ದಾವಣಗೆರೆ ಆ.27
ಭಾರತೀಯ ಅಂಚೆ ಇಲಾಖೆಯು ಶಿಕ್ಷಕರ ದಿನಾಚರಣೆ(ಸೆಪ್ಟೆಂಬರ್ 5)
ಅಂಗವಾಗಿ ಶಿಕ್ಷಕರಿಗೆ ಅಂಚೆ ಮೂಲಕ ಉಡುಗೊರೆಗಳನ್ನು ನೀಡುವ
ವಿಶೇಷ ಗುರುವಂದನೆ ಯೋಜನೆ ಆರಂಭಿಸಿದೆ.

ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ
ಸಂಪತ್ ಈ ಯೋಜನೆಗೆ ಇಂದು ಚಾಲನೆಯನ್ನು ನೀಡಿದರು.
ಕೋವಿಡ್ ಹಿನ್ನಲೆಯಲ್ಲಿ ಶಾಲಾ, ಕಾಲೇಜುಗಳು ನಡೆಯುತ್ತಿಲ್ಲ.
ಹೀಗಾಗಿ ಅಂಚೆ ಮೂಲಕ ತಮ್ಮ ಪ್ರೀತಿಯ ಶಿಕ್ಷಕರಿಗೆ ಉಡುಗೊರೆ
ಕೊಡಲು ಅನುಕೂಲವಾಗುವಂತೆ ಈ ವಿಶೇಷ ಸೇವೆಯನ್ನು
ಪರಿಚಯಿಸಲಾಗಿದೆ ಎಂದು ಚಿತ್ರದುರ್ಗ ವಿಭಾಗದ ಅಂಚೆ
ಅಧೀಕ್ಷಕರಾದ ವಿರೂಪಾಕ್ಷಪ್ಪ ರವರು ಹೇಳಿದರು.
ಉಡುಗೊರೆಗಳಾದ ಆಕರ್ಷಕ ಖಾದಿ ಮಾಸ್ಕ್‍ಗಳು, ತುದಿಯಲ್ಲಿ
ಹೂವು ಅಥವಾ ಹಣ್ಣು ಹೊಂದಿರುವ ಆಕರ್ಷಕ ಪೆನ್ಸಿಲ್‍ಗಳು ಇದ್ದು
ಇದರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿ ಕಳುಹಿಸಬಹುದು. ಪ್ರತಿ
ಉಡುಗೊರೆಗೆ ರೂ.100/-ದರ ನಿಗದಿಪಡಿಸಲಾಗಿದೆ. ಈ ಸೇವೆಯು ಸೆ.01
ರವರೆಗೆ ಇರುತ್ತದೆ.
ಇಲಾಖೆಯ ವೆಬ್‍ಸೈಟ್ hಣಣಠಿ://ಞಚಿಡಿಟಿಚಿಣಚಿಞಚಿ ಠಿosಣ.gov.iಟಿ/
guಡಿuvಚಿಟಿಜಚಿಟಿಚಿ/ಖegisಣeಡಿ.ಚಿsಠಿx ಕ್ಲಿಕ್ ಮಾಡಬೇಕು. ಅಲ್ಲಿ ಖರೀದಿಸುವವರ ವಿವರ,
ಉಡುಗೊರೆಗಳನ್ನು ಆಯ್ಕೆ ಮಾಡಿ ಮತ್ತು ಶಿಕ್ಷಕರ
ವಿಳಾಸವನ್ನು ಪೂರ್ತಿಯಾಗಿ ತುಂಬಬೇಕು. ದೇಶದಾದ್ಯಂತ ಯಾವ
ಭಾಗಕ್ಕಾದರೂ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ:
9986038721 ನ್ನು ಸಂಪರ್ಕಿಸಬಹುದೆಂದು ಚಿತ್ರದುರ್ಗ ವಿಭಾಗದ ಅಂಚೆ
ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *