ದಾವಣಗೆರೆ ಆ.19
ಭಾರತ ಚುನಾವಣಾ ಆಯೋಗ ಹಾಗೂ ಮುಖ್ಯ
ಚುನಾವಣಾಧಿಕಾರಿಗಳು, ಬೆಂಗಳೂರು ಇವರ ನಿರ್ದೇಶನದಂತೆ
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ
ಅಧ್ಯಕ್ಷತೆಯಲ್ಲಿ ಅರ್ಹತಾ ದಿನಾಂಕ 01-01-2020 ಕ್ಕೆ ಸಂಬಂಧಿಸಿದಂತೆ
ಭಾವಚಿತ್ರವಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ
ಸಮಗ್ರ ಸ್ವರೂಪದ ಪರಿಷ್ಕರಣೆ ಕಾರ್ಯವನ್ನು ಜಿಲ್ಲೆಯಲ್ಲಿ
ಯಶಸ್ವಿಗೊಳಿಸಲು ಮತದಾರರ ನೋಂದಣಾಧಿಕಾರಿಗಳು ಹಾಗೂ
ಸಹಾಯಕ ಮತದಾರರ ನೋಂದಣಾಧಿಕಾರಿಗಳೊಂದಿಗೆ ಸಭೆ ನಡೆಸಿ
ಸೂಚನೆಗಳನ್ನು ನೀಡಿದರು.
ಅವರು ಸಭೆಯಲ್ಲಿ ಮಾತನಾಡಿ ಭಾರತ ಚುನಾವಣಾ ಆಯೋಗವು
ಮತದಾರರ ಪಟ್ಟಿಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ
ವೇಳಾಪಟ್ಟಿಯನ್ನು ಸಿದ್ದಪಡಿಸಿದೆ. ಈ ಪ್ರಕಾರ 10-08-2020 ರಿಂದ 31-08-
2020 ವರೆಗೆ ಪೂರ್ವ ಪರಿಷ್ಕರಣೆ ಚಟುವಟಿಕೆಗಳನ್ನು
ಕೈಗೊಳ್ಳಬೇಕು. ದಿ: 16-11-2020 ಕ್ಕೆ ಸಮಗ್ರ ಮತದಾರ
ಪಟ್ಟಿಯನ್ನು ಪ್ರಕಟಿಸಬೇಕು. ದಿ: 16-11-2020 ರಿಂದ 15-12-2020
ರವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸುವ
ಅವಧಿಯಾಗಿರುತ್ತದೆ. ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯ
ಎರಡು ಶನಿವಾರ ಮತ್ತು ಭಾನುವಾರಗಳಂದು ವಿಶೇಷ ಪ್ರಚಾರ
ಕೈಗೊಳ್ಳಬೇಕು. ದಿ: 15-01-2021 ಕ್ಕೆ ಅಂತಿಮ ಮತದಾರರ
ಪಟ್ಟಿಯನ್ನು ಪ್ರಕಟಿಸಬೇಕಾಗಿದ್ದು ಈ ನಿಟ್ಟಿನಲ್ಲಿ ಮತದಾರರ
ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ
ನೋಂದಣಾಧಿಕಾರಿಗಳು ನಿಯಮಾನುಸಾರ ಕ್ರಮಗಳನ್ನು
ಕೈಗೊಂಡು ಭಾವಚಿತ್ರವಿರುವ ಮತದಾರರ ಪಟ್ಟಿಗಳ ವಿಶೇಷ
ಸಂಕ್ಷಿಪ್ತ ಸಮಗ್ರ ಸ್ವರೂಪದ ಪರಿಷ್ಕರಣೆ ಕಾರ್ಯವನ್ನು
ಜಿಲ್ಲೆಯಲ್ಲಿ ಯಶಸ್ವಿಗೊಳಿಸುವಂತೆ ತಿಳಿಸಿದರು.
ಈಲ್ಲೆಯಲ್ಲಿ ಒಟ್ಟು 07 ವಿಧಾನಸಭಾ ಕ್ಷೇತ್ರಗಳು 103
ಜಗಳೂರು, 105 ಹರಿಹರ, 106 ದಾವಣಗೆರೆ ಉತ್ತರ, 107 ದಾವಣಗೆರೆ

ಉತ್ತರ, 108 ಮಾಯಕೊಂಡ, 109 ಚನ್ನಗಿರಿ, 110 ಹೊನ್ನಾಳಿ
ಇರುತ್ತವೆ. ಪ್ರತಿಯೊಬ್ಬ ಮತದಾರನು ಕರಡು ಮತದಾರರ
ಪಟ್ಟಿಯಲ್ಲಿ ತನ್ನ ಹೆಸರಿನ ನೋಂದಣಿ ಕುರಿತು ಪರಿಶೀಲನೆಗೆ ಅವಕಾಶ
ಕಲ್ಪಿಸಲಾಗಿದೆ.
ಎಪಿಕ್ ಹೊಂದಿರದ ಮತದಾರರು ಹಾಗೂ ಹಿಂದಿನ ಸಾಲಿನ ಮತದಾರರ
ಪಟ್ಟಿಯಲ್ಲಿ ಹೆಸರಿದ್ದ ಮತದಾರರು ಮತದಾರರ ಪಟ್ಟಿಯಲ್ಲಿ
ತಮ್ಮ ಹೆಸರಿರುವ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಿ ಕರಡು
ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ
ದೃಢಪಡಿಸಿಕೊಳ್ಳುವುದು.
ಒಂದು ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಮಾತ್ರ
ಹೆಸರು ನೋಂದಾಯಿಸಿಕೊಂಡಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.
ಮತದಾರರ ಪಟ್ಟಿಯಲ್ಲಿ ಈವರೆಗೆ ನೋಂದಣಿಯಾಗದ ಹಾಗೂ 01-
01-2020 ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವ ಮತದಾರರು
ತಮ್ಮ ಹೆಸರನ್ನು ನೋಂದಾಯಿಸಲು ನಿರ್ದಿಷ್ಟಪಡಿಸಿದ ನಮೂನೆಯಲ್ಲಿ
ಅರ್ಜಿ ಸಲ್ಲಿಸಬಹುದು.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ನಮೂನೆ
6, ಹೆಸರು ತೆಗೆದುಹಾಕುವುದು/ಆಕ್ಷೇಪಣೆಗೆ ನಮೂನೆ 7,
ತಿದ್ದುಪಡಿಗೆ ನಮೂನೆ 8, ಸ್ಥಳಾಂತರ ನಮೂನೆ-8ಎ, ವಿದೇಶಗಳಲ್ಲಿ
ನೆಲೆಸಿರುವ ಭಾರತೀಯ ನಾಗರೀಕರು ಹೆಸರು ಸೇರ್ಪಡೆಗೆ
ನಮೂನೆ 6ಎ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ
ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ/ನಿರ್ದಿಷ್ಟಾಧಿಕಾರಿಗಳಿಗೆ ಸಂಬಂಧಿಸಿದ
ಮತಗಟ್ಟೆಗಳಲ್ಲಿ ಅಥವಾ ಖುದ್ದಾಗಿ ಮತದಾರರ
ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ
ನೋಂದಣಾಧಿಕಾರಿಗಳ ಕಚೇರಿಗೆ ಹಾಗೂ ಆನ್‍ಲೈನ್ ಮುಖಾಂತರ
(ತಿತಿತಿ.ಟಿvsಠಿ.iಟಿ) ಸಲ್ಲಿಸಬಹುದು.
ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ರೀತಿಯಲ್ಲಿ
ಪಾಲ್ಗೊಂಡು ಮತದಾರರ ನೋಂದಣಿ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ
ದೋಷರಹಿತ ಮತದಾರರ ಪಟ್ಟಿ ತಯಾರಿಸಲು ಸಹಕರಿಸಬೇಕೆಂದು
ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಸಭೆಯಲ್ಲಿ ಎಡಿಸಿ ಪೂಜಾರ ವೀರಮಲ್ಲಪ್ಪ, ಎಲ್ಲ ವಿಧಾನಸಭಾ
ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳು ಹಾಗೂ
ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *