡದೇ ಹಾಗೂ
ಹಬ್ಬ ಆಚರಣೆಗೆ ಬೇಕಾದ ಮುಂಜಾಗ್ರತ ಕ್ರಮಗಳನ್ನು
ಪಡೆದುಕೊಂಡು ಜಿಲ್ಲೆಯಾದ್ಯಂತ ಈ ಎರಡು ಹಬ್ಬಗಳನ್ನು
ಅತ್ಯಂತ ಶಾಂತಿಯುತವಾಗಿ ಮತ್ತು ಕಾನೂನಿಗೆ
ಧÀಕ್ಕೆಯಾಗದಂತೆ ಆಚರಿಸಬೇಕೆಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಕೊರೊನಾ ಇದೆ ಎಂದು ಅನಿಸುತ್ತಿಲ್ಲ. ಯಾರೊಬ್ಬರೂ
ಮಾಸ್ಕ್ ಹಾಕುತ್ತಿಲ್ಲ. ಸಾಮಾಜಿಕ ಅಂತರ ಇಲ್ಲ. ಹೀಗಿರುವಾಗ ನಿಯಂತ್ರಣ
ಅಸಾಧ್ಯವಾಗಿದೆ. ಕರೊನಾ ನಿಯಂತ್ರಣಕ್ಕೆ ಜನರ ಸಹಕಾರ
ಮುಖ್ಯವಾಗಿದೆ. ಸೋಂಕಿನ ಲಕ್ಷಣ ಕಂಡುಬಂದಲ್ಲಿ ಯಾವುದೇ ಕೀಳು
ಭಾವನೆಗೆ ಒಳಗಾಗದೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಜೊತೆಗೆ ಕೊರೊನಾ ಪರೀಕ್ಷೆಗೆ ಪ್ರತಿಯೊಬ್ಬರು ಸಹಕರಿಸಬೇಕು
ಎಂದು ಮನವಿ ಮಾಡಿದ ಅವರು, ದಿನಕ್ಕೆ 2 ರಿಂದ 3 ಸಾವಿರ ಜನರ ಪರೀಕ್ಷೆ
ಮಾಡಿಸಲಾಗುತ್ತಿದೆ. ಇದರಿಂದಾಗಿ ಸಾಕಷ್ಟು ಕೇಸ್ ಪತ್ತೆಯಾಗುತ್ತಿದೆ
ಎಂದು ತಿಳಿಸಿದರು.
ಮಹಾನಗರಪಾಲಿಕೆ ಮೇಯರ್ ಅಜಯ್ ಕುಮಾರ ಮಾತನಾಡಿ,
ಕೊರೊನಾ ಸಂದರ್ಭ ಇದಾಗಿದ್ದು, ಕೊರೊನಾದಿಂದ ಎಲ್ಲರಿಗೂ
ತೊಂದರೆ ಆಗಿದೆ. ಈ ಸಮಯದಲ್ಲಿ ಹಬ್ಬಗಳ ಆಚರಣೆಯಲ್ಲಿ
ಯಾವುದೇ ವಿಜೃಂಭಣೆ ಬೇಡ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು
ಬಹಳ ಸರಳವಾಗಿ ಆಚರಣೆ ಮಾಡಬೇಕು ಎಂದರು.
ಎಂಜಲು ಮಾತ್ರವಲ್ಲದೆ ಗಾಳಿಯಿಂದಲೂ ಕೊರೊನಾ ಬರುತ್ತದೆ
ಎಂದು ತಿಳಿದುಬಂದಿದೆ. ದಯವಿಟ್ಟು ಪ್ರತಿಯೊಬ್ಬರು ಮಾಸ್ಕನ್ನು
ಕಡ್ಡಾಯವಾಗಿ ಬಳಸಬೇಕು. ಸÀರ್ಕಾರದ ಆದೇಶ ಪಾಲಿಸುವ
ಮೂಲಕ ಕೊರೊನಾ ನಿಯಂತ್ರಣಕ್ಕೆ ಜನರು ಸಹಕರಿಸಬೇಕು
ಎಂದರು.

ಹಬ್ಬದ ಆಚರಣೆ ಸಂದರ್ಭದಲ್ಲಿ ನೀರು, ಸ್ವಚ್ಛತೆ, ಬೆಳಕು ಬಹಳ
ಮುಖ್ಯವಾಗಿದೆ. ಇದಕ್ಕೆ ಪಾಲಿಕೆ ವತಿಯಿಂದ ಹೆಚ್ಚಿನ ಆದ್ಯತೆ
ನೀಡಲಾಗುವುದು ಎಂದ ಅವರು, ರೌಡಿ ಶೀಟರ್ಸ್‍ಗಳಲ್ಲಿ ಅಮಾಯಕರು,
ಒಳ್ಳೆಯ ಹುಡುಗರು ಸೇರಿಸಿದ್ದಾರೆ. ತಪ್ಪೇ ಮಾಡದೆ ಶಿಕ್ಷೆಗೆ
ಒಳಗಾಗಿದ್ದಾರೆ, ಈ ಬಗ್ಗೆ ಅಧಿಕಾರಿಗಳು ಗಮನಹರಿಸುವ ಮೂಲಕ
ಅವರಿಗೂ ಒಂದು ಅವಕಾಶ ನೀಡಬೇಕೆಂದು ಅಧಿಕಾರಿಗಳಲ್ಲ್ಲಿ ಮನವಿ
ಮಾಡಿದರು.
ಕೊರೊನಾ ಮಹಾ ಸಂಕಷ್ಟ ಜಗತ್ತಿಗೆ ಬಂದಿದೆ. ಅದು ಎಲ್ಲರಿಗೂ
ಗೊತ್ತಿರುವ ವಿಷಯ. ಇಂತಹ ಸಂದರ್ಭದಲ್ಲಿ ಹಬ್ಬದ ಆಚರಣೆ
ನಮ್ಮ ಆತ್ಮಸಾಕ್ಷಿಗೆ ಬಿಟ್ಟಿದ್ದು. ಎಲ್ಲರೂ ಸರ್ಕಾರದ
ನಿಯಮಗಳನ್ನು ಪಾಲಿಸುವ ಮೂಲಕ ಹಬ್ಬವನ್ನು
ಶಾಂತಿಯುತವಾಗಿ ಆಚರಿಸೋಣ ಎಂದು ದೂಡಾ ಅಧ್ಯಕ್ಷ ರಾಜನಳ್ಳಿ
ಶಿವಕುಮಾರ ಹೇಳಿದರು.
ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಹನುಮಂತರಾಯ ಮಾತನಾಡಿ, ಶಾಂತಿ
ಸೌಹಾರ್ಧದ ನೆಲೆಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸುವ
ಮೂಲಕ ನಮಗಿರುವ ಕಾನೂನಿನ ಪರಿಮಿತಿಯಲ್ಲಿ ಹಬ್ಬಗಳನ್ನು
ಆಚರಣೆ ಮಾಡಬೇಕು. ಬೇರೆಯವರ ಭಾವನೆಗಳಿಗೆ
ಧÀಕ್ಕೆಯಾಗದಂತೆ ಹಬ್ಬ ಆಚರಿಸಬೇಕೆಂದು ಸಲಹೆ ನೀಡಿದರು.
ಸಾಮಾಜಿಕ ಮಾಧ್ಯಮಗಳ ಬಗ್ಗೆ ಪ್ರತಿಯೊಬ್ಬರು ಜಾಗೃತಿ
ವಹಿಸಬೇಕು. ಇದಕ್ಕೆ ಹೊಸ ಕಾನೂನು ಮಾಡಬೇಕೆಂದು ಸರ್ಕಾರದ
ಮಟ್ಟದಲ್ಲಿ ಈಗಾಗಲೇ ಚರ್ಚೆ ನಡೆದಿದೆ. ಅನಾವಶ್ಯಕವಾಗಿ ಜನರ ನೆಮ್ಮದಿ,
ಸಾಮಾಜಿಕ ಸ್ವಾಸ್ತ್ಯ ಕೆಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಮೊಬೈಲ್
ದುರ್ಬಳಕೆ ಕಡಿಮೆ ಆಗಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆ
ಚಾಚು ತಪ್ಪದೆ ಪಾಲಿಸಬೇಕಿದ್ದು, ಶಾಂತಿ ಸುವ್ಯಯಸ್ಥಿತಯವಾಗಿ ಹಬ್ಬ
ಆಚರಿಸಬೇಕಿದೆ ಎಂದರು.
ಜಿಲ್ಲೆಯಲ್ಲಿ 1442 ರೌಡಿ ಶಿಟರ್ಸ್ ಇದ್ದಾರೆ. ಎಲ್ಲವೂ ಪರ್ಮೆನೆಂಟ್ ರೆಕಾಡ್ರ್ಸ್ ಅಲ್ಲ.
ಜಿಲ್ಲೆಗೆ ಸಂಬಂಧಪಟ್ಟ ಕೆಟ್ಟ ಘಟನೆಗಳ ಹಿನ್ನೆಲೆಯಲ್ಲಿ ಜನರಿಗೆ ಶಾಂತಿ
ಒದಗಿಸುವ ದಿಸೆಯಲ್ಲೆ ನಿಗಾ ಇಡಲು ಮಾಡಲಾಗಿದೆ. ವಯಸ್ಸದಾವರು,
ಕೆಸ್ ಖುಲಾಸೆಯಾದವರು, ಊರು ಬಿಟ್ಟು ಹೋಗಿ ಬೇರೆ ಕಡೆ
ನೆಲೆಸಿದವರು ಹಾಗೂ ಜೀವನದಲ್ಲಿ ಬದಲಾಗಿ ಬದುಕು
ನಡೆಸುತ್ತಿರುವವರನ್ನು ಸದ್ಯದಲ್ಲಿಯೇ ರೌಡಿ ಶಿಟರ್ಸ್‍ನಿಂದ ತೆಗೆದು
ಹಾಕುತ್ತೇವೆ ಎಂದು ತಿಳಿಸಿದರು.
ಷóರತ್ತುಗಳು: ಗಣೇಶ ಚತುರ್ಥಿ ಹಬ್ಬದಲ್ಲಿ ಸರಳ ರೀತಿಯಲ್ಲಿ
ಭಕ್ತಿ ಪೂರ್ವಕವಾಗಿ ದೇವಸ್ಥಾನದೊಳಗೆ ತಮ್ಮ ಮನೆಗಳಲ್ಲಿ
ಅಥವಾ ಸರ್ಕಾರಿ, ಖಾಸಗಿ, ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಟ
ಸಂಖ್ಯೆಯೊಂದಿಗೆ ಆಚರಿಸಬಹುದು.  ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ
ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವವರು ಗಣೇಶ
ಮೂರ್ತಿಯನ್ನು ನಾಲ್ಕು ಅಡಿ ಎತ್ತರ ಮೀರದಂತೆ ಹಾಗೂ
ಮನೆಯೊಳಗೆ ಎರಡು ಅಡಿ ಮೀರದಂತೆ ಪ್ರತಿಷ್ಟಾಪಿಸುವುದು.
ಪಾರಂಪರಿಕ ಗಣೇಶೋತ್ಸವವಕ್ಕಾಗಿ ಗಣೇಶೋತ್ಸವ
ಸಮಿತಿಗಳು, ಮಂಡಳಿಗಳು, ಗಣೇಶ ಮೂರ್ತಿಯನ್ನು
ಪ್ರತಿಷ್ಠಾಪನೆ ಮಾಡಲು ಮುನ್ಸಿಪಲ್ ಕಾರ್ಪೋರೇಷನ್, ಸ್ಥಳಿಯ
ಆಡಳಿತದಿಂದ ಪೂರ್ವಾನುಮತಿಯನ್ನು ಪಡೆಯತಕ್ಕದು, ಒಂದು
ವಾರ್ಡಿಗೆ, ಗ್ರಾಮಕ್ಕೆ ಒಂದು ಸಾರ್ವಜನಿಕ ಗಣೇಶೋತ್ಸವವನ್ನು
ಮಾತ್ರ ಆಚರಿಸಲು ಪ್ರೋತ್ಸಾಹಿಸುವುದು.     ಇಂತಹ ಸ್ಥಳಗಳಲ್ಲಿ 20
ಜನಕ್ಕೆ ಸೀಮಿತವಾದ ಆವರಣವನ್ನು ನಿರ್ಮಿಸುವುದು, ಒಮ್ಮೆಲೆ 20 ಕ್ಕಿಂತ
ಹೆಚ್ಚಿನ ಜನ ಸೇರದಂತೆ  ಭಕ್ತಾಧಿಗಳಿಗೆ ಅನುವು ಮಾಡುವುದು.
 ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ
ಸಾಂಸ್ಕøತಿಕ ಸಂಗಿತ, ನೃತ್ಯ, ಇನ್ನಿತರೆ ಯಾವದೇ ಮನರಂಜನಾ
ಕಾರ್ಯಕ್ರಮಗಳಿಗೆ ಅವಕಾಶವಿರುವುದಿಲ್ಲ.    ಗಣೇಶ

ಮೂರ್ತಿಯನ್ನು ತರುವಾಗ ಹಾಗೂ ವಿರ್ಸಜಿಸುವಾಗ ಯಾವುದೇ
ಕಾರಣಕ್ಕಾಗಲಿ ಅಥವಾ ಯಾವುದೇ ಸಂದರ್ಭಗಳಲ್ಲಿ ಯಾವುದೇ
ರೀತಿಯ ಮೆರವಣಿಗೆಗಳನ್ನು  ಹೊರಡಿಸತಕ್ಕದಲ್ಲ ಎಂದು
ಷರತ್ತುಗಳನ್ನು ವಿವರಿಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೆÇಲೀಸ್ ಅಧಿಕಾರಿ
ಎಂ.ರಾಜು, ಹಿಂದುಗಳ ಗಣೇಶ ಹಬ್ಬ ಮತ್ತು ಮುಸ್ಲಿಂ
ಧರ್ಮದವರ ಮೊಹರಂ ಹಬ್ಬಗಳು ಒಂದೇ ಬಾರಿಗೆ ಬಂದಿರುವುದರಿಂದ
ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ
ಶಾಂತಿ ಮತ್ತು ಸುವ್ಯವಸ್ಥಿತವಾಗಿ ನಡೆಯಲು ಅಧಿಕಾರಿ ಮತ್ತು
ನಾಗರಿಕರ ನಡುವೆ ಸಮನ್ವಯ ಅತಿ ಮುಖ್ಯವಾಗಿದೆ ಎಂದರು.
ಹಿಂದೂ ಸಮಾಜದ ಮುಂಖಡರಾದ ಕೆ.ಬಿ.ಶಂಕರನಾರಾಯಣ
ಮಾತನಾಡಿ, ಕೋವಿಡ್ ಮಹಾಮಾರಿಯಿಂದ ಇಡೀ ಜಗತ್ತು ತತ್ತರಿಸುವಂತೆ
ಮಾಡಿ ಹೈರಾಣಾಗಿಸಿದೆ. ಪ್ರಪಂಚದ ಎಲ್ಲೆಡೆ ಕೊರೊನಾ ಹಬ್ಬಿದೆ. ಬೇರೆ
ದೇಶಕ್ಕೆ ಹೋಲಿಕೆ ಮಾಡಿದರೆ ನಮ್ಮ ದೇಶದಲ್ಲಿ ಸಾವು-ನೋವು
ಕಡಿಮೆ ಇದೆ. ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳು ಬಹಳಷ್ಟು
ಶ್ರಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಉಲ್ಬಣ ಆಗಬಾರದೆಂದು
ಎಷ್ಟೇ ಪ್ರಯತ್ನ ನಡೆಸಿದರು ಕಡಿಮೆ ಮಾಡಲು ಆಗುತ್ತಿಲ್ಲ. ಇದಕ್ಕೆ
ಒಂದು ಅಂತ್ಯ ಎಂಬುದು ಇದ್ದು, ಅದು ಸದ್ಯದಲ್ಲಿಯೇ ಸಮೀಪಿಸಲಿದೆ
ಎಂದು ಹೇಳಿದರು.
ಇಂತಹ ಸಂಕಷ್ಟ ಸಮಯದಲ್ಲಿ ಗಣೇಶ ಮತ್ತು ಮೊಹರಂ
ಹಬ್ಬವನ್ನು ನಗರದ ಜನತೆ ಶಾಂತವಾಗಿ ಹಾಗೂ ಯಶಸ್ವಿಯಾಗಿ
ನೆರವೇರಿಸಬೇಕು. ಆದ್ಧೂರಿಯಾಗಿ ಆಚರಿಸದೆ ಶಾಸ್ತ್ರೋಕ್ತವಾಗಿ
ಸರಳವಾಗಿ ಆಚರಿಸುವ ಮೂಲಕ ಸರ್ಕಾರದ ನಿಯಮಗಳನ್ನು
ಕಟ್ಟುನಿಟ್ಟಾಗಿ ಪಾಲಿಸಬೇಕಿದೆ ಎಂದರು.
ಮುಸ್ಲಿಂ ಸಮಾಜದ ಮುಖಂಡ ಸಾದಿಕ್ ಪೈಲ್ವಾನ್ ಮಾತನಾಡಿ, ಜಿಲ್ಲೆಯ
ಶಾಂತಿ ತೋಟದಲ್ಲಿ ಮುಳ್ಳು ಅರಳಬಾರದು, ಹೂ ಅರಳಬೇಕು.
ಜೊತೆ ಜೊತೆಗೆ ಎರಡು ಹಬ್ಬಗಳು ಬಂದಿರುವ ಹಿನ್ನೆಲೆಯಲ್ಲಿ
ಪ್ರತಿಯೊಬ್ಬರು ಸಹಕರಿಸಿಕೊಂಡು ಹಬ್ಬ ಆಚರಿಸಬೇಕು ಎಂದರು.
ನಮ್ಮ ಸಮಾಜದ ಮುಖಂಡರು ಹಾಗೂ ಮೌಲ್ವಿಗಳೊಂದಿಗೆ
ಮೊಹರಂ ಹಬ್ಬದ ಕುರಿತು ಕೂಲಂಕೂಷವಾಗಿ ಮಾತನಾಡಿ
ಚರ್ಚಿಸಲಾಗಿದ್ದು, ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಹಬ್ಬ
ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಕ್ರೈಸ್ತ ಧರ್ಮದ ಫಾದರ್ ಹೊನ್ನ ನಾಯರ ಮಾತನಾಡಿ, ಸೌಹರ್ದ
ಸಭೆಯ ಉದ್ದೇಶ ಎಲ್ಲರಿಗೂ ಗೊತ್ತಿದೆ. ಅದು ಬಾಯಲ್ಲಿ ಮಾತ್ರ
ಇರದೇ, ಕ್ರಿಯೆಯಲ್ಲಿ ಬಳಕೆಯಾಗಬೇಕು. ಜೊತೆಗೆ ಹಬ್ಬಗಳ
ಆಚರಣೆಗಿಂತಲೂ ಅನುಕರಣೆ ಬಹಳ ಮುಖ್ಯವಾಗಿದೆ. ಇತ್ತೀಚೆಗೆ
ಧರ್ಮ ಹಾಗೂ ದೇವರಗಳ ಹೆಸರಲ್ಲಿ ಶೋಷಣೆ, ದಂಗೆ ಹಾಗೂ
ಅಸಮಾಧಾನಗಳು ಉಂಟಾಗುತ್ತಿವೆ. ಅದು ಆಗಬಾರದು. ಸರ್ಕಾರದ
ನಿಯಮಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯವಾಗಿದ್ದು,
ಎಲ್ಲರೂ ಒಟ್ಟಾಗಿ ಹಬ್ಬಗಳನ್ನು ಆಚರಿಸಬೇಕು ಎಂದರು.
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ,
ದಿಎಚ್‍ಓ ಡಾ.ರಾಘವೇಂದ್ರಸ್ವಾಮಿ, ವಿವಿಧ ಸಮಾಜದ ಮುಖಂಡರುಗಳಾದ
ಚನ್ನಬಸಪ್ಪಗೌಡ್ರು, ಸರ್ದಾರ್ ಚನ್ನಗಿರಿ, ಅಮಾನುಲ್ಲಾಖಾನ್, ಸತೀಶ್
ಪೂಜಾರ್, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು,
ವಿವಿಧ ಇಲಾಖಾ ಅಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *