ದಾವಣಗೆರೆ ಆ.21     
ಮುಖ್ಯ ಕಾರ್ಯನಿರ್ವಾಹಕಾ ಅಧಿಕಾರಿಗಳು ಕರ್ನಾಟಕ ರಾಜ್ಯ ಔಖಾಫ್
ಮಂಡಳಿ ಬೆಂಗಳೂರು ಇವರ ಆದೇಶದನ್ವಯ ದಾವಣಗೆರೆ
ನಗರದ ಜೆ. ಇಮಾಮ್ ನಗರದಲ್ಲಿರುವ ತಂಜೀಮುಲ್ ಮುಸ್ಲಿಮೀನ್
ಫಂಡ್ ಅಸೋಸಿಯೇಷನ್ ವಕ್ಫ್ ಸಂಸ್ಥೆಯನ್ನು ಕರ್ನಾಟಕ ರಾಜ್ಯ ವಕ್ಫ್
ಮಂಡಳಿಯ ನೇರ ಆಡಳಿತಕ್ಕೆ ಒಳಪಡಿಸಲಾಗಿದೆ.
 ದಾವಣಗೆರೆ ಜಿಲ್ಲೆಯ ಜಿಲ್ಲಾ ವಕ್ಫ್ ಅಧಿಕಾರಿಗಳಾದ ಸೈಯದ್ ಮೊಅಜಮ್
ಪಾಷ ಇವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕಮಾಡಿದ್ದು, ಎ.ಎ
ಖತೀಬ್, ಅಯುಬ್ ಪೈಲ್ವಾನ್, ಅಬ್ದುಲ್ ಘನಿ ತಾಹೇರ್ , ಎಂ.ಬಿ ಮೊಹಮ್ಮದ್
ಲಿಯಾಖತ್ ಅಲಿ ರಜ್ವಿ, ಆರೀಫ್ ಖಾನ್ ಈ ಐದು ಜನರನ್ನು ಸಲಹಾ ಸಮಿತಿಯ
ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರ ಸೈಯದ್
ಮೊಅಜಮ್ ಪಾಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *