ದಾವಣಗೆರೆ ಹೊನ್ನಾಳಿ ಜಿಲ್ಲೆ ಚಿug20 ಹೊನ್ನಾಳಿ ನ್ಯಾಮತಿ ತಾಲೂಕುಗಳ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ರವರ 2 ಮಹನೀಯರ ಜನ್ಮ ದಿನದ ಆಚರಿಸಲಾಯಿತು. ರಾಜ್ಯ ಸರ್ಕಾರವು ಜನವಿರೋಧ ಕಾನೂನು ತಿದ್ದುಪಡಿ ಮಾಡಿರುವುದನ್ನು ಖಂಡಿಸಿ ಇಂದು ಮಾಜಿ ಶಾಸಕರಾದ ಡಿ.ಜಿ ಶಾಂತನ ಗೌಡ್ರು ಮತ್ತು ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು. ನಂತರ ಡಿ ಜಿ ಶಾಂತನಗೌಡರು ಮಾತನಾಡಿ ರಾಜ್ಯ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಮತ್ತು ಪಕ್ಷದ ಆದೇಶದ ಹಿನ್ನೆಲೆಯಲ್ಲಿ ಇಂದು ಹೊನ್ನಾಳಿಯ ಜನಧ್ವನಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಪ್ರತಿಭಟನೆಯನ್ನು ಮಾಡಲಾಯಿತು .
ಈ ಹಿಂದೆ ನಮ್ಮ ಪಕ್ಷದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ದೇಶದ ಮೊದಲ ಬಾರಿಗೆ ಮಾಹಿತಿ ತಂತ್ರಜ್ಞಾನವನ್ನು ತಂದರು. ಆದರೆ ಬಿಜೆಪಿಯವರು ನಾವು ತಂದಿರುವುದಾಗಿ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ ಇದು ವಿಪರ್ಯಾಸದ ಸಂಗತಿ ಎಂದು ಹೇಳಿದರು .ಈ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದಾಗ ದೇವರಾಜ ಅರಸ್ ಅವರು 1978ರ ಅವಧಿಯಲ್ಲಿ ಉಳಿಯುವನೇ ಒಡೆಯ ಕಾನೂನನ್ನು ತಂದರು .ಆ ಸಮಯದಲ್ಲಿ ಮಾಜಿ ಎಂಎಲ್ಎ ಕಾಡಸಿದ್ದಪ್ಪನವರು ಶಾಸಕರಾಗಿದ್ದರು.ಆ ಸಮಯದಲ್ಲಿ ಇವರ ಉಳುವವನೇ ಒಡೆಯ ಕಾನೂನು ಬಂದಿತು. ಆ ಕಾನೂನಿಗೆ ಗೌರವ ಕೊಟ್ಟು ಡಿ ಜಿ ಬಸನಗೌಡ ರವರು ಕಾಡು ಸಿದ್ದಪ್ಪನವರ ಎದುರುಗಡೆ ಸೋತ್ತಿದ್ದರು ಸಹ ನಮ್ಮ 3600 ಎಕರೆ ಜಮೀನನ್ನ ಯಾರು ಉಳುಮೆಯನ್ನು ಮಾಡುತ್ತಾರೋ ಎಲ್ಲರಿಗೂ ಉಚಿತವಾಗಿ ರಿಜಿಸ್ಟ್ರೇಷನ್ ಮಾಡುತ್ತೇನೆ ಎಂದು ಹೇಳಿ ಆ ಮೂಲಕ ಕಾನೂನಿಗೆ ಗೌರವ ತಂದುಕೊಟ್ಟರು. ಯಾಕೆ ಈ ಮಾತನ್ನ ಡಿಜಿ ಶಾಂತನಗೌಡ್ರುರವರು ಪುನರುಚ್ಚರಿಸಿ ಈ ಸಮಯದಲ್ಲಿ ನಮ್ಮ ಕುಟುಂಬದ ಹೆಸರು ಯಾಕೆ ಹೇಳಬೇಕಾಯಿತೆಂದರೆ ಈಗ ರಾಜ್ಯ ಬಿಜೆಪಿ ಸರ್ಕಾರ ಜನವಿರೋಧಿ ನೀತಿಗಳನ್ನು ಸುಗ್ರೀವಾಜ್ಞೆಯನ್ನ ತಂದು ಭೂಸುಧಾರಣೆ ತಿದ್ದುಪಡಿ ಮತ್ತು ಎಪಿಎಂಸಿ ಕಾನೂನು ತಿದ್ದುಪಡಿ ತಂದಿರುವುದು ಕರ್ನಾಟಕ ರಾಜ್ಯದ ರೈತರುಗಳಿಗೆ ದೋಹ ಬಗೆದಿದೆ .ಈ ರೀತಿ ಕಾನೂನು ಬಂದರೆ ರಾಜ್ಯದ ರೈತರುಗಳು ಎಚ್ಚರಗೊಳ್ಳದ್ದೀದರೆ ಹಾಗೂ ನನ್ನು ಸೇರಿ ಜಮೀನನ್ನು ಕಳೆದುಕೊಂಡು ಮಕ್ಕಳು ಮತ್ತು ಮೂಮ್ಮಕಳು ಉದ್ಯೋಗ ಕಾತ್ರಿ ಯೋಜನೆಯಡಿಯಲ್ಲಿ ಕೂಲಿ ಕೆಲಸಕ್ಕೆ ಹೋಗಬೇಕಾಗುತ್ತದೆ ಎಂದು ಹೇಳುತ್ತಾ ಇನ್ನು ಐದು ವರ್ಷ ಕಳೆದ ನಂತರ ಗೊತ್ತಾಗುತ್ತೆ ರೈತರಿಗೆ ಹಣವುಳ್ಳವರು ರೈತರ ಜಮೀನುಗಳನ್ನು ದೊಡ್ಡ ದೊಡ್ಡ ವ್ಯಾಪಾರಸ್ಥರು ಬಂದು ಹೆಚ್ಚು ಹಣವನ್ನು ಕೊಟ್ಟಖರೀದಿಸಿ ರೈತರು ಕೂಲಿ ಮಾಡುವ ಪರಿಸ್ಥಿತಿ ಬರುತ್ತದೆ ಎಂದು ಎಂದು ಹೇಳುತ್ತಾ ರಾಷ್ಟ್ರಪತಿಗಳಿಗೆ ಮತ್ತು ರಾಜ್ಯಪಾಲರಿಗೆ ಮನವಿ ಪತ್ರವನ್ನು ಕಳುಹಿಸಿ ಕೊಡಬೇಕಾಗಿ ತಾಲೂಕಿನ ದಂಡಾಧಿಕಾರಿಗಳಾದ ತುಷಾರ್ ಬಿ ಹೊಸೂರರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗಿ ಯಾದವರು ಮಾಜಿ ಶಾಸಕರಾದ ಡಿಸಿ ಶಾಂತನಗೌಡ ಕಾಂಗ್ರೆಸ್ ಪಕ್ಷದ ಅಧ್ಯಕ್ಷರುಗಳಾದ ಜಗದೀಶಣ್ಣ ಸಣ್ಣಕ್ಕಿ ಬಸವನಗೌಡ ಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಿ ಜಿ ವಿಶ್ವನಾಥ್ ಎಚ್ಡಿ ಉಮಾಪತಿ ಮಹಿಳಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಪುಷ್ಪಲತಾ ರವಿ ಶಪ್ಪ ಸಾಸವಳ್ಳಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ರತ್ನಮ್ಮ ಏಕೆ ನಾಗಪ್ಪ ಮನೋಜ್ ಮಧು ಗೌಡ ದರ್ಶನ್ ಪ್ರಕಾಶ್ ಮುಂತಾದ ಮುಖಂಡರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು