ದಾವಣಗೆರೆ ಆ.20
   2020-21 ನೇ ಸಾಲಿನಲ್ಲಿ ರಾಜ್ಯ ವಿಶ್ವಕರ್ಮ ಸಮುದಾಯಗಳ
ಅಭಿವೃದ್ಧಿ ನಿಗಮದಿಂದ ವಿಶ್ವಕರ್ಮ ಸಮುದಾಯಗಳ
ಅಭ್ಯರ್ಥಿಗಳಿಗೆ ವಿವಿಧ ಸಾಲ ಮತ್ತು ಸಹಾಯಧನದ ಸೌಲಭ್ಯ ನೀಡಲು
ಅರ್ಜಿ ಆಹ್ವಾನಿಸಲಾಗಿದೆ.
    ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ
ನೇರಸಾಲ ಯೋಜನೆ, ಬ್ಯಾಂಕ್‍ಗಳ ಸಹಯೋಗದೊಂದಿಗೆ ಸ್ವಯಂ
ಉದ್ಯೋಗ ಸಾಲ, ಅರಿವು ಶೈಕ್ಷಣಿಕ ಸಾಲ ಯೋಜನೆ, ಗಂಗಾ ಕಲ್ಯಾಣ

ವೈಯಕ್ತಿಕ ನೀರಾವರಿ ಯೋಜನೆ ಹಾಗೂ ಮಹಿಳೆಯರಿಗೆ ಮೈಕ್ರೋ
ಕ್ರೆಡಿಟ್ ಸಾಲ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಾಮಾನ್ಯ ಅರ್ಹತೆಗಳು: ಅರ್ಜಿದಾರರು ವಿಶ್ವಕರ್ಮ ಸಮುದಾಯ
ಹಾಗೂ ಇದರ ಉಪಜಾತಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ
ವರಮಾನವು ಗ್ರಾಮಾಂತರ ಪ್ರದೇಶದವರಿಗೆ ರೂ. 40 ಸಾವಿರ
ಹಾಗೂ ಪಟ್ಟಣ ಪ್ರದೇಶದವರಿಗೆ ರೂ.55 ಸಾವಿರಕ್ಕಿಂತ ಕಡಿಮೆ
ಇರಬೇಕು (ಅರಿವು ಯೋಜನೆಗೆ ವಾರ್ಷಿಕ ವರಮಾನ 3.50
ಲಕ್ಷದೊಳಗಿರಬೇಕು). ಅರ್ಜಿದಾರರ ವಯಸ್ಸು 18 ರಿಂದ 55
ವರ್ಷಗಳ ಮಿತಿಯಲ್ಲಿರಬೇಕು. ಗಂಗಾ ಕಲ್ಯಾಣ ಯೋಜನೆಯಲ್ಲಿ
ನೀರಾವರಿ ಸೌಲಭ್ಯ ಪಡೆಯಲು ಅರ್ಜಿದಾರರರು ಸಣ್ಣ ಮತ್ತು ಅತೀ ಸಣ್ಣ
ರೈತರಾಗಿರಬೇಕು ಹಾಗೂ ಒಂದೇ ಕಡೆ ಹೊಂದಿಕೊಂಡಿರುವಂತೆ
ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಜಿಮೀನು ಹೊಂದಿರಬೇಕು.
   ಅರ್ಜಿ ಸಲ್ಲಿಸಲು ಇಚ್ಛಿಸುವವರು ನಿಗದಿತ ಅರ್ಜಿ ನಮೊನೆಗಳನ್ನು
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ
ವ್ಯವಸ್ಥಾಪಕರ ಕಚೇರಿಯಲ್ಲಿ ಪಡೆದು ಅಗತ್ಯ
ದಾಖಲಾತಿಗಳೊಂದಿಗೆ ಸೆ.16 ರೊಳಗಾಗಿ ಸಲ್ಲಿಸಬಹುದಾಗಿದೆ ಎಂದು ರಾಜ್ಯ
ವಿಶ್ವಕರ್ಮ ಸಮುದಾಯಗಳÀ ಅಭಿವೃದ್ಧಿ ನಿಗಮದ ಜಿಲ್ಲಾ
ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *