ದಾವಣಗೆರೆ ಆ.20
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ 2020-21 ನೇ
ಸಾಲಿನ ಕರ್ನಾಟಕದ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರರ ಮಕ್ಕಳಿಗೆ ಶಿಷ್ಯ
ವೇತನ ಹಾಗೂ ಹೊರ ರಾಜ್ಯದ ಪಿಂಚಣಿದಾರರು ಹಾಗೂ ಕರ್ನಾಟಕ
ಪಿಂಚಣಿ ರಹಿತವಾಗಿರುವ ಜಿಲ್ಲೆಯ ಮಾಜಿ ಸೈನಿಕರ ಮಕ್ಕಳಿಗೆ
ಪುಸ್ತಕ ಅನುದಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಗಳಲ್ಲಿ ಒಂದನೇ
ತರಗತಿಯಿಂದ ಅಂತಿಮ ವರ್ಷದ ಪದವಿ, ಡಿಪೆÇ್ಲೀಮಾ ಹಾಗೂ
ಬಿಇವರೆಗೆ ವ್ಯಾಸಂಗ ಮಾಡುತ್ತಿರುವ ರಾಜ್ಯದ ಮೂಲ ನಿವಾಸಿ ಮಿಲಿಟರಿ
ಪಿಂಚಣಿದಾರರ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ
ನೀಡಲಾಗುತಿದ್ದು, ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿದೆ
ಪಿಂಚಣಿ ಇಲ್ಲದ ರಾಜ್ಯದ ಮಾಜಿ ಸೈನಿಕರ ಮತ್ತು ರಾಜ್ಯದಲ್ಲಿ
ನೆಲೆಸಿರುವ ಹೊರ ರಾಜ್ಯದ ಪಿಂಚಣಿದಾರರ ಮಾಜಿ ಸೈನಿಕರ ಮಕ್ಕಳಿಗೆ
ಪುಸ್ತಕ ಅನುದಾನ ನೀಡಲಾಗುತ್ತಿದ್ದು, ಪುಸ್ತಕ ಅನುದಾನಕ್ಕಾಗಿ
ಅರ್ಜಿಗಳನ್ನು ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಮಾಜಿ ಸೈನಿಕರು ತಮ್ಮ ಗುರುತಿನ
ಚೀಟಿಯೊಂದಿಗೆ ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ
ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ- 08182 220925
ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ
ಇಲಾಖೆಯ ಪ್ರಭಾರ ಉಪ ನಿರ್ದೇಶಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.