ದಾವಣಗೆರೆ ಆ.25
ಕೇಂದ್ರ ಸರ್ಕಾರವು ಗ್ರಾಹಕರ ಸಂರಕ್ಷಣಾ ಕಾಯ್ದೆ
1986(ಕೇಂದ್ರ ಕಾಯ್ದೆ ಸಂಖ್ಯೆ 68/1986)ನ್ನು ಹಿಂತೆಗೆದುಕೊಂಡು
ಗ್ರಾಹಕರ ಸಂರಕ್ಷಣಾ ಕಾಯ್ದೆ-2019 ಮತ್ತು ಅದಕ್ಕೆ ಸಂಬಂಧಿಸಿದ
ಗ್ರಾಹಕರ ಸಂರಕ್ಷಣಾ (ಗ್ರಾಹಕರ ವ್ಯಾಜ್ಯಗಳ ಪರಿಹಾರ
ಆಯೋಗಗಳು) ನಿಯಮಗಳು 2020 ಗಳನ್ನು ಜುಲೈ 20 ರಿಂದ
ಕಾರ್ಯರೂಪಕ್ಕೆ ಬರುವಂತೆ ಜಾರಿಗೆ ತಂದಿರುತ್ತದೆ.
ತತ್ಸಂಬಂಧದ ನಿಯಮಾನುಸಾರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ
ಪರಿಹಾರ ವೇದಿಕೆಯನ್ನು ಜುಲೈ 20 ರಿಂದ ಜಾರಿಗೆ ಬರುವಂತೆ ಜಿಲ್ಲಾ
ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವೆಂದು
ಮರುನಾಮಕರಣ ಮಾಡಲಾಗಿದೆ. ಈ ಕಾಯ್ದೆಯನುಸಾರವಾಗಿ ರೂ.20
ಲಕ್ಷದವರೆಗಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯದ ಮಿತಿಯನ್ನು ರೂ.1
ಕೋಟಿಯವರೆಗೆ ವಿಸ್ತರಿಸಲಾಗಿದ್ದು, ಅದರನ್ವಯ ಗ್ರಾಹಕರ
ವ್ಯಾಜ್ಯಗಳನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ
ದಾಖಲಿಸಬಹುದಾಗಿರುತ್ತದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ
ವೇದಿಕೆಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.