ದಾವಣಗೆರೆ ಆ.24
ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷದಂತೆ 2019ನೇ
ವರ್ಷದ ಪುಸ್ತಕ ಬಹುಮಾನ ಯೋಜನೆಗಾಗಿ ಕೆಳಕಂಡ
ಪ್ರಕಾರಗಳ ಕನ್ನಡ ಪುಸ್ತಕಗಳನ್ನು ಸಲ್ಲಿಸಲು ಅರ್ಜಿ ಆಹ್ವಾನಿಸಿದೆ.
ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡುವ ಒಂದು
ಕೃತಿಗೆ ಬಹುಮಾನ ನೀಡಲಾಗುವುದು.
ಬಹುಮಾನಕ್ಕೆ ಸಲ್ಲಿಸುವ ಕೃತಿಗಳು 2019 ರ ಜನವರಿ 1 ರಿಂದ 2019 ರ
ಡಿಸೆಂಬರ್ 31 ರೊಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ
ಕೃತಿಯಾಗಿರಬೇಕು. ಕೃತಿಯಲ್ಲಿ ಪ್ರಥಮ ಮುದ್ರಣ 2019 ಎಂದು
ಮುದ್ರಿತವಾಗಿರಬೇಕು.
ಸಾಹಿತ್ಯ ಪ್ರಕಾರಗಳು : ಕಾವ್ಯ (ವಚನಗಳು ಮತ್ತು
ಹನಿಗವನಗಳು ಸೇರಿ) ನವಕವಿಗಳ ಪ್ರಥಮ ಕವನ ಸಂಕಲನ,
ಕಾವ್ಯ ಹಸ್ತಪ್ರತಿ-30 ವರ್ಷ ಒಳಗಿರುವ ಯುವ ಕವಿಗಳು ತಮ್ಮ
ಅಪ್ರಕಟಿತ ಪ್ರಥಮ ಸಂಕಲನದ ಹಸ್ತಪ್ರತಿಯನ್ನು
ಕಳುಹಿಸಿಕೊಡಬೇಕು. ಕಾದಂಬರಿ, ಸಣ್ಣಕತೆ, ನಾಟಕ, ಲಲಿತ
ಪ್ರಬಂಧ(ಹರಟೆ ಮತ್ತು ವಿನೋದ ಸಾಹಿತ್ಯ ಸೇರಿ), ಪ್ರವಾಸ ಸಾಹಿತ್ಯ,
ಜೀವನಚರಿತ್ರೆ/ಆತ್ಮಕಥೆ, ಸಾಹಿತ್ಯ ವಿಮರ್ಶೇ(ಸಾಹಿತ್ಯ ಚರಿತ್ರೆ, ಸಾಹಿತ್ಯ
ತತ್ವ ಮತ್ತು ಸೌಂದರ್ಯ ಮೀಮಾಂಸೆ ಸೇರಿ), ಗ್ರಂಥ ಸಂಪಾದನೆ
(ಪ್ರಾಚೀನ ಕೃತಿಗಳ ಸಂಪಾದನೆ), ಮಕ್ಕಳ ಸಾಹಿತ್ಯ, ವಿಜ್ಞಾನ
ಸಾಹಿತ್ಯ(ಭೌತ, ರಸಾಯನ, ಗಣಿತ, ಪ್ರಾಣಿ, ಸತ್ಯ, ಇಂಜಿನಿಯರಿಂಗ್,
ವೈದ್ಯ, ಭೂ, ಖಗೋಳ, ಗೃಹವಿಜ್ಞಾನ, ಪರಿಸರ), ಮಾನವಿಕ
(ಜಾನಪದ, ಇತಿಹಾಸ, ರಾಜಕೀಯ ಶಾಸ್ತ್ರ, ಸಮಾಜ ಶಾಸ್ತ್ರ, ಮಾನವ
ಶಾಸ್ತ್ರ, ಮನಃಶಾಸ್ತ್ರ, ಭಾಷಾಶಾಸ್ತ್ರ, ಶಿಕ್ಷಣ, ವಾಣಿಜ್ಯ, ಕಾನೂನು,
ಗ್ರಂಥಭಂಡಾರ, ವಿಜ್ಞಾನ, ಸಮೂಹ ಸಂವಹನ, ಧಾರ್ಮಿಕ,
ದಾರ್ಶನಿಕ), ಸಂಶೋಧನೆ(ಕನ್ನಡ ಭಾಷೆ ಸಾಹಿತ್ಯ ಮತ್ತು
ಸಂಸ್ಕøತಿಗಳಿಗೆ ಸಂಬಂಧಿಸಿದ ಸಂಶೋಧನೆ, ವೈಚಾರಿಕ/ಅಂಕಣ ಬರಹ,
ಅನುವಾದ-1(ಸೃಜನ/ಸೃಜನೇತರ) ಭಾರತೀಯ ಭಾಷೆಯಿಂದ
ಕನ್ನಡಕ್ಕೆ ಅನುವಾದಗೊಂಡ ಕೃತಿ, ಅನುವಾದ-2
(ಸೃಜನ/ಸೃಜನೇತರ) ಕನ್ನಡದಿಂದ ಅನ್ಯಭಾಷೆಗೆ ಅನುವಾದಗೊಂಡ
ಕೃತಿ, ಲೇಖಕರ ಮೊದಲ ಸ್ವತಂತ್ರ ಕೃತಿಗೆ ಬಹುಮಾನ,
ಕನ್ನಡದಿಂದ ಇಂಗ್ಲಿಷಿಗೆ ಅನುವಾದ, ದಾಸ ಸಾಹಿತ್ಯಕ್ಕೆ ಸಬಂಧಿಸಿದ
ಸೃಜನ/ಸೃಜನೇತರ ಕೃತಿ.
ಮರು ಮುದ್ರಣವಾದ ಪುಸ್ತಕಗಳಾಗಿರಬಾರದು. ಪಿಹೆಚ್‍ಡಿ ಪದವಿಗಾಗಿ
ಸಿದ್ದಪಡಿಸಿದ ಸಂಶೋಧನಾ ಗ್ರಂಥವಾಗಿರಬಾರದು.
ಪಠ್ಯಪುಸ್ತಕಗಳಾಗಿರಬಾರದು. ಅಕಾಡೆಮಿಯ ಗೌರವ ಪ್ರಶಸ್ತಿ
ಪುರಸ್ಕøತ ಸಾಹಿತಿಗಳ ಕೃತಿಗಳಾಗಿರಬಾರದು. ಒಬ್ಬ ಲೇಖಕನಿಗೆ
ಮೂರು ಬಾರಿ ಬೇರೆ ಬೇರೆ ಪ್ರಕಾರಗಳಲ್ಲಿ ಬಹುಮಾನ ಪಡೆಯುವ
ಅವಕಾಶ ಇದೆ.

Leave a Reply

Your email address will not be published. Required fields are marked *