ದಾವಣಗೆರೆ ಆ.26
    ವಸತಿ ಶಾಲೆಗಳಿಗೆ 6 ನೇ ತರಗತಿಯ ಪ್ರವೇಶಕ್ಕಾಗಿ
ಹೊರಡಿಸಲಾಗಿದ್ದ ಆನ್‍ಲೈನ್ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಸೆ.5
ರವರೆಗೆ ವಿಸ್ತರಿಸಲಾಗಿದೆ.
    2020-21 ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ
ಸಂಘ, ಬೆಂಗಳೂರು ಇದರ ವ್ಯಾಪ್ತಿಯಲ್ಲಿ ಕಾರ್ಯ
ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ಕಿತ್ತೂರು ರಾಣಿ ಚೆನ್ನಮ್ಮ,
ಇಂದಿರಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಪರಿಶಿಷ್ಟ ಜಾತಿ/ಪಂಗಡ ವರ್ಗದ
ಪ್ರತಿಭಾನ್ವಿತ ವಸತಿ ಶಾಲೆ, ಮಾಯಕೊಂಡ ವಸತಿ ಶಾಲೆಗಳಿಗೆ
ಪ್ರವೇಶಕ್ಕೆ ಆ.25 ಕೊನೆಯ ದಿನವೆಂದು ನಿಗದಿಪಡಿಸಲಾಗಿತ್ತು. ಆದರೆ
ಅಭ್ಯರ್ಥಿಗಳು ಹಾಗೂ ಪೋಷಕರ ಹಿತದೃಷ್ಟಿಯಿಂದ ದಿನಾಂಕ
ವಿಸ್ತರಣೆ ಮಾಡಲಾಗಿದೆ.
    5ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು
ಸಮೀಪದ ವಸತಿ ಶಾಲೆಗಳಲ್ಲಿ (ಕ್ವಾರಂಟೈನ್ ಸೆಂಟರ್/ಕೋವಿಡ್ ಕೇರ್
ಸೆಂಟರ್ ಹೊರತುಪಡಿಸಿ) ಜಾತಿ ಮತ್ತು ಆದಾಯ ಪ್ರಮಾಣ ಪತ್ರದ
ಜೆರಾಕ್ಸ್ ಪ್ರತಿ, 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ಶಾಲಾ
ದೃಢೀಕÀರಣ ಪತ್ರ, ಶಾಲಾ ಎಸ್‍ಟಿಎಸ್ ನಂಬರ್ ಹಾಗೂ ವಿದ್ಯಾರ್ಥಿಯ

ಮತ್ತು ತಂದೆಯ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿ
ಸಲ್ಲಿಸಬಹುದು.
   ಹೆಚ್ಚಿನ ಮಾಹಿತಿಗೆ hಣಣಠಿ://ಞeಚಿ.ಞಚಿಡಿ.ಟಿiಛಿ.iಟಿ ಮತ್ತು ವಸತಿ ಶಿಕ್ಷಣ
ಸಂಸ್ಥೆಗಳ ವೆಬ್‍ಸೈಟ್: hಣಣಠಿ://ಞಡಿeis.ಞಚಿಡಿ.ಟಿiಛಿ.iಟಿ  ಸಂಪರ್ಕಿಸಬಹುದೆಂದು
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *